ಭಕ್ತಿಯಿಂದ ಗುರುವಿನ ಸೇವೆ ಮಾಡಿದರೆ ಮುಕ್ತಿ ಸಿಗುತ್ತದೆ

ಆಲಮೇಲ;ಮಾ.23:ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರೆ ಗುರಿ ಇಟ್ಟಿಕೊಂಡು ಪ್ರಯತ್ನ ಮಾಡಬೇಕು, ಮುಂದೆ ಗುರಿ ಇದ್ದರೆ ಅದನ್ನು ತಳುಪಲು ಹಿಂದೆ ಗುರುವಿನ ಆರ್ಶಿವಾದ ಇರಬೇಕು ಆಗ ಗರಿ ಮುಟ್ಟಲು ಸಾಧ್ಯ, ಎಂದು ಮಾಜಿ ಸೈನಿಕ,ಜಿಆರ್‍ಗ್ರೂಪ ಬಿ,ಜೆ,ಪಿ ಮುಖಂಡ ಶಿವಾನಂದ ಪಾಟೀಲ(ಸೋಮಜಾಳ) ಹೇಳಿದರು.
ಅವರು ತಾಲೂಕಿನ ಬಮ್ಮನಹಳ್ಳಿ ಹೀರೆಮಠದ ಮಳೇಂದ್ರ ಶಿವಾಚಾರ್ಯರ 34 ನೇ ಪುಣ್ಯಸ್ಮರಣೆ ನಿಮಿತ್ಯªಶÁಗಿ ನಡೆದ ಅಕ್ಕಮಹಾದೇವಿ ಪುರಾಣ ಮುಕ್ತಾಯ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ನಮಗೆ ಯಾವದೇ ವಿಷಯದಲ್ಲಿ ಸಾಧನೆ ಮಾಡಬೇಕ್ಕಾದರೆ ಗುರುವಿನ ಆರ್ಶಿವಾದ ಕೇಳುತ್ತೆವೆ ಆದರೆ ಅದನು ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ ಗುರುವಿನ ಆರ್ಶಿವಾದ ಸಿಗಬೇಕ್ಕಾದರೆ ಸದಾ ನಾವು ಗುರುವಿಗೆ ಭಕ್ತಿಯಿಂದ ಸೇವೆ ಮಾಡಬೇಕು ಆಗ ನಮಗೆ ಮುಕ್ತಿ ಸಿಗುತ್ತದೆ, ಈ ಜೀವನದಲ್ಲಿ ನಾವು ಧಾನ,ಸಹಕಾರ,ಪರರಿಗೆ ಉಪಕಾರ,ನಿಸ್ವಾರ್ಥಸೇವೆ ಮಾಡಿದರೆ ಮಾತ್ರ ನಮಗೆ ನೆಮ್ಮದ್ದಿ ಸಿಗುತ್ತದೆ,ಅದನು ಬಿಟ್ಟು ಸ್ವಾರ್ಥದಿಂದ ನಡೆದರೆ ನಮಗೆ ಮುಕ್ತಿ ಸಿಗುವುದಿಲ್ಲ, ದೇವರು ನಮ್ಮ ಜೀವನದಲ್ಲಿ ಸಂತೋಷ ಹಾಗೂ ದುಖ ಎರಡು ಕೊಟ್ಟು ನೋಡುತ್ತಾನೆ, ನಾವು ಸಂತೋಷ ಕೊಟ್ಟಾಗ ಹೋಗಳಿ,ದುಖ ಕೊಟ್ಟಾಗ ಬೈದರೆ ಅದು ಎರಡು ಪರಿಕ್ಷೆಯಲ್ಲಿ ನಾವು ಪೇಲ್ ಆದಹಾಗೆ ಸಂತೋಷ,ದುಖ ಎರಡು ಸಮವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಶ್ರೀಮಠದ ಪೂಜ್ಯರ ಸಮ್ಯುಖದಲ್ಲಿ ಸಾಮೂಹಿಕ ವಿವಾಹದಲ್ಲಿ 2 ಜೋಡಿ ನವದಂಪತಿಗಳಿಗೆ ಅಕ್ಷತ ಹಾಕಿ ಶುಭ ಹಾರೈಸಿದರು ಬಳಿಕ ವಿಜಾಯಪುರ ಜಿಲ್ಲಾ ಬಿಜೆ,ಪಿ ಅದ್ಯಕ್ಷ ಆರ್ ಎಸ್ ಪಾಟೀಲ ಗ್ರಂಥ ಬಿಡಗಡೆ ಸತ್ತಸಂಗದಿಂದ ಜೀವನ ಪಾವನ ಎಂದು ಪೂಜ್ಯರಿಂದ ಆರ್ಶಿವಾದ ಪಡೆದರು
ಡಾ,ಸಂದೀಪ ಪಾಟೀಲ ಡಾ,ರಾಜೇಶ ಪಾಟೀಲ ನಾಗರಿಕ ವೇಧಿಕ ಅದ್ಯಕ್ಷ ರಮೇಶ ಬಂಟನೂರ ಮಾತನಾಡಿದರು ರಾಜ್ಯ ಲಿಂಬಿಅ,ಬಿವೃದ್ದಿ ಅದ್ಯಕ್ಷ ಅಶೋಕ ಅಲ್ಲಾಪುರ ಶ್ರೀಮಂತ ದುದ್ದಗಿ ಸಿದ್ದು ಮುಗಳಿ ನ್ಯಾಯವಾದಿ ಶಂಭು ಕಕ್ಕಳಮೇಲಿ ಶ್ರೀಶೈಲ ಮಠಪತಿ ಅಪ್ಪು ಶೆಟ್ಟಿ ವಾಸುದೇವ ಪತ್ತಾರ ರಾವುತಗೌಡ ಪಾಟೀಲ ಹಣಮಂತರಾಯ ಮರದನವರು ಶ್ರೀಮಠದಿಂದ ನೇನಪಿನ ಕಾಣಿಕೆ ನೀಡಿ ಗೌರವಿಸಿದರು
ಕಾರ್ಯಕ್ರಮದಲ್ಲಿ ಶ್ರೀಮಠದ ಪೂಜ್ಯರು ಚಂದ್ರಶೇಖರ ಶಿವಾಚಾರ್ಯರು,ಮಲಘಾಣ ಶ್ರೀಗಳು ಜಡಶಾಂತಲಿಂಗ ಶಿವಾಚಾರ್ಯರು,ದೇವರಹಿಪ್ಪರಗಿ ವೀರಗಂಗಾಧರ ಶಿವಾಚಾರ್ಯರು,ಹಿರೋಳಿ ಶಿವಬಸವ ಸ್ವಾಮಿಗಳು,ತಡವಲಗಾ ಅಭಿನವರಾಚೋಟೇಶ್ವರ ಶಿವಾಚಾರ್ಯರು,ಕುಮಸಗಿ ಶಿವಾನಂದ ಶಿವಾಚಾರ್ಯರು,ಆಲಮೇಲ ಅರ್ಜುಣಗಿಮಠದ ಸಂಗನಬಸವೇಶ್ವರ ಶಿವಾಚಾರ್ಯರು,ಸೋಮಜಾಳ ಅಮೃತಲಿಂಗ ಶಿವಾಚಾರ್ಯರು ಮಡಿವಾಳ ಸೇರಿದಂತೆ ವಿವಿಧ ಮಠಾಧಿಶರು, ರಾಜಕೀಯ ಮುಖಂಡರು ಉಪಸ್ಥಿತ್ತರಿದ್ದರು.ವೇ,ಮಡಿವಾಳಯ್ಯ ಶಾಸ್ತ್ರೀಗಳು,ಗಾಯಕ ಯಶವಂತ ಬಡಿಗೇರ,ವಾದಕ ರಾಜಶೇಖರ ಕಟ್ಟಿಸಂಗಾವಿ ಪುರಾಣ ಮುಕ್ತಾಯಗೋಳಿಸಿದರು. ಭಕ್ತರು ಇದ್ದರು