ಭಕ್ತಾದಿಗಳು ಕುಡಿಯುವ ನೀರು ಸ್ಥಳ ಗಬ್ಬೋ ಗಬ್ಬು

ನಂಜನಗೂಡು: ಮಾ.09:- ಶ್ರೀ ಶ್ರೀಕಂಠೇಶ್ವರ ದೇವಾಲಯದಲ್ಲಿ ಲಕ್ಷಾಂತರ ಭಕ್ತಾದಿಗಳು ದಾಸೋಹ ಮುಗಿಸಿಕೊಂಡು ಕುಡಿಯಲು ನೀರಿನ ವ್ಯವಸ್ಥೆ ಪಕ್ಕದಲ್ಲೇ ಮಾಡಲಾಗಿದೆ ಆ ಸ್ಥಳ ಸ್ವಚ್ಛತೆ ಇಲ್ಲದೆ ಗಬ್ಬು ನಾರುತಿದೆ
ಇದಲ್ಲದೆ ಪ್ರತಿ ದಿನ ಪ್ರತಿ ಕ್ಷಣ ನಲ್ಲಿಗಳು ಮುರಿದುಬಿದ್ದು ನೀರು ಸೋರುತಿದೆ ಮತ್ತು ಅದಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ ಆದಾಯದಲ್ಲಿ ಯಾವುದಕ್ಕೂ ಕಮ್ಮಿ ಇಲ್ಲದೆ ಭಕ್ತಾದಿಗಳು ನೀಡುತ್ತಿರುತ್ತಾರೆ ಆದರೆ ಅಧಿಕಾರಿಗಳ ನಿರ್ಲಕ್ಷೆಯಿಂದ ಈ ರೀತಿ ಗಬ್ಬು ನೀರು ಕುಡಿಯುವ ಸ್ಥಿತಿ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ
ಅಧಿಕಾರಿಗಳೇ ಬೇಸಿಗೆಕಾಲ ಉಂಟಾಗಿದೆ ನೀರಿನ ದಾಹ ಹೆಚ್ಚಾಗಿದೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರನ್ನು ಸ್ವಚ್ಛತೆಯಿಂದ ನೀಡಿ ಅನೇಕ ರೋಗಗಳು ಉಂಟಾಗುವ ದಿನಗಳು ಕ್ಷಣಗಳು ಉಂಟಾಗಿದೆ ಈಗಲಾದರೂ ಎಚ್ಚರಿಕೆಯಿಂದ ಈ ಸ್ಥಳವನ್ನು ಸ್ವಚ್ಛತೆ ಮಾಡಿ ಮುರಿದೆ ಬಿದ್ದಿರುವ ನಲ್ಲಿಗಳನ್ನು ಬದಲಾಯಿಸಿ ಭಕ್ತಾದಿಗಳಿಗೆ ಸ್ವಚ್ಛತೆ ನೀರು ಕೊಡಬೇಕೆಂದು ಭಕ್ತಾದಿಗಳು.