ಭಕ್ತಿಭಾವದ ಬಸವ ಜಯಂತಿ ಉತ್ಸವ

ವಿಜಯಪುರ:ಎ.24: ತಾಲೂಕಿನ ಬುರಣಾಪುರದ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಬಸವ ಜಯಂತಿಯ ನಿಮಿತ್ಯವಾಗಿ ಧರ್ಮದರ್ಶಿಗಳಾದ ಪ.ಪೂ. ಶ್ರೀ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ವಿಶ್ವಗುರು ಶ್ರೀ ಬಸವೇಶ್ವರರ ಮೂರ್ತಿಗೆ ಸಹಸ್ರನಾಮಾವಳಿಯ ಮಹಾ ಶಿವಪೂಜೆ ನಡೆದು ವಿಶ್ವಶಾಂತಿಗಾಗಿ ಬಸವ ನಾಮಾವಳಿ ಪಠಣೆಯಾಗಿ ಬಸವಾದಿ ಶಿವಶರಣರ ವಚನ ಪಾರಾಯಣ ನಡೆಯಿತು. 63 ಶಿವಶರಣರ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿ ಅಕ್ಕನ ಬಳಗದವರಿಂದ ಪುರಾತನ ಶಿವಶರಣರ ಶಿವಭಜನೆ ಸಾಗಿಬಂದಿತು. ಮಾನವ ಧರ್ಮದವರೆಲ್ಲರೂ ಶಿವಭಕ್ತಿಯನ್ನು ಮಾಡಿ ನಾನು ಯಾರು ಎಂಬುದನ್ನು ಅರಿತು ಇಷ್ಟಲಿಂಗ ಪೂಜೆಯನ್ನು ಮಾಡಿ ಸರ್ವರೂ ಕಾಯಕದಲ್ಲಿಯೇ ಶಿವನಾಮಸ್ಮರಣೆಯನ್ನು ಮಾಡಿ ಪರಮಪವಿತ್ರವಾದ ಮಾನವ ಜನ್ಮದ ಸಾರ್ಥಕತೆಯನ್ನು ಮಾಡಿಕೊಂಡು ದೇವಾದಿದೇವನಾದ ಶ್ರೀಗಿರಿಯ ಶ್ರೀ ಮಲ್ಲಿಕಾರ್ಜುನ ಕೃಪೆಗೆ ಪಾತ್ರರಾಗಬೇಕೆಂದು ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಲಕ್ಷ್ಮಣ ಶಿವಶರಣರು ಉಪದೇಶಾಮೃತವನ್ನು ನೀಡಿದರು.ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಬಸಯ್ಯ ಹಿರೇಮಠ, ಸಿದ್ದಯ್ಯ ಮಠಪತಿ, ಹಣಮಂತ ಪುಟ್ಟಿ, ಗುರುರಾಜ ನುಚ್ಚಿ, ಬಸವರಾಜ ನಾಗಣಸೂರ, ವಿಷ್ಣು ಒಂಬಾಸೆ, ಸಾಯಬಣ್ಣ ಬಿರಾದಾರ, ದುಂಡಪ್ಪ ಮೆಂಡೆಗಾರ, ಮಹಾದೇವ ಮನಗೂಳಿ, ಬನ್ನೆವ್ವ ಹಳ್ಳಿ, ಗುಂಡಮ್ಮ ಗಾಣಿಗೇರ, ಉಮ್ಮವ್ವ ಎಲೇರಿ, ದೇವಕ್ಕಿ ದಳವಾಯಿ, ಅಯ್ಯವ್ವ ಆಹೇರಿ, ಸಂಗವ್ವ ನುಚ್ಚಿ, ವಿಜಯಲಕ್ಷ್ಮಿ ಹಿರೇಮಠ, ಬೌರಮ್ಮ ಹಿರೇಮಠ ಮತ್ತಿತರರು ಉಪಸ್ತಿತರಿದ್ದರು.