ಭಕ್ತಿಯಿಂದ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ

ಹುಮನಾಬಾದ : ಜ.16:ಕಲ್ಯಾಣಕ ರ್ನಾಟಕದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಜಾತ್ರೆಯ ಎರಡನೇ ಅತ್ಯಂತ ಮಹತ್ವದ ಘಟ್ಟವಾದ ದೇವರ ಪಲ್ಲಕ್ಕಿ ಉತ್ಸವ ಭಕ್ತಿಯಿಂದ ನೆರವೇರಿತು. ಪ್ರತಿಷ್ಠಿತ ಹಿರೇಮಠದ ಶ್ರೀ ವೀರರೇಣುಕ ಗಂಗಾಧರ ಸ್ವಾಮೀಜಿ ವಾದ್ಯವೃಂದಗಳ ಗೌರವ ಸಮೇತ ಪರಂಪರೆಯಂತೆ ದೇವಸ್ಥಾನ ಪ್ರವೇಶಿಸುತಿದ್ದಂತೆ ಪಲ್ಲಕ್ಕಿ ಉತ್ಸವ ಆರಂಭಗೊಂಡಿತು.

ದೇವಸ್ಥಾನದಿಂದ ಹೊರಟು ಜೇರಪೇಟೆ ಹನುಮ ದೇವಸ್ಥಾನ ಬಳಿ ಇರುವ ಪೆÇೀಲಿಸ್ ಪಾಟೀಲ್ ಮನೆ ಪ್ರಾಂಗಣದಲ್ಲಿ ಪಾರಂಪರಿಕವಾಗಿ ಶಾಲು ಹೊದಿಸಿದ ನಂತರ ಶಲ್ಯ ಸುಡುವ ಪ್ರಕ್ರಿಯೆ ನೆರವೇರಿತು. ಬಳಿಕ ಬಾಲಾಜಿ ಸರ್ದಾರ್ ವಲ್ಲಭಾಯಿ ಪಾಟೀಲ್ ಡಾ. ಬಿ ಆರ್ ಅಂಬೇಡ್ಕರ್ ವರ್ತ ರಸ್ತೆ ಮಾರ್ಗವಾಗಿ ಅಗ್ನಿಕುಂಡ ಬಳಿ ತಲುಪಿ ಅಲ್ಲಿಯೂ ಎರಡನೇ ಹಂತದ ಶಲ್ಯ ಸುಡುವ ಪ್ರಕ್ರಿಯೆ ನಡೆಯಿತು. ಶಾಸಕ ಡಾ. ಸಿದ್ದು ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಬಿ. ಪಾಟೀಲ್, ಭೀಮರಾವ ಬಿ. ಪಾಟೀಲ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್, ಸಮಿತಿ ಸದಸ್ಯರಾದ ಸೋಮಶೇಖರ ಬುಳ್ಳಾ, ಅಭಿಷೇಕ ಪಾಟೀಲ್, ದತ್ತಕುಮಾರ ಚಿದ್ರಿ, ಮಹೇಶ ಎಂ. ಅಗಡಿ, ಕಲಾವತಿ ಬಾಬುಸಿಂಗ್, ಪ್ರಧಾನ ಅರ್ಚಕ ಗುರು ಪೂಜಾರಿ ಸೇರಿದಂತೆ ಪ್ರತಿ ವರ್ಷದಂತೆ ಈ ವರ್ಷವೂ ಪಾರಂಪರಿಕ ಪರಿವಾರಗಳ ಪ್ರಮುಖರು ಈ ವೇಳೆ ಹಾಜರಿದ್ದರು. ಪಲ್ಲಕ್ಕಿ ಉತ್ಸವ ಹಿನ್ನೆಲೆಯಲ್ಲಿ ಪೆÇಲೀಸರು ಬಂದ ಬಸ್ತ್ ನಡೆಸಿದರು.