ಭಕ್ತಿಯ ಮುಂದೆ ಕೋರೊನಾ ದೂರ

ಹನುಮೇಶ.ಸಿರವಾರ
ಸಿರವಾರ.ಏ೪- ಕೊರೋನಾ ರೋಗದ ಭೀತಿಯಲ್ಲಿರುವಂತಹ ಸಂದರ್ಭದಲ್ಲಿಯೂ ಸಹ ಸಾರ್ವಜನಿಕರು ಶ್ರೀಶೈಲಾಕ್ಕೆ ತೆರಳುವ ಪಾದಯಾತ್ರಿಗಳಿಗೆ ಅನ್ನ,ನೀರು, ಹಣ್ಣು ಮತ್ತು ತಂಪು ಪಾನೀಯಗಳನ್ನು ನೀಡುವ ಮೂಲಕ ಭಕ್ತಿಯ ಮುಂದೆ ಕೊರೋನ್ ಮಾರು ದೂರ ಓಡಿಸುವ ಮೂಲಕ ಮಾನವಿಯತೆ ಮೆರೆಯುತ್ತಿದ್ದಾರೆ.
ಹೌದು ಯುಗಾದಿ ಹಬ್ಬ ಸಮೀಪಿಸುತ್ತಿರುವಂತೆ ಬಾಲಗಕೋಟೆ, ಬೆಳಗಾವಿ, ಬಿಜಾಪೂರ ಸೇರಿದಂತೆ ಬೇರೆ ಬೇರೆ ಜಿಲ್ಲೆಯಿಂದ ಹಾಗೂ ನಮ್ಮ ಜಿಲ್ಲೆಯ ನಾನಾ ಭಾಗದಿಂದಲೂ ಸಹ ಸಿರವಾರ ಮಾರ್ಗವಾಗಿ ಶ್ರೀಶೈಲಾದ ಜಾತ್ರೆಯ ಅಂಗವಾಗಿ ಬಿಸಿಲನ್ನು ಲೇಕ್ಕಿಸದೆ ಕಳೇದ ಮೂರು ದಿನಗಳಿಂದ ಪ್ರತಿದಿನಾಲು ನೂರಾರು ಭಕ್ತರು ಪಾದಯಾತ್ರೆಯ ಮೂಲಕ ನಿತ್ಯ ತೆರಳುತ್ತಿದ್ಧಾರೆ. ದೂರದ ಪ್ರದೇಶದಿಂದ ತೆರಳುವವರಿಗೆ ಅನುಕೂಲವಾಗಲೇಂದು ಉಚಿತವಾಗಿ ಅನೇಕ ಕಡೆ ಅಹಾರವನ್ನು ನೀಡಲಾಗುತ್ತಿದೆ. ಸ್ವಲ್ಪ ದೂರ ಅಂತರದಲ್ಲಿ ನೀರು, ಹಣ್ಣು, ತಂಪು ಪಾನೀಯ, ಔಷಧಗಳನ್ನು ನೀಡುವ ಮೂಲಕ ಪಾದಯಾತ್ರಿಗಳಿಗೆ ತಮ್ಮ ಅಲ್ಪ ಪ್ರಮಾಣದ ಸೇವೆಯನ್ನು ಮಾಡುತ್ತಿದ್ದಾರೆ. ಭಕ್ತರಿಗಾಗಿ ಸರಕಾರಿ ಆಸ್ಪತ್ರೆಯ ವತಿಯಿಂದಲೂ ಸಹ ಉಚಿತವಾಗಿ ಮಾತ್ರೆ, ಔಷದ, ಮೂಲಾಮು ಸಹ ನೀಡಲಾಗುತ್ತಿದೆ. ನೀರಿನ ಸೌಕರ್ಯದ ಜೊತೆಗೆ ಸ್ವಲ್ಪ ಮಟ್ಟಿಗೆ ವಿಶ್ರಾಂತಿ ಮಾಡಿಕೊಳಲು ಸಹ ವ್ಯವಸ್ಥೇಯನ್ನು ಮಾಡಲಾಗಿದೆ.
ಸಿರವಾರ ವ್ಯಾಪ್ತಿಯ ಮಲ್ಲಟ, ನವಲಕಲ್, ಸಿರವಾರ ಪ್ರತಿಯೊಂದು ವೃತ್ತದಲ್ಲಿ ಈಶ್ವರ ದೇವಸ್ಥಾನ, ಪಟ್ಟಣದ ಹೊರವಲಯದಲ್ಲಿ, ಮುಂದೆ ಸಾಗಿದರೆ, ಜಕ್ಕಲದಿನ್ನಿ, ಅತ್ತನೂರು, ನೀಲಗಲ್ ಕ್ಯಾಂಪ್ ಹಾಗೂ ಮುಖ್ಯ ರಸ್ತೆಯಿಂದ ದೂರ ಇರುವ ಗ್ರಾಮಸ್ಥರು ಸಹ ಆಗಮಿಸಿ ತಮ್ಮ ತಮ್ಮ ಕೈಲಾದಷ್ಟು ಹಣ್ಣು, ನೀರು, ತಂಪು ಪಾನೀಯವನ್ನು ನೀಡುತ್ತಿದ್ದಾರೆ, ಆರ್ಥಿಕ ಸ್ಥಿತಿ ಚೆನ್ನಾಗಿದ್ದರೆ ಊಟದ ವ್ಯವಸ್ಥೇಯನ್ನು ಸಹ ಮಾಡುತ್ತಿದ್ದಾರೆ.
ಇದು ಕೇವಲ ಯುಗಾದಿ ಹಬ್ಬಕ್ಕೆ ತೆರಳುವ ಪಾದಯಾತ್ರಿಗಳಿಗೆ ಮಾತ್ರವಲ್ಲದೆ ಶಿವರಾತ್ರಿ ಅಂಗವಾಗಿ ತೆರಳುವವರಿಗೂ ಸಹ ಅನ್ನದಾಸೋಹವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಗ್ರಾಮ ಪಟ್ಟಣವಾಗಿ ಜನಸಂಖ್ಯೆ ಹೆಚ್ಚಾದಂತೆ ಪಾದಯಾತ್ರಿಕರು ಸಹ ಅನ್ನದಾಸೋಹ, ಸೇರಿದಂತೆ ಎಲ್ಲವನ್ನು ನೀಡುವವರು ಸಂಖ್ಯೆಯು ಕಡಿಮೆಯಾಗಿಲ್ಲ. ಎಲ್ಲಾ ಭಕ್ತರಿಗೆ ಇಲ್ಲೆ ನೀಡಿದರೆ ಮುಂದೆ ರಾಯಚೂರು, ಕರ್ನೂಲ್, ಸೇರಿದಂತೆ ಶ್ರೀಶೈಲಾಕ್ಕೆ ತೆರಳುವ ಮಾರ್ಗದಲ್ಲಿಯೂ ಹೋಗಿ ಅಹಾರ, ನೀರು, ಪಾನೀಯಗಳನ್ನು ನೀಡಿ ಬರುತ್ತಿದ್ದಾರೆ.
ಒಟ್ಟಿನಲ್ಲಿ ದೇವರ ಭಕ್ತಿಯ ಮುಂದೆ ಬರಗಾಲ ಇರಲಿ ಬಿಡಲ್ಲಿ ಸೇವೆ ಒಂದೇ ಮುಖ್ಯವಾಗಿರುವದರಿಂದ ಇವರ ಸೇವೆಗೆ ಮೆಚ್ಚಿ ದೇವರು ಉತ್ತಮ ಮಳೆಯನ್ನು ಕರುಣಿಸಿದ್ದರೆ ಬರಗಾಲ ಮಾರುದೂರ ಹೋಗುತ್ತದೆ.
ಆಸ್ಪತ್ರೆಯಿಂದ ಔಷಧಿ ವಿತರಣೆ: ರಾಯಚೂರು ರಸ್ತೆಯಲ್ಲಿರುವ ಶಾಂಭವಿ ಮಠದ ಆವರಣದಲ್ಲಿ ಊಟದ ವ್ಯವಸ್ಥೇಯನ್ನು ಮಾಡಲಾಗಿತು. ಅಲ್ಲಿಯೆ ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಾದಯಾತ್ರೆಗೆ ತೆರಳುವವರಿಗೆ ಔಷಧಿಗಳನ್ನು, ಆರೋಗ್ಯ ತಪಾಸಣೆ, ಕೊರೋನ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಮಹಿಳಾ ಹಾಗೂ ಪರುಷ ಆರೋಗ್ಯ ಸಹಾಯಕಿಯರನ್ನು ಸ್ಥಳದಲ್ಲಯೆ ಸೇವೆ ಮಾಡುತ್ತಿದ್ದಾರೆ.