ಭಕ್ತರ ಕೋರಿಕೆಯಂತೆ ಶ್ರೀ ಶರಣಬಸವೇಶ್ವರ ನೂತನ ರಥ ನಿರ್ಮಾಣ

ಕೆಂಭಾವಿ:ಜ.14:ಪಟ್ಟಣ ಸಮೀಪದ ನಗನೂರ ಗ್ರಾಮಕ್ಕೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆ ಆಲೂರು ಗ್ರಾಮದಿಂದ ಶ್ರೀ ಶರಣಬಸವೇಶ್ವರರ ನೂತನ ರಥದ ಅಡಿಪಾಯದೊಂದಿಗೆ ಗ್ರಾಮಕ್ಕೆ ಬರುತ್ತಿದಂತೆ ಭಕ್ತರು ಕುಂಭಮೇಳ, ಡೊಳ್ಳು ಕಣಿತ, ಬಾಜಾ ಬಜಂತ್ರಿಯೊಂದಿಗೆ ಭವ್ಯ ಮೇರವಣೆಗೆಯ ಮೂಲಕ ಮಠಕ್ಕೆ ಕರೆತರಲಾಯಿತು.
ಇದೇ ವೇಳೆ ದಾಸೋಹ ಮಠದ ಪೀಠಾಧಿಪತಿ ಪೂಜ್ಯ ಶರಣಪ್ಪ ಶರಣರು ಮಾತನಾಡಿ ಶ್ರೀ ಶರಣಬಸವೇಶ್ವರ ರಥ ಶಿಥಲಗೊಂಡ ಹಿನ್ನಲೆಯಲ್ಲಿ ಭಕ್ತರ ಕೋರಿಕೆಯಂತೆ ನೂತನ ರಥ ನಿರ್ಮಾಣವಾಗುತ್ತಿದೆ. ರಥ ನಿರ್ಮಾಣಕ್ಕೆ ಸಕಲ ಸದ್ಭಕ್ತರ ಸಹಾಯ ಸಹಕಾರ ಅಶ್ಯವಾಗಿದ್ದು. ಆ ನಿಟ್ಟಿನಲ್ಲಿ ಸಮಸ್ತ ಭಕ್ತರು ರಥ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ನೂತನ ರಥವು 1ಕೋಟಿ 25 ಲಕ್ಷರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಭಾಗದ ಪ್ರಸಿದ್ಧ ಜಾತ್ರೆ ಎಂದೆ ಹೆಸರುವಾಸಿಯಾಗಿರುವ ನಗನೂರ ಗ್ರಾಮದ ಶ್ರೀ ಶರಣಬಸವೇಶ್ವರರ ನೂತನ ರಥ ನಿರ್ಮಾಣ ಕಾರ್ಯವು ಮುಂದಿನ ದಿನಗಳಲ್ಲಿ ಭರದಿಂದ ಸಾಗುವುದರೊಂದಿಗೆ ಭಕ್ತರ ಆಶಯದಂತೆ ಮುಂಬರುವ ಜಾತ್ರೆಯ ವೇಳೆಗೆ ರಥವು ಸಿದ್ಧಗೊಳ್ಳುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗನೂರ, ಖಾನಾಪುರ (ಎಸ್‍ಕೆ), ಗೌಡಗೇರಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು.