ಭಕ್ತಿ ಭಾವದಿಂದ ಜರುಗಿದ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ

ತಾಳಿಕೋಟೆ:ಸೆ.1: ಪಟ್ಟಣದ ಶ್ರೀ ಗುರುರಾಜ ಭಜನಾ ಮಂಡಳಿಯವರ ವತಿಯಿಂದ ಪ್ರತಿವರ್ಷದಂತೆ ಈ ಸಲುವು ಗುರುವಾರರಂದು ಶ್ರೀ ನಗರೇಶ್ವರ ದೇವಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳವರ 49ನೇ ಆರಾಧನಾ ಮಹೋತ್ಸವವು ಭಕ್ತಿಭಾವದೊಂದಿಗೆ ಜರುಗಿತು.

ಗುರುವಾರರಂದು ಪೂರ್ವಾರಾಧನೆ ನಿಮಿತ್ಯ ನಸುಕಿನ ಜಾವ 5 ಗಂಟೆಯಿಂದ 6 ಗಂಟೆಯವರೆಗೆ ಸುಪ್ರಭಾತ, 7 ಗಂಟೆಯಿಂದ 8 ಗಂಟೆಯವರೆಗೆ ಶ್ರೀ ನಗರೇಶ್ವರ ರುದ್ರಾಭಿಷೇಕ, ಅಲಂಕಾರ ಅರ್ಚನೆ ಜರುಗಿತು. 8 ಗಂಟೆಯಿಂದ 10 ಗಂಟೆಯವರೆಗೆ ಶ್ರೀ ಗುರುರಾಯರ ಅಷ್ಟೋತ್ತರ ನವಗ್ರಹ ಹೋಮ, ಮಧ್ಯಾಹ್ನ 1 ಗಂಟೆಯಿಂದ ಕನಕಾಭಿಷೇಕ, ತುಳಸಿ ಅರ್ಚನೆ, ಹಸ್ತೋದಕ, ಮಹಾಂಗಳಾರತಿ, ತೀರ್ಥ, ಪ್ರಸಾದ, ಸಂಜೆ 7 ಗಂಟೆಯಿಂದ ತಾರತಮ್ಯ ಭಜನೆಯೊಂದಿಗೆ ಫಲ್ಲಕ್ಕಿ ಸೇವೆ ಮಂತ್ರಪುಷ್ಪ ಜರುಗಿತು.

ಈ ಪೂಜಾ ಕಾರ್ಯಕ್ರಮವನ್ನು ವೇ.ಶ್ರೀಧರಬಟ್ ಜೋಶಿ, ವೇ.ರಮೇಶ ಅಚಾರ್ಯ, ವೇ.ಶ್ರೀಧರಾಚಾರ್ಯ, ವೇ.ವೆಂಕಣ್ಣಾಚಾರ್ಯ, ವೇ.ಸಂಜೀವಾಚಾರ್ಯ ಗ್ರಾಮಪುರೋಹಿತ, ವೇ.ಗುಂಡಬಟ್ ಜೋಶಿ, ವೇ.ಪ್ರಭಾಕರಾಚಾರ್ಯ ಜೋಶಿ, ಅಕ್ಷಯ ಜೋಶಿ, ಅಭಿಷೇಕ ಜೋಶಿ, ಪ್ರತಿಕ್ಷಾ ಜೋಶಿ, ಜಯತೀರ್ಥ ಆಚಾರ್ಯ, ಲಿಂಗೋಜಿರಾವ್ ಕಾಮನಟಗಿ, ಶ್ರೀನಿವಾಸ ಆಚಾರ್ಯ ಜೋಶಿ, ಮೊದಲಾದವರು ನೆರವೇರಿಸಿದರು.

ಈ ಸಮಯದಲ್ಲಿ ಮುಖಂಡರುಗಳಾದ ವಾಸುದೇವ ಹೆಬಸೂರ, ದತ್ತಾತ್ರೇಯ ಹೆಬಸೂರ, ಕೃಷ್ಣಾ ಮಾನ್ವಿ, ಡಾ.ಎಲ್.ಎನ್.ಶೆಟ್ಟಿ, ಅರುಣ ಕನಕಗಿರಿ, ವಾಸುದೇವ ಮಾನ್ವಿ, ಬದರಿನಾಥ, ಯಂಕಣ್ಣ ತಾಳಪಲ್ಲೆ, ರವಿ ತಾಳಪಲ್ಲೆ, ಸತ್ಯನಾರಾಯಣ ತಾಳಪಲ್ಲೆ, ಭೀಮ ಅಗಡಿ, ಹಣಮಂತ ಮಾನ್ವಿ, ಪ್ರಲ್ಹಾದ ಮಾನ್ವಿ, ಮಂಜು ಶೆಟ್ಟಿ, ವಾಸು ಮಾನ್ವಿ, ಶ್ರೀಗುರು ಮಾನ್ವಿ, ಗುರುರಾಜ ತಾಳಪಲ್ಲೆ, ವಿಧ್ಯಾಧರ ಗೊಟಗುಣಕಿ, ಕೃಷ್ಣಾ ತಾಳಪಲ್ಲೆ, ವೇಂಕಟೇಶ ತಾಳಪಲ್ಲೆ, ವೆಂಕಯ್ಯ ತಾಳಪಲ್ಲೆ, ಅಶೋಕ ಶೆಟ್ಟಿ, ಕೃಷ್ಣಾ ಶೆಟ್ಟಿ, ಶ್ರೀಕಾಂತ ಶೆಟ್ಟಿ, ಗೋವಿಂದ ಶೆಟ್ಟಿ, ಸತ್ಯನಾರಾಯಣ ಕನಕಗಿರಿ, ಪ್ರಶಾಂತ ಜನಾದ್ರಿ, ರಾಘವೇಂದ್ರ ತಾಳಪಲ್ಲೆ, ಮೊದಲಾದವರು ಪಾಲ್ಗೊಂಡಿದ್ದರು.