ಭಕ್ತಾದಿಗಳ ಅನುಕೂಲಕ್ಕೆ ಅನ್ನ ನೀರು ವಿತರಣೆ: ಖಾಸಿಂ ಬಾಬಾ

(ಸಂಜೆವಾಣಿ ವಾರ್ತೆ)
ಚಿತ್ತಾಪುರ:ಜೂ.13:ಪಟ್ಟಣದ ಐತಿಹಾಸಿಕ ಹಿಂದು ಮುಸ್ಲಿಂ ಭಾವೈಕ್ಯತದ ಸಂಕೇತವಾಗಿರುವ ಹಜರತ್ ಚಿತ್ತಾಶಹಾವಲಿ ದರ್ಗಾದ 796ನೇ ಜಾತ್ರೆ (ಉರುಸ್)ಗೆ ದೂರ ದೂರದಿಂದ ಬರುವ ಭಕ್ತಾದಿಗಳಿಗೆ ತೊಂದರೆ ಆಗದಂತೆ ಹಾಜಿ ಮಲಂಗ್ ಬಾಬಾ ಸರಕಾರ್ ವತಿಯಿಂದ ಉಚಿತವಾಗಿ ಅನ್ನದಾಸೋಹ ಹಾಗೂ ಶುದ್ಧ ಕುಡಿಯುವ ನೀರು ವಿತರಿಸುವ ಕಾರ್ಯ ಕಳೆದ 4 ವರ್ಷಗಳಿಂದ ಮಾಡುತ್ತಾ ಬರಲಾಗಿದೆ ಎಂದು ಎಂದು ಖಾಸಿಂ ಬಾಬಾ ಅವರು ಹೇಳಿದರು.
ಪಟ್ಟಣದ ಬಾಹರ್ ಪೇಟ್‍ದ ಚಿತ್ತಾಶಹಾವಲಿ ದರ್ಗಾ ರಸ್ತೆಯಲ್ಲಿ ಸೋಮವಾರ ಹಾಜಿ ಮಲಂಗ್ ಬಾಬಾ ಸರಕಾರ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಅನ್ನದಾಸೋಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಬಿಸಿಲಿನ ತಾಪ ಹೆಚ್ಚಾಗಿದ್ದು ಭಕ್ತಾದಿಗಳ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಜೊತೆಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ ಹೀಗಾಗಿ ಎಲ್ಲ ಭಕ್ತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಶರಣು ಬಾಬಾ, ರಮೇಶ ಪವರ ವಾಡಿ, ಇಸ್ಮಾಯಿಲ್ ಸಾಬ್, ಅಬ್ದುಲ್ ಖದೀರ್, ಕಾಂತು, ಆಕಾಶ ಮೆಂಗನ್, ಶಶಿಕಾಂತ ಚೆಟ್ಟಿ, ಮಹೀಬೂಬ್ ಪಟೇಲ್, ಮೋಸಿನ್ ಸೇಡಂ, ಇಸ್ಮಾಯಿಲ್ ಸೇಡಂ ಇತರರು ಇದ್ದರು.