ಭಕ್ತಿಯೆಂಬುದು ತಲೆಯಿಂದ ಕೈಗಳದ್ವಾರ ಹರಿದು ಬರುವ ಆತ್ಮ ಶಕ್ತಿ:ಟೇಂಗಳಿ ಶ್ರೀ

ಕಲಬುರಗಿ:ಎ.20:ಭಕ್ತಿಯೆಂಬುದು ಬರಿ ಮನುಷ್ಯನ ತಳಮಳವೂ ಅಲ್ಲ ಪುರುಷ ಶಕ್ತಿಯ ಪ್ರಯೋಗ ಹೌದು. ಪುರುಷ ಶಕ್ತಿಯ ಪ್ರಯೋಗವು ಹೌದು, ಭಕ್ತಿಯೆಂಬುದು ತಲೆಯಿಂದ ಕೈಗಳದ್ವಾರ ಹರಿದು ಬರುವ ಆತ್ಮ ಶಕ್ತಿ ಅದನ್ನು ಯುವಕರು ಚೆನ್ನಾಗಿ ಅರಿತುಕೊಂಡು ತಮ್ಮ ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಆ ಶಕ್ತಿಯಿಂದ ಒಳ್ಳೆಯತನ, ಲೋಕೋದ್ಧಾರಕ್ಕಾಗಿ ಉಪಯೋವಾಗಬೇಕೆಂದು ಪೂಜ್ಯ ಶಾಂತಸೋಮನಾಥ ಶಿವಾಚಾರ್ಯರು ಆಶೀವರ್ಚನ ನೀಡಿದರು.
ಟೇಂಗಳಿ ಗ್ರಾಮದಲ್ಲಿ ಶ್ರೀ ಭೀಮೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಅಂಡಗಿ ಪ್ರತಿಷ್ಠಾನ ಟೇಂಗಳಿ ಉದ್ಘಾಟನೆ ಹಾಗೂ ಭಕ್ತಿ ಸೇವೆ ಮಾಡಿ ಕಾರ್ತಿಕ ಮಾಸದ ಭಕ್ತರಿಗೆ ಸನ್ಮಾನಿಸಿ ಮಾತನಾಡುತ್ತ, ಸದಾ ಭಜನೆ, ಧಾರ್ಮಿಕ ಹಾಗು ಸಾಮಾಜಿಕ ಚಟುವಟಿಕೆಗಳಿಂದ ಕೂಡಿದ ದಿ. ಶಿವಶರಣಪ್ಪ ಅಂಡಗಿಯವರ ಜೀವನ ನೆನೆಸುವಂತಹ ಈ ಅಂಡಗಿ ಪ್ರತಿಷ್ಠಾನದ ಧಾರ್ಮಿಕ ಚಟುವಟಿಕೆ ನಾಡಿನಾದ್ಯಂತ ಸೇವೆ ಪಸರಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭೀಮೇಶ್ವರ ದೇವಸ್ಥಾನ ಟ್ರಸ್ಟ ಕಮಿಟಿ ಅಧ್ಯಕ್ಷರಾದ ವಿರೇಶ ವಾಲಿ, ಗ್ರಾಮದ ಹಿರಿಯರಾದ ಸೋಮಶೇಖರ ಸಾಹು ಪಟ್ಟೇದ, ಕನ್ನಡ ಸಾಹಿತ್ಯ ಪರಿಷತ್ತ ಟೇಂಗಳಿ ವಲಯ ಘಟಕದ ಅಧ್ಯಕ್ಷರಾದ ಭೀಮಾಶಂಕರ ಅಂಕಲಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಿದರು.
ವಿಶ್ವನಾಥ ಬಾಳದೆ ಕಾರ್ಯಕ್ರಮ ನಿರೂಪಿಸಿದರು, ವಿವೇಕಾನಂದ ಬುಳ್ಳಾ ಸ್ವಾಗತಿಸಿದರು, ಗುರುನಂಜಯ್ಯ ಮಠಪತಿ ಪ್ರಾರ್ಥಿಸಿದರು, ರಾಜು ಪಟ್ಟೇದ ವಂದಿಸಿದರು.
ಇದೇ ಸಂದರ್ಭದಲ್ಲಿ ಕಾರ್ತಿಕ ಸೇವಾಕರ್ತರಿಗೆ ಸತ್ಕಾರ : ವರ್ಷದ 12ತಿಂಗಳ ಕಾರ್ತಿಕ ಅಮವಾಸ್ಯೆಯ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ 12 ಸೇವಾಕರ್ತ ಭಕ್ತರಾದ ನಾಗೇಂದ್ರಪ್ಪ ಬಸ್ತೆ, ವಿರೇಂದ್ರ ಬೀರನ್, ಹಣಮಂತರಾಯ ಬಾಳದೆ, ಶಿವಲೀಲಾ ನಾಗಶೆಟ್ಟಿ, ಶಿವಶರಣಪ್ಪ ತೇಲ್ಕೂರ, ಭೀಮರಾಯ ತುಪ್ಪದ, ಶಿವಕುಮಾರ ನಾಗಶೆಟ್ಟಿ, ವಿರೇಂದ್ರ ವಾಲಿ, ವಿರೇಶ ತೆಲಗಾಣಿ, ಬಸವರಾಜ ಬಾಳದೆ ಎಲ್ಲರಿಗು ಸತ್ಕರಿಸಿ ಪ್ರಶಂಸನಾ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಚಂದ್ರಶೇಖರ ಎಲೇರಿ, ವಿಶ್ವನಾಥ ಬಾಳದೆ, ಮಹಾದೇವ ಅಷ್ಠಗಿ, ಸಂತೋಷ ಚೇಂಗಟಿ, ಜಗು ಸ್ವಾಮಿ, ಬಸವರಾಜ ಬಾಳದೆ, ವಿಶ್ವನಾಥ ಕುದರಿಕಾರ, ಚಂದ್ರಶೇಖರ ಕಡ್ಲಿ, ಶೇಖರ ತೆಲಗಾಣಿ, ಶ್ರೀಶೈಲ ತಮ್ಮಣಗೌಡ ಹಾಗು ಇತರರು ಉಪಸ್ಥಿತರಿದ್ದರು.