ಭಕ್ತರ ಬೇಡಿಕೆಯಂತೆ ಅನುದಾನ ನೀಡಿರುವೆ -ಆರ್.ವಿ.ಎನ್

ಸಿರವಾರ.ಜು.೧೦- ಪಟ್ಟಣದ ವಾರ್ಡ್ ನಂ.೩ ರಲ್ಲಿ ಇರುವ ಪುರಾತನ ದೇವಸ್ಥಾನದವಾದ ಶ್ರೀ ವೆಂಕಟರಮಣ ದೇವಸ್ಥಾನ ನೂತನ ಕಟ್ಟಡ ಕಾಮಗಾರಿಗೆ ೨೦೨೦-೨೧ ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ೫ ಲಕ್ಷ ಅನುದಾನ ನೀಡಿ ನೆರವೇರಿಸಿದರು.
ಮಾನವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ನಂತರ ಮಾತಾನಾಡಿ ಬಹುದಿನಗಳ ಬೇಡಿಕೆಯಾದ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಕಟ್ಟಡ ಶಂಕುಸ್ಥಾಪನೆ ಮಾಡಿದ್ದು ಬಹಳ ಸಂತೋಷದ ವಿಚಾರ ವಾರ್ಡಿನ ಜನರು, ಭಕ್ತರು ದೇವಸ್ಥಾನಕ್ಕೆ ಅನುಧಾನ ನೀಡುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನೂತನ ಕಟ್ಟಡಕ್ಕೆ ೫ ಲಕ್ಷ ರೂಪಾಯಿಗಳು ಮಂಜೂರು ಮಾಡಿಸಿದ್ದೇನೆ.
ಎಲ್ಲಾ ಜಾತಿ ಜನಾಂಗದವರಿಗೆ ಉತ್ತಮವಾದ ಮಳೆ-ಬೆಳೆ ಕೊಟ್ಟು ಕಾಪಾಡಲಿ ಎಂದು ಆ ವೆಂಕಟರಮಣ ಹತ್ತಿರ ಪ್ರಾರ್ಥಿಸುತ್ತೇನೆ. ನನ್ನ ನಾಲ್ಕು ವರ್ಷ ಅವಧಿಯಲ್ಲಿ ಕ್ಷೇತ್ರದ್ಯಾಂತ ದೇವಸ್ಥಾನಗಳಿಗೆ, ಮಸೀದಿಗಳಿಗೆ,ಚರ್ಚುಗಳಿಗೆ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ,ಹಿರಿಯ ಮುಂಖಡ ಜಿ. ಲೋಕರೆಡ್ಡಿ,ರಮೇಶದರ್ಶನಕರ್,ಪ. ಪಂ. ಸದಸ್ಯ ಗ್ಯಾನಪ್ಪ, ನಾಗರಾಜ, ಹಸೀನ್ ಅಲಿ, ಮೌಲ ಸಾಬ್ ವರ್ಚಸ್, ಗೋಪಾಲ ನಾಯಕ ಹರವಿ, ಗಂಗಾಧರ, ಇರ್ಫಾನ್ ಬಡಿಗೇರ, ಹನುಮಂತ ಭೋವಿ, ಭಾಷ ಸಾಬ್, ನಾಗರಾಜ ಗೌಡ ಡಿಎನ್‌ವೈ, ದಾನಪ್ಪ ಸಿರವಾರ, ರಾಮಚಾರಿ ಎಸ್.ಕ್ಯಾಂಪ್,ಪಿ ರವಿಕುಮಾರ್, ಬಂದೇ ನವಾಜ್, ಚಂದ್ರಶೇಖರ ಗೌಡ, ಅಂಜಿನೇಯ್ಯ ಬಿಚ್ಚಲಿ, ಸೂಗೂರಾಯ್ಯ ಸ್ವಾಮಿ ಗಣದಿನ್ನಿ, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.