ಭಕ್ತಿಯ ಮುಂದೆ ಯಾವುದೂ ದೂರ ಇಲ್ಲಾ- ಚುಕ್ಕಿ ಸೂಗಪ್ಪ ಸಾಹುಕಾರ

ಧರ್ಮಸ್ಥಳಕ್ಕೆ ತೆರಳಿದ ಪಾದಯಾತ್ರಿಗಳಿಗೆ ಸನ್ಮಾನ
ಸಿರವಾರ.ನ.೧೯- ನಮ್ಮ ಭಾಗದಿಂದ ದಕ್ಷಿಣ ಭಾಗದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ವಾಹನದಲ್ಲಿ ಹೋಗಿ ಬರುವವರೆ ಹೆಚ್ಚು ಆದರೆ ನಮ್ಮೂರಿನ ಭಕ್ತರ ತಂಡ ಸಿರವಾರದಿಂದ ಕೇವಲ ೧೫ ದಿನಗಳಲ್ಲಿ ಪಾದಯಾತ್ರೆಯ ಮೂಲಕ ತೆರಳಿ ಭಕ್ತಿಯ ಮುಂದೆ ಎಲ್ಲಾವೂ ಸಾದ್ಯ ಎಂದು ತೊರಿಸಿಕೊಟ್ಟಿದ್ದಾರೆ ಎಂದು ವಾಣಿಜ್ಯೋದ್ಯಮಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸಿರವಾರ ಪಟ್ಟಣದ ೧೦ ಜನರ ತಂಡವು ಸಿರವಾರದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಧರ್ಶನ ಪಡೆದು ಮರಳಿ ಆಗಮಿಸಿದ ಹಿನ್ನೆಲೆಯಲ್ಲಿ ಚುಕ್ಕಿ ತೇಜಸ್ ಮಹಲ್ ನಲ್ಲಿ ಸನ್ಮಾನಿಸಲಾಯಿತು.ಈ ಭಾಗದ ಭಕ್ತರು ಹೆಚ್ಚಾಗಿ ಶ್ರೀಶೈಲಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಾರೆ, ಇಲಿಯವರೆಗೂ ಯಾರೂ ಸಹ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳಿದವರು ಯಾರೂ ಇಲಾ ಈ ತಂಡವೆ ಪ್ರಥಮ. ಭಕ್ತಿ ಇದರೆ ಎಲ್ಲಾವೂ ಸಾದ್ಯ ಎಂದು ತೊರಿಸಿಕೊಟ್ಟಿದ್ದಾರೆ ಎಂದರು. ಕಾಂಗ್ರೇಸ್ ಯುವ ಮುಖಂಡ ಎನ್.ಚಂದ್ರಶೇಖರ್ ಮಾತನಾಡಿ ನಾವು ಪ್ರಾರಂಭದಲ್ಲಿ ೨೦ ದಿನಗಳಲ್ಲಿ ಮುಟ್ಟುವ ಗುರಿ ಹೊಂದಲಾಗಿತು.
ಆದರೆ ೧೫ ದಿನಗಳ ಒಳಗಾಗಿ ತಲುಪಿದೆವು. ಮಾರ್ಗ ಮದ್ಯದಲ್ಲಿ ಇಟಗಿ ಹತ್ತಿರ ಶ್ವಾನ ನಮ್ಮ ಜೊತೆಗೆ ಧರ್ಮಸ್ಥಳದವರೆಗೂ ಆಗಮಿಸಿ ನಮ್ಮೊಡನೆ ಪಟ್ಟಣಕ್ಕೆ ಆಗಮಿಸಿದೆ. ಶ್ವಾನದಲ್ಲಿ ಮಂಜುನಾಥನನ್ನು ಕಂಡೆವು ಎಂದರು. ಪಾದಯಾತ್ರೆಯ ತಂಡದಲ್ಲಿ ಸೂಗಪ್ಪ ಹೂಗಾರ, ಮಲ್ಲಮ್ಮ ವೆಂಕಟ ಲಕ್ಷ್ಮಿ, ನಿವೃತ್ತ ಯೋಧ ವಿಜಯೇಂದ್ರ,ಶರಣಬಸವ,ರಡ್ಡೆಪ್ಪ,ಸೇರಿದಂತೆ ಇನ್ನಿತರರು ಇದರು. ಚುಕ್ಕಿ ಉಮಾಪತಿ, ಪ.ಪಂ ಸದಸ್ಯ ವೈ.ಭೂಪನಗೌಡ, ಜಿ.ವಿರೇಶ,ಮಲ್ಲಿಕಾರ್ಜುನ ಹೂಗಾರ,ನಾಗಪ್ಪ ನವಲಕಲ್, ಪ್ರಭು ಇಂಗಳಿಗಿ, ಮಲ್ಲಪ್ಪ,ರವಿರಾಜಕಳಸ, ರಂಗನಾಥ ಭೊವಿ, ಅಂಬುನಾಯಕ,ಅಮರೇಶ ಸೇರಿದಂತೆ ಇನ್ನಿತರರು ಇದರು.