ಭಕ್ತರ ಸಮ್ಮುಖದಲ್ಲಿ ಸಾಯಿ ಬಾಬಾ ವಾರ್ಷಿಕೋತ್ಸವ

ಆನೇಕಲ್.ಫೆ.೨:ಸೇವಗಾನಪಲ್ಲಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಶಿರಡಿ ಸಾಯಿ ಬಾಬಾ ದೇವಾಲಯದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.


ವಿಶೇಷವಾಗಿ ಶ್ರೀ ಮಹಾಗಣಪತಿ, ಶ್ರೀ ದತ್ತಾತ್ರೇಯ, ಶ್ರೀ ಅಭಯ ಆಂಜನೇಯಸ್ವಾಮಿ, ಶ್ರೀ ಶಿರಡಿ ಸಾಯಿ ಬಾಬಾ ದೇವಾಲಯದ ಪ್ರಥಮ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸ್ವಾಮಿಗೆ ಹಾಗೂ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹಾಗೆಯೇ ಹೋಮ, ಅಭಿಷೇಕ, ವಿಶೇಷ ಪೂಜೆ, ಭಜನೆ, ಅನ್ನದಾಸೋಹ ಮತ್ತು ಮಹಿಳೆಯರು ತಲೆ ಮೇಲೆ ಪೂರ್ಣ ಕುಂಭ ಕಳಸ ಹೊತ್ತು ಗ್ರಾಮದ ಪ್ರಮುಖ ರಸ್ತೆಯುಲ್ಲಿ ಮೆರವಣಿಗೆ ನಡೆಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಿರಡಿ ಸಾಯಿ ಬಾಬಾ ದೇವಾಲಯದ ದರ್ಮಾದಿಕಾರಿ ಶ್ರೀನಿವಾಸ್ ರಾಹುಲ್ ರವರು ವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಶ್ರೀ ಶಿರಡಿ ಸಾಯಿ ಧಾಮ್ ಸೇವಾ ಟ್ರಸ್ಟ್ ನ ಆಡಳಿತ ಮಂಡಳಿಯವರು. ಪದಾದಿಕಾರಿಗಳು ಮತ್ತು ಭಕ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.