ಭಕ್ತಿಯ ಭದ್ರಕೋಟೆ ತಾಳಿಕೋಟೆ:ಜಗದ್ಗುರು

ತಾಳಿಕೋಟೆ:ನ.12: ಕೇವಲ ಧರ್ಮವು ಒಂದು ಸಮೂದಾಯಕ್ಕೆ ಸೇರಿರದೇ ಭಾವೈಕ್ಯತೆಯ ಕಾರ್ಯ ಇಂದಿನದಾಗಿದೆ ಕಳೆದ 12 ದಿವಸಗಳ ಹಿಂದೆ ಈ ಪಾದಯಾತ್ರೆ ಕೈಕೊಂಡಿದ್ದರಲ್ಲಿ ಇಡೀ ತಾಳಿಕೋಟೆ ಭಾಗದ ಜನತೆಯನ್ನು ನೋಡಿದರೆ ತಾಳಿಕೋಟೆಯು ಭಕ್ತಿಯ ಭದ್ರಕೋಟೆ ಇದಾಗಿದೆ ಭಕ್ತರು ತೋರಿಸಿರುವ ಅವಿಸ್ಮರಣೆಯಂತೆ ಹೇಳಿದರೆ ಸಾಲದು ಎರಡು ಕಣ್ಣುಗಳಿಗೆ ಸಾಲದಂತೆ ಪಾದಯಾತ್ರೆಯನ್ನು ಸ್ವಾಗತಿಸಲಾಗಿದೆ ಎಂದು ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಜಗದ್ಗುರು ಮಹಾಸ್ವಾಮಿಗಳವರ ದ್ವಾದಶ ಪೀಠಾರೋಹಣ ಮಹೋತ್ಸವ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಗುರುವಾರರಂದು ತಾಳಿಕೋಟೆಯ ರಾಜವಾಡೆಯಲ್ಲಿ ಯಡಿಯೂರದಿಂದ ಆರಂಭಗೊಂಡ ಪಾದಯಾತ್ರೆಯೊಂದಿಗೆ ಆಗಮಿಸಿ ಪಟ್ಟಣದಲ್ಲಿ ಏರ್ಪಡಿಸಲಾದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು ವೀರಶೈವ ಪಂಪರೆಯ ದಾಸೋಹದ ನೆತ್ತಿ ಬುತ್ತಿಯನ್ನು ಹೊತ್ತು ನಡೆಯುತ್ತಾ ಬಂದ ಮಾತೆಯರಿಂದ ತಿಳಿದುಬಂದಿದ್ದು ನಮ್ಮ ಹಿಂದಿನ ಪರಂಪರೆಯು ಇನ್ನೂ ಜಾಗೃತಿಯಲ್ಲಿದೆ ಎಂದು ಎನಿಸುತ್ತದೆ ಎಂದರು. ಒಳ್ಳೆಯ ಮಾದರಿಯ ಪಾದಯಾತ್ರೆ ವಿಶಿಷ್ಠವಾದ ಸಣ್ಣಮಕ್ಕಳಿಂದ ಜಾಗೃತಿ ಮೂಡಿಸಿರುವದು ಸಂತಸ ತಂದಿದೆ ವೀರಶೈವ ಜಾತಿಮತ ಪಂಥಗಳಿಗೆ ಮಹತ್ವ ನೀಡದೇ ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗಬೇಕೆನ್ನುವ ವೀರಶೈವ ಧರ್ಮವಾಗಿದೆ ಎಂದರು. ಬಾಳಿ ಬಧುಕುವಂತಹ ಸಮಾಜದಲ್ಲಿ ಸಂಸ್ಕøತಿ ಹೊಂದಿದ್ದ ಸಮೂದಾಯದಲ್ಲಿ ಬಧುಕಬೇಕಾದ ನಾವು ವಿರೋಧವಿಲ್ಲದೇ ಪ್ರೀತಿಯಿಂದ ಕಾಣುವ ಧರ್ಮ ವಿರಶೈವ ಧರ್ಮ ಇದು ಕಾಲ ಕಾಲಾಂತರದಿಂದಲೂ ಈ ಸಂಸ್ಕøತಿಯನ್ನು ಮುಂದುವರೆಸಿಕೊಂಡು ಸಾಗಿದೆ ಎಂದರು. ಸಾಮಾಜಿಕ ನ್ಯಾಯ ಸಿಗದವರಿಗೆ ನ್ಯಾಯವನ್ನು ಒದಗಿಸಿಕೊಟ್ಟಿದೆ ವೀರಶೈವ ಧರ್ಮವೆಂದರು. ಶಾಸಕ ನಡಹಳ್ಳಿ ಅವರು ಬೆಳೆದು ಬಂದಂತಹದ್ದು ಶ್ರೀಮಠಗಳಲ್ಲಿಯ ಸಂಸ್ಕಾರ ಅವರಲ್ಲಿ ಅಡಗಿದೆ ಕಾರಣ ದಾಸೋಹದ ವ್ಯವಸ್ಥೆಯ ಬಗ್ಗೆ ಅವರು ಹೇಳುತ್ತಾ ಸಾಗಿದ್ದಾರೆಂಬುದು ದಾಸೋಹವೆಂದರೆ ಏನೇಲ್ಲಾ ನೀಡಿದರೂ ನಾ ನೀಡಿಲ್ಲಾ ಎನ್ನುವದೇ ಪರಂಪರೆ ಎಂದರು. ಇವತ್ತು ಬೆಳೆಯುತ್ತಿರುವ ಮಠಗಳ ಆಸ್ತಿ ಪಾಸ್ತಿ ಜಾಸ್ತಿಯಾಗಿದೆ ಇದರಿಂದ ಎಲ್ಲವೂ ಇದೆ ದಾಸೋಹ ವ್ಯವಸ್ಥೆಗೆ ಯಾಕೆ ಕೇಳಬೇಕೆನ್ನುವಂತಹದ್ದಾಗಿದೆ ಏನೇ ಇರಲಿ ಪರಂಪರೆ ಬೆಳೆಸಲು ಶುರುಮಾಡಬೇಕೆಂದರು. ಜಂಗಮ ಬೇಡುವದಕ್ಕಿಂತ ಮೊದಲು ಭಕ್ತ ನೀಡಬೇಕೆನ್ನುವದಾಗಬೇಕು ಬೇಡದಿರುವಾತ ಜಂಗಮವಲ್ಲಾ ಅನ್ನುವ ಸ್ಥಿತಿ ಜಂಗಮತ್ವ ಕುರುಹ ಜೋಳಿಗೆ ಯಾಗಿದ್ದು ಕಾರಣ ಜನರಲ್ಲಿ ನೀಡುವ ಗುಣ ಹೋಗಬಾರದು ಇದನ್ನು ಅಳವಡಿಸಿಕೊಳ್ಳುವ ಕಾರ್ಯವಾಗಬೇಕೆಂದರು. ಬೇಡುವದನ್ನು ಬಿಟ್ಟರೆ ಮುಂದೆ ಅಘಾತವಾಗಲಿದೆ ಎಂದ ಜಗದ್ಗುರುಗಳು ದಾಸೋಹ ಪರಂಪರೆಯಿಂದ ಬೆಳೆದು ಬಂದ ನಾನು ಅದನ್ನು ದೂರಹೋಗಲಿಕ್ಕೆ ಬಿಡಬಾರದು ಎಂಬ ಛಲವನ್ನು ತೊಟ್ಟಿರುವ ಸಿದ್ದಗಂಗಾ ಮಠದಲ್ಲಿ ಬೆಳೆದು ಬಂದಂತಹ ನಡಹಳ್ಳಿ ಅವರು ಅಲ್ಲಿಯ ಶ್ರೀಗಳಿಗೆ ಬಂಗಾರದ ತಾಟು ನೀಡಿ ಗುರುದಕ್ಷಿಣಿ ಎಂಬುದನ್ನು ಸಮರ್ಪಿಸಿದ್ದಾರೆಂದರು. ಹಂಚಿ ಉಣ್ಣುವ ದಾಸೋಹ ಪರಂಪರೆಯಿಂದ ನಾವು ಬೆಳೆದಿದ್ದೇವೆ ಈ ಸಂಸ್ಕøತಿ ಅಳಿಯಬಾರದು  ರೋಟ್ಟಿಯನ್ನಾಗಲಿ ದಾಸೋಹಕ್ಕೆ ಕೊಡಿ ಎಂದು ಹೇಳಿದ್ದೇವೆ ಈ ಮಾತಿಗೆ ಬುಟ್ಟಿಗಟ್ಟಿಲೆ ರೋಟ್ಟಿ ನೀಡುತ್ತಿದ್ದಾರೆ ಪಾದಯಾತ್ರೆಯಲ್ಲಿ ದಾಸೋಹ ವ್ಯವಸ್ಥೆಗೆ 26 ಜನರಿಗೆ ಸಜ್ಜು ಮಾಡಿದರೂ ಅವರಿಗೆ ಭಕ್ತರು ಕಾರ್ಯಕ್ಕೆ ಹಚ್ಚಂದತೆ ನೋಡಿಕೊಂಡು ತಾವೇ ದಾಸೋಹದ ವ್ಯವಸ್ಥೆ ಕಲ್ಪಿಸುತ್ತಾ ಸಾಗಿರುವದು ಮೆಚ್ಚುವಂತಹ ಕಾರ್ಯ ಇದಾಗಿದೆ ಈ ಪಾದಯಾತ್ರೆ ಎಂಬುದು ಎಲ್ಲ ಭಕ್ತರದ್ದೇ ಆಗಿದೆ ಎಂದರು. ದಕ್ಷ ಮತ್ತು ನಿಷ್ಠಾವಂತ ಈ ಪಾದಯಾತ್ರೆಯಲ್ಲಿ ಕಾರ್ಯಾಧ್ಯಕ್ಷರಾಗಿ ಶಾಸಕ ನಡಹಳ್ಳಿ ಅವರು ಸಿಕ್ಕಿರುವದು ಸಮಿತಿಯ ಸೌಭಾಗ್ಯವಾಗಿದೆ ಜನತೆ ಪ್ರತ್ಯಕ್ಷವಾಗಿ ಮಾಡುವಂತಹ ಕಾರ್ಯ ನಡಹಳ್ಳಿ ಮಾಡುತ್ತಾ ಸಾಗಿದ್ದಾರೆ ಈ ಕಾರಣದಿಂದಲೇ ಇವತ್ತು ಅವರು ದೊಡ್ಡವರಾಗಲು ಕಾರಣವಾಗಿದೆ ಎಂದರು. ಪ್ರತಿಯೊಬ್ಬ ಭಕ್ತರು ಕೂಡಿ ಮಾಡಿದ ತುಲಾಭಾರ ಇದೊಂದು ಹೊಸ ತಿರುವು ಎಂದು ಹೇಳಲಿಕ್ಕೆ ಪ್ರಯತ್ನ ಮಾಡುತ್ತೇನೆಂದರು. ಈ ಭಾಗದಲ್ಲಿ ಎಲ್ಲ ಮಠಾಧೀಶರನ್ನು ಕರೆದುಕೊಂಡು ಗುಂಡಕನಾಳಶ್ರೀಗಳು ಶ್ರಮಿಸಿದ್ದಾರೆ ಪೀಠಾಭಿಮಾನಿ ಕ್ರೀಯಾಶೀಲರಾದ ಅವರು ತಮ್ಮ ಮಠದ ಕಾರ್ಯಗಳನ್ನು ಬಿಟ್ಟು ಶ್ರಮಿಸಿದ ಶ್ರೀಗಳ ಕಾರ್ಯ ಮೇಚ್ಚುವಂತಹದ್ದಾಗಿದೆ ಎಂದರು.

ಇನ್ನೋರ್ವ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠವು ಬಹುದೊಡ್ಡ ಅನುಕೂಲತೆ ಕಲ್ಪಿಸಿದೆ ಇದರಿಂದ ಬಹಳೇ ಅನುಕೂಲತೆಯಾಗಿದೆ ಶ್ರೀಶೈಲ ಪೀಠದ ಜಗದ್ಗುರುಗಳು ಕೈಗೊಂಡಿರುವ ಪಾದಯಾತ್ರೆ ಅಧರ್ಮದ ವಿರೂದ್ದ ದಂಡಯಾತ್ರೆಯಾಗಿದೆ ಎಂದರು. ದುಶ್ಚಟಗಳು ಹೋಗಿ ವ್ಯಸನ ಮುಕ್ತವಾಗಬೇಕೆಂಬ ದಂಡಯಾತ್ರೆ ಧರ್ಮದ ವಿಜಯ ಯಾತ್ರೆ ಸಾದಿಸಲಿದೆ ಎಂದ ಅವರು ಈ ಪಾದಯಾತ್ರೆ ಕುರಿತು ಅನೇಕ ಸಂಘಟಿಕರನ್ನು ಒಗ್ಗೂಡಿಸುವ ಕಾರ್ಯ ಈ ಮೊದಲೇ ಮಾಡಲಾಗಿದೆ ಇದರಲ್ಲಿಯ ತಾಳಿಕೋಟೆಯ ಹಿಂದೂ ಮಹಾ ಗಣಪತಿಯ ಕಾರ್ಯಕರ್ತರ ಸೇವೆ ಒಳಗೊಂಡಿದೆ ಎಂದರು.

ಪಾದಯಾತ್ರೆಯ ಕಾರ್ಯಾಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮಾತನಾಡಿ ನಮ್ಮ ಧರ್ಮದ ಸಂಸ್ಕøತಿಯ ಸಂಸ್ಕಾರವನ್ನು ಮಠಗಳು ಭಕ್ತರು ಮರೆಯುತ್ತಾ ಸಾಗಿದಂತಾಗಿದೆ ಸಂಸ್ಕಾರ ದಾಸೋಹ ಗುರು ಎಂದರೇನು ಅನ್ನುವಂತಹ ಸಮಾಜ ನಿರ್ಮಾಣವಾಗುತ್ತಲಿದೆ ಪರೋಪಕಾರ ಸತ್ಕಾರ ಬೆಳೆಸದಿದ್ದರೆ ಮುಂದೆ ಮಕ್ಕಳಲ್ಲಿ ದುಃಖ ತುಂಬಲಿದೆ ಕಾರಣ ಸತ್ಯ ಶುದ್ದ ಕಾಯಕ ಮಾಡುವ ಕಾರ್ಯವಾಗಬೇಕೆಂದರು. ಜಂಗಮ ಒಂದು ಮಠ ಕಟ್ಟಲಿಕ್ಕೆ ಸನ್ಯಾಸತ್ವ ದ್ವಿಕರಿಸಿರುವದು ಸಮಾಜದಲ್ಲಿ ಇರತಕ್ಕಂತಹ ಉಳ್ಳವರಿಂದ ಪಡೆದು ನಿಶಕ್ತರಿಗೆ ಸಹಾಯ ಮಾಡಬೇಕಾಗುತ್ತದೆ ಭಕ್ತರ ಮನೆಗೆ ಭಗವಂತನಾಗಿ ಕಾರ್ಯ ಮಾಡಬೇಕೆಂದರು. ಸಮಾಜದ ಪರಂಪರೆಯಿಂದ ಭಕ್ತಿಯಿಂದ ದಾಸೋಹವೆಂಬುದು ಬರಬೇಕು ಅದು ಮೊದಲು ತಾಳಿಕೋಟೆಯಲ್ಲಿ ಬರಬೇಕಾಗಿದೆ ಎಂದರು. ವ್ಯಕ್ತಿ, ಜಂಗಮ, ರಾಜಕಾರಣಿ, ಧರ್ಮ ಉಳಿಸಲು ಸಾಧ್ಯವಿಲ್ಲಾ ಅದು ಜನ ಸಮೂಹದಿಂದಲೇ ಸಾದ್ಯವೆಂದರು. ಪ್ರತಿ ಮನೆ ಮನೆಯಲ್ಲಿ ದಾಸೋಹ ಪರಿಕಲ್ಪನೆ ಕೊಡಬೇಕು ಮನೆಯಲ್ಲಿ ಮಾಡುವ ಮೊದಲನೇಯ ರೋಟ್ಟಿ ಈ ಹಿಂದೆ ಮಠಕ್ಕೆ ನೀಡಲಾಗುತ್ತಿತ್ತು ರೈತರ ಬೆಳೆದು ಬಂದ ಕಾಳುಗಳನ್ನು ತುಂಬುವ ಸಮಯದಲ್ಲಿ ಕಣಗಳಲ್ಲಿ ಮೊದಲು ಜಂಗಮರಿಗೆ ಕೊಡಲಾಗುತ್ತಿತ್ತು ಅಂತ ಸಂಸ್ಕøತಿಯು ಪುನರ್ ಜನ್ಮಕ್ಕೆ ಬರಬೇಕಾಗಿದೆ ಎಂದರು. ಕಾರ್ಯಧ್ಯಕ್ಷನನ್ನಾಗಿ ನನ್ನನ್ನು ಮಾಡಿದ್ದಾರೆ ಇದು ನನ್ನ ಜೀವನದ ಸೌಭಾಗ್ಯವೆಂದು ತಿಳಿದುಕೊಂಡಿದ್ದೇನೆ ನನ್ನ ಜೀವನ ನನ್ನ ಸಂಪತ್ತು ಶ್ರೀಮಠಗಳು ಕೊಟ್ಟಿದ್ದು ಎಂದು ತಿಳಿದುಕೊಂಡಿದ್ದೇನೆ ದಾಸೋಹದ ವ್ಯವಸ್ಥೆ ದಾಸೋಹದ ಪರಿಕಲ್ಪನೆ ಎಂಬುದು ಇರಲಿರುವ ರಾಜ್ಯದಲ್ಲಿಯ 6800 ಮಠಗಳಲ್ಲಿ ದಾಸೋಹದ ವ್ಯವಸ್ಥೆ ನಡೆಯಬೇಕೆಂದರು.

ಗಚ್ಚಿನಮಠ-ಮೈಲೇಶ್ವರ-ಗುಳೇದಗುಂಡ ಶ್ರೀಗಳು, ಕರಂಭಟನಾಳಶ್ರೀಗಳು, ಭರತಗೌಡ ಮಾಟೀಲ, ಅವರು ಮಾತನಾಡಿದರು.

ಇದೇ ಸಮಯದಲ್ಲಿ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರಿಗೆ ಪಾದಯಾತ್ರಾ ಸಮಿತಿ ವತಿಯಿಂದ ಪ್ರಚಾರ ಭಾಸ್ಕರ್ ಎಂಬ ಪ್ರಶಸ್ತಿ ನೀಡಿ ಶ್ರೀಶೈಲ ಜಗದ್ಗುರುಗಳು ಗೌರವಿಸಿದರು.

ಇದೇ ಸಮಯದಲ್ಲಿ ಜಗದ್ಗುರುಗಳಿಗೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ, ಬಸನಗೌಡ ವಣಕ್ಯಾಳ, ಸಮಸ್ತ ತಾಳಿಕೋಟೆ ಬಳಗದವರು ನಾಣ್ಯಗಳಿಂದ ತುಲಾಭಾರ ಮಾಡಿದರು. ಇದು ಅಲ್ಲದೇ ಕಡ್ಲಿ, ತೊಗರಿ ಬೇಳೆ, ಬಿಳಿಜೋಳ, ಅಕ್ಕಿ, ಸಕ್ಕರಿ, ಗೋದಿ, ಇವುಗಳಿಂದಲೂ ಬೇರೆ ಬೇರೆಯಾಗಿ ಭಕ್ತಸಮೂಹ ಜಗದ್ಗುರುಗಳಿಗೆ ತುಲಾಭಾರ ಮಾಡಿ ಭಕ್ತಿಭಾವ ಮೆರೆದರು.

ನಿತ್ಯ ಪ್ರವಚನ ನೀಡಿದ ವೇ.ಆಯ್.ಬಿ.ಹಿರೇಮಠ ಅವರು ಪುರಾಣವನ್ನು ಮಂಗಲಗೊಳಿಸಿದರು.

ವೇದಿಕೆಯ ಮೇಲೆ ಶ್ರೀ ಖಾಸ್ಗತೇಶ್ವರ ಮಠದ ವೇ.ಮುರುಘೇಶ ವಿರಕ್ತಮಠ, ನಾವದಗಿ ರಾಜೇಂದ್ರ ಒಡೆಯರ ಸ್ವಾಮಿಗಳು, ಕುಂಟೋಜಿಯ ಶ್ರೀ ಚನ್ನವೀರ ದೇವರು, ಪಡೇಕನೂರ ದಾಸೋಹಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸಾಸನೂರ ಮಠದ ಶ್ರೀ ಮಡಿವಾಳೇಶ್ವರ ಸ್ವಾಮಿಗಳು, ಚಬನೂರ ಜೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಶ್ರೀ ಸೂಗೂರೇಶ್ವರ ಶಿವಾಚಾರ್ಯರು ಶಹಾಪೂರ, ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮಿಗಳು, ಅಂಕಸದೊಡ್ಡಿ ಶ್ರೀಗಳು, ಕ್ಯಾತನೂರ ಶ್ರೀಗಳು, ಜೈನಾಪೂರಶ್ರೀಗಳು, ಜಮ್ಮಲದಿನ್ನಿ ಶ್ರೀಗಳು, ಇಟಗಿಶ್ರೀಗಳು, ಕಲಕೇರಿ ಶ್ರೀಗಳು, ಮುಸ್ಲಿಂ ಧರ್ಮ ಗುರು ಶ್ರೀ ಸೈಯದಶಕೀಲ ಅಹ್ಮದ ಖಾಜಿ, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲಿಗೆ ಪೀಠದ ಸಾದಕರಿಂದ ವೇಧಘೋಷ ಜರುಗುತು. ಸಂಗೀತಗಾರರಾದ ರಾಜು ಗುಬ್ಬೇವಾಡ, ಯಲ್ಲಪ್ಪ ಗುಂಡೋಳ್ಳಿ, ನಾಗರಾಜ ಹೂಗಾರ ಅವರು ಸಂಗೀತ ಸೇವೆ ಸಲ್ಲಿಸಿದರು.

ಸ್ವಾಗತ ಸಮಿತಿಯ ಕಾಶಿನಾಥ ಮುರಾಳ ಸ್ವಾಗತಿಸಿದರು. ಪ್ರವಚನಕಾರ ಆಯ್.ಬಿ.ಹಿರೇಮಠ ಅವರು ನಿರೂಪಿಸಿದರು.


ಶ್ರೀಶೈಲಪೀಠದಲ್ಲಿ ಕಟ್ಟಕ್ಕೆ ಕೊಡುಗೆ

ಶ್ರೀಶೈಲಪೀಠದಲ್ಲಿ ಹೊಸದಾಗಿ ಕಟ್ಟಲಾಗುತ್ತಿರುವ ಯಾತ್ರಾ ನಿವಾಸ ಕಟ್ಟಡದ ಪ್ರತ್ಯೇಕ ಒಂದು ಕೊಣೆಯನ್ನು ಕಟ್ಟಿಸಿಕೊಡುವಾಗಿ ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ತಮ್ಮ ಅಜ್ಜಿ ದಿ.ಲಕ್ಷ್ಮೀಂಬಾಯಿ ಶಾಂತಗೌಡ ಅಸ್ಕಿ ಅವರ ಸ್ಮರಣಾರ್ಥ ಸವಿನೆನಪಿಗಾಗಿ 6 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಿಸುವದಾಗಿ ವಾಗ್ದಾನ ಮಾಡಿದರು. ಅದರಂತೆ ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ತಾಳಿಕೋಟೆ ಸಹಕಾರಿ ಬ್ಯಾಂಕ್ ನಿ, ಸಾಹೇಬಗೌಡ ಬಸವಂತ್ರಾಯ ಆಲ್ಯಾಳ ಅವರೂ ಕೂಡಾ ಶ್ರೀಶೈಲಪೀಠದ ಕಟ್ಟಡದ ಒಂದು ಕೋಣೆಯನ್ನು 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಡುವದಾಗಿ ವಾಗ್ದಾನ ಮಾಡಿದರು.


ಶ್ರೀಶೈಲ ಪೀಠದ ವೇಬ್‍ಸೇಟ್ ಉದ್ಘಾಟನೆ

ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆಯು ತಾಳಿಕೋಟೆ ಪಟ್ಟಣಕ್ಕೆ ಆಗಮಿಸಿದ ಸಂದರ್ಬದಲ್ಲಿ ಭರತಗೌಡ ಪಾಟೀಲ(ನಡಹಳ್ಳಿ) ಅವರು ಭಕ್ತರ ಅನುಕೂಲಕ್ಕಾಗಿ ನಿರ್ಮಿಸಿದ ಶ್ರೀಶೈಲ ಪೀಠದ ವೇಬ್‍ಸೇಟ್‍ನ್ನು ಜಗದ್ಗುರು ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು. ವೇಬ್‍ಸೈಟ್‍ನಲ್ಲಿ ಪಾದಯಾತ್ರೆಯ ಲೈವ್ ಚಿತ್ರಣ ಸಿಗಲಿದೆ ಅಲ್ಲದೇ ಶ್ರೀಶೈಲ ಪೀಠದಲ್ಲಿ ನಿತ್ಯ ನಡೆಯುವ ಕಾರ್ಯಕ್ರಮದ ಚಿತ್ರಣವು ಲಬ್ಯವಾಗಲಿದೆ ಎಂದು ಭರತಗೌಡ ಪಾಟೀಲ(ನಡಹಳ್ಳಿ) ಅವರು ಹೇಳಿದರು.