ಭಕ್ತಿ ಇದ್ದಲ್ಲಿ ದೇವರಿರುತ್ತಾನೆ ಎಂಬುದನ್ನು ತೋರಿಸಿಕೊಟ್ಟವರು ಕನಕದಾಸರು:ಶಾಸಕ ಬಂಡೆಪ್ಪ ಖಾಶೆಂಪೂರ

ಬೀದರ ನ.12: ಭಕ್ತಿ ಎಲ್ಲಿರುತ್ತದೆಯೋ ಅಲ್ಲಿ ದೇವರು ಇರುತ್ತಾನೆ ಎಂಬುದನ್ನು ಕನಕದಾಸರು ತೋರಿಸಿಕೊಟ್ಟಿದ್ದಾರೆ. ಅವರು ತಮ್ಮ ಕೀರ್ತನೆ ಮೂಲಕ ಶ್ರೀಕೃಷ್ಣನ ದರ್ಶನ ಪಡೆದುಕೊಂಡವರಾಗಿದ್ದಾರೆಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪೂರ ಹೇಳಿದರು.
ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬೀದರ ನಗರದ ಪೂಜ್ಯ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಭಕ್ತ ಶ್ರೇಷ್ಠ ಕನಕದಾಸರ 535ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು.
ಮಾನವರಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದೇ ಜನ್ಮ ಇರುತ್ತೆ. ಬುದ್ಧ, ಬಸವ, ಕನಕ, ಅಂಬೇಡ್ಕರ್ ಓನಕೆ ಓಬವ್ವ, ಅಂಬಿಗರ ಚೌಡಯ್ಯ, ವಾಲ್ಮೀಕಿಯವರಂತ ಮಹಾತ್ಮರ ಜಯಂತಿಗಳನ್ನು ನಾವು ಆಚರಿಸಿಕೊಂಡು ಬರುತ್ತಿದ್ದೇವೆ. ಆ ಮೂಲಕ ನಾವು ಅವರ ಆದರ್ಶ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದು ಹೇಳಿದರು.
ಕನಕದಾಸರು 72 ಹಳ್ಳಿಗಳ ಪಾಳೇಗಾರಾಗಿದ್ದರು. ಅವರ ತಂದೆಯವರಿಗೆ ಮಕ್ಕಳು ಆಗದಿದ್ದಾಗ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ತಿಮ್ಮಪ್ಪ ನಾಯಕ ಎಂಬ ಮಗನನ್ನು ಪಡೆದುಕೊಳ್ಳುತ್ತಾರೆ. ತಿಮ್ಮಪ್ಪ ನಾಯಕರ ಆಳ್ವಿಕೆಯ ಕಾಲದಲ್ಲಿ ಪಾಯ ತೆಗೆಯುವಾಗ ಅವರಿಗೆ ಏಳು ರಂಜಟಿಗಿ ಬಂಗಾರ ಸಿಗುತ್ತದೆ. ಅವರು ಅದನ್ನು ರಾಜರಿಗೆ ಕೊಟ್ಟು ಅದನ್ನು ಜನರ ಒಳಿತಿಗಾಗಿ ಬಳಕೆ ಮಾಡಿ ಎಂದು ಹೇಳುತ್ತಾರೆ. ಅಲ್ಲಿಂದ ತಿಮ್ಮಪ್ಪ ನಾಯಕರು ಕನಕದಾಸರಾಗುತ್ತಾರೆ ಎಂದು ಹೇಳಿದರು.
ನಾವೆಲ್ಲರೂ ದೇವರನ್ನು ಪೂಜಿಸಲು ದೇವಸ್ಥಾನಕ್ಕೆ ಹೋಗುತ್ತೇವೆ. ಅದರಂತೆ ಅಂದಿನ ದಿನಗಳಲ್ಲಿ ಕನಕದಾಸರು ಗೊಂಗಡಿ ಹಾಕಿಕೊಂಡು ಉಡುಪಿಯ ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗಿರುತ್ತಾರೆ. ಆದರೆ ಸಂಬಂಧಿಸಿದವರು ಅವರನ್ನು ದೇವಸ್ಥಾನದ ಒಳಗಡೆ ಬಿಡುವುದಿಲ್ಲ. ಕನಕದಾಸರು ಅದರಿಂದ ಕಂಗೆಡದೆ ಕೀರ್ತನೆಗಳನ್ನು ಹಾಡುವ ಮೂಲಕ ಶ್ರೀಕೃಷ್ಣನ ದರ್ಶನ ಪಡೆದುಕೊಳ್ಳುತ್ತಾರೆ. ಶ್ರೀಕೃಷ್ಣನು ಕನಕನ ಕಿಂಡಿಯ ಮೂಲಕ ಅವರ ಭಕ್ತಿಗೆ ಒಲಿದು ಕನಕದಾಸರಿಗೆ ದರ್ಶನ ನೀಡುತ್ತಾರೆ ಎಂಬ ಇತಿಹಾಸವನ್ನು ಅವರು ಹೇಳಿದರು.

ಬೊಮ್ಮಗೊಂಡೇಶ್ವರ ಇತಿಹಾಸವು ಮಹತ್ವದ್ದಾಗಿದೆ. ಬೀದರ ಕೋಟೆಯ ಆವರಣದಲ್ಲಿ ಅವರ ಹೆಸರಿನಲ್ಲಿ ಒಂದು ಕೆರೆ ಇದೆ. ಅವರು ಕಷ್ಟದ ಸಂದರ್ಭದಲ್ಲಿ ನೀರು ದೊರಕಿಸಿಕೊಟ್ಟವರಾಗಿದ್ದಾರೆ. ತಮಗಾಗಿ ಏನನ್ನೂ ಬೇಡಿದವರಲ್ಲ ಸಮಾಜದ ಒಳಿತಿಗಾಗಿ ಶ್ರಮಿಸಿದ್ದಾರೆ. ಮಹಾತ್ಮರು ಒಂದೇ ಜನ್ಮದಲ್ಲಿ ಮನುಕುಲಕ್ಕೆ ಒಳಿತು ಮಾಡಿದ್ದಾರೆ. ಹಾಗಾಗಿ ನಾವು ಮಹಾತ್ಮರ ಜಯಂತಿ ಆಚರಣೆ ಮಾಡುತ್ತೇವೆ. ಅಷ್ಟೇ ಅಲ್ಲದೇ ಅವರ ಮೂರ್ತಿಗಳನ್ನು ಸ್ಥಾಪಿಸುತ್ತೇವೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೀದರ ಉತ್ತರ ಕ್ಷೇತ್ರದ ಶಾಸಕರಾಗಿರುವ ರಹಿಂಖಾನ ಅವರು ಮಾತನಾಡಿ ಈ ಮುಂಚೆ ಗೊಂಡ ಸಮಾಜ ಬಹಳಷ್ಟು ಹಿಂದುಳಿದಿತ್ತು. ಇತ್ತಿಚೆಗೆ ಅಭಿವೃದ್ಧಿ ಕಡೆಗೆ ಸಾಗುತ್ತಿದೆ. ಅದರಂತೆ ಎಲ್ಲರೂ ಇಂತಹ ಮಹಾತ್ಮರ ತತ್ವ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವೇಲ್ಲರೂ ಅಭಿವೃದ್ಧಿ ಕಡೆಗೆ ಸಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಪೆÇ್ರ. ಚನ್ನಪ್ಪ ಕಟ್ಟಿಮನೆ ಅವರು ಮಾತನಾಡಿ ಅವರು ಬದುಕಿದಾಗ ತಮ್ಮ ಬದುಕಿನ ಮೂಲಕ ಬಿಟ್ಟು ಹೋಗಿರುವ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಮಹಾತ್ಮರ ಜಯಂತಿ ಆಚರಿಸುತ್ತೇವೆ. ಆ ಮೂಲಕ ನಮ್ಮ ಬದುಕಿನಲ್ಲಿ ಮಹಾತ್ಮರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕು ಎಂದು ಹೇಳಿದರು.
ಅದೇ ರೀತಿ ಈ ಕಾರ್ಯಕ್ರಮದಲ್ಲಿ ಗೊಂಡ ಸಮಾಜದ ಮುಖಂಡರಾದ ಬಾಬುರಾರ್ ಮಲ್ಕಾಪೂರೆ, ಅಮೃತರಾವ್ ಚಿಮ್ಕೊಡ್, ಸಂತೋಷ ಜೋಳದಪಗೆ ಸೇರಿದಂತೆ ಅನೇಕರು ಕನಕದಾಸರ ಕುರಿತು ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ವಿವಿಧ ಕಲಾ ತಂಡಗಳೊಂದಿಗೆ ಕನಕದಾಸರ ಭಾವಚಿತ್ರ ಮೆರವಣಿಗೆಯು ಮಹಾತ್ಮ ಬೊಮ್ಮಗೊಂಡೆಶ್ವರ ವೃತ್ತದಿಂದ ವಿಶ್ವಗುರು ಬಸವೇಶ್ವರ ವೃತ್ತ, ಭಗತಸಿಂಗ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತದಿಂದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ ಬಾಬು, ಬಾಬುರಾವ ಮಲ್ಕಾಪೂರೆ, ಅಮೃತರಾವ ಚಿಮ್ಕೊಡೆ, ಮಲ್ಲಿಕಾರ್ಜುನ ಬಿರಾದಾರ, ಪಂಡಿತರಾವ ಚಿದ್ರಿ, ಬೀರಪ್ಪ ಯರನಳ್ಳಿ, ಬಸವರಾಜ ಮುಲ್ಗೆ, ಪಂಡಿತರಾವ ಚಿದ್ರಿ, ಎಮ್.ಎಸ್ ಕಟಗಿ, ಸಂತೋಷ ಜೋಳದಪಗೆ, ರಾಜರಾಮ ಚಿಟ್ಟಾ, ರಾಜು ಕಡ್ಯಾಳ, ಹಣಮಂತಪ್ಪ ಮಲ್ಕಾಪೂರೆ, ಲೋಕೇಶ ಮರ್ಜಾಪೂರ, ತುಕ್ಕಾರಾಮ ಚಿಮ್ಕೊಡೆ, ಸಂಗಮೇಶ ಚಿದ್ರಿ, ನಾರಾಯಣ ಗಣೇಶ, ವಿಜಯಕುಮಾರ ಸೋನಾರೆ ಹಾಗೂ ಕನಕದಾಸ ಸಮುದಾಯದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.