(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.03: ಗುರು ಪೂರ್ಣಿಮೆ ಅಂಗವಾಗಿ ಇಂದು ನಗರದ ಸಾಯಿ ಬಾಬಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ, ರಕ್ತದಾನ ಶಿಬಿರ ನಡೆಯಿತು.
ವಿಶಾಲನಗರದಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸಕಲ ರೀತಿಯ ವ್ಯವಸ್ಥೆ ಮಾಡಿತ್ತು. ಆದರೆ ಈ ಮೊದಲಿನಂತೆ ಭಕ್ತ ಸಮೂಹ ಕಂಡು ಬರಲಿಲ್ಲ.
ಇನ್ನು ಪಟೇಲ್ ನಗರ, ಕೋಟೆ ಪ್ರದೇಶದ ಸಾಯಿ ಬಾಬಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿತರಣೆ ನಡೆದಿತ್ತು.
ಜನತೆ ತಾವು ತಂದ ಪ್ರಸಾದವನ್ನೂ ದೇವಸ್ಥಾನಗಳಿಗೆ ಬಂದ ಭಕ್ತರಿಗೆ ಹಂಚಿದ್ದು ಕಂಡು ಬಂತು.