ಭಕ್ತರ ಕಷ್ಟಗಳು ಈಡೇರಿಸುವ ಪವಿತ್ರ ಕ್ಷೇತ್ರ

ಚಿತ್ತಾಪುರ:ಮಾ.5: ತಾಲೂಕಿನ ದಿಗ್ಗಾಂವ ಗ್ರಾಮದ ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮ ಜನರ ಕಷ್ಟಕಾರ್ಪಣ್ಯಗಳು ಹಾಗೂ ಭಕ್ತರ ಸಮಸ್ಯೆಗಳು, ಕಷ್ಟಗಳು ಈಡೇರಿಸುವ ಪವಿತ್ರ ಕ್ಷೇತ್ರವಾಗಿದೆ ಎಂದು ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ತಾಲೂಕಿನ ದಿಗ್ಗಾಂವ ಗ್ರಾಮದ ಕಂಚಗಾರಹಳ್ಳದ ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದಲ್ಲಿ ಗುರುವಾರ ನಡೆದ ಲಿಂ.ಶ್ರೀ ಗುರುಲಿಂಗೇಶ್ವರ 19ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಜಾತಿ ಜನಾಂಗದವರನ್ನು ಸಮಾನವಾಗಿ ಕಂಡು ಅವರ ನೋವು ನಲಿವುಗಳಿಗೆ ಇಲ್ಲಿನ ಮಲ್ಲಯ್ಯಸ್ವಾಮಿಗಳು ಸ್ಪಂದಿಸಿ ಪರಿಹಾರ ನೀಡುವ ಅವರ ಸೇವೆ ಎಲ್ಲರೂ ಮೆಚ್ಚುವಂತದ್ದು ಅವರು ಈ ಭಾಗದ ಮಾತೃ ಹೃದಯದ ಸ್ವಾಮಿಗಳಾಗಿದ್ದಾರೆ ಎಂದು ಬಣ್ಣಿಸಿದರು.

ನೇತೃತ್ವ ವಹಿಸಿದ್ದ ಕಂಚಗಾರಹಳ್ಳ ಶ್ರೀ ಮಲ್ಲಯ್ಯಸ್ವಾಮಿ ಸ್ಥಾವರಮಠ ಮಾತನಾಡಿ, ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮ ಈ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಈ ಭಾಗದ ಭಕ್ತರ ಸಹಾಯ ಸಹಕಾರವೇ ಪ್ರಮುಖ ಕಾರಣವಾಗಿದೆ. ಎಷ್ಟೇ ಕಷ್ಟಗಳು ಅಡೆತಡೆಗಳು ಬಂದರೂ ಸಹ ಅವುಗಳನ್ನು ಸಮರ್ಥವಾಗಿ ಎದುರಿಸಿ ಈ ಭಾಗದ ಜನರಲ್ಲಿ ಆಧ್ಯಾತ್ಮಿಕತೆ ಹುಟ್ಟಿಸಲು ಮತ್ತು ಸಮಾಜದ ಬದಲಾವಣೆಗಾಗಿ ಕಳೆದ 19 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಾ ಬರಲಾಗಿದೆ ಎಂದರು.

ಪಾಳಾ ಶ್ರೀ ಗುರುಮೂರ್ತಿ ಶಿವಾಚಾರ್ಯರು, ತೊಟ್ನಳ್ಳಿ ಶ್ರೀ ಶಿವಮೂರ್ತಿ ಶಿವಾಚಾರ್ಯರು, ಹಲಕರ್ಟಿ ಶ್ರೀ ಮುನೀಂದ್ರ ಶಿವಾಚಾರ್ಯರು ಮಾತನಾಡಿದರು. ಅಳ್ಳೋಳ್ಳಿ ಶ್ರೀ ಸಂಗಮನಾಥ ಮಹಾಸ್ವಾಮಿಗಳು, ಯರಗೋಳ ಶ್ರೀ ಸಂಗಮೇಶ್ವರ ಸ್ವಾಮಿಜಿ, ತಾಪಂ ಮಾಜಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣಿ, ಬಿಜೆಪಿ ಮುಖಂಡ ವಿಠಲ್ ನಾಯಕ, ಮೊಗಲಾ ಗ್ರಾಪಂ ಅಧ್ಯಕ್ಷ ತಮ್ಮಣ್ಣ ಡಿಗ್ಗಿ. ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಇತರರು ಇದ್ದರು.

ಗ್ರಾಪಂ ಅಧ್ಯಕ್ಷೆ ಮಂಜುಳಾ ಕಟ್ಟಿಮನಿ, ಪ್ರಮುಖರಾದ ಸಿದ್ದಣ್ಣಗೌಡ ಮಾಲಿ ಪಾಟೀಲ, ಶರಣು ಸಜ್ಜನಶೆಟ್ಟಿ, ಶ್ರೀಮಂತ ಗುತ್ತೇದಾರ, ರಾಮು ಪಾಟೀಲ, ಮಲ್ಲಿನಾಥ ಅವಂಟಿ, ಸೂರ್ಯಕಾಂಥ ಪಿಡಿಒ, ಪಂಪಾಪತಿ ಸಜ್ಜನಶೆಟ್ಟಿ, ನಯನಾ ಹುಬ್ಬಳ್ಳಿ, ಹರಳಯ್ಯ ಬಡಿಗೇರ, ಕೇದರಲಿಂಗ ಬೆನಕನಳ್ಳಿ, ವಿರೇಂದ್ರ ನರಗಾ, ಶಂಭುಲಿಂಗ ಆರ್.ಡಿ, ಮಲ್ಲಿನಾಥ ಭಾಗೋಡಿ, ನಾಗರಾಜ ಪಾಟೀಲ, ಶರಣಪ್ಪ ಹಾಗರಗಿ, ತಿಪ್ಪಣ್ಣ ಸಂಗಾವಿ, ಶರಣಪ್ಪ ಪಲ್ಲೇದ್, ಬಸವರಾಜ ಇಟಗಿ, ಶಾಂತಾ ಟೀಚರ್, ಶಿವಶರಣಯ್ಯ ಸ್ವಾಮಿ, ಶರಣಪ್ಪ ಡೋಣಗಾಂವ, ಶರಣರೆಡ್ಡಿ ಇಜಾರ್, ಶಿವಕುಮಾರ ಸುಲ್ತಾನಪೂರ, ಪ್ರಕಾಶ ಕಾಶಿ, ಜಗನ್ನಾಥ ಸಿದಾ, ಚನ್ನವೀರ ಕಣಗಿ, ಬಸವರಾಜ ಪಲ್ಲೇದ್, ಶಿವನಾಗಪ್ಪ ಮುತ್ತಲಗಡ್, ಹಣಮಂತ ಚೌದರಿ, ಭೀಮರಾಯ ಹೊತಿಮಡಿ, ಸುರೇಶ ಅಚೇಲಿ, ನಾಗೇಂದ್ರ ಡಿಗ್ಗಿ, ಇತರರು ಇದ್ದರು. ಶಾಂತಕುಮಾರ ಬೆಣ್ಣೂರ ಪ್ರಾರ್ಥಿಸಿದರು, ಶ್ರೀಮಂತ ಗುತ್ತೇದಾರ ಪ್ರಾಸ್ತಾವಿಕ ಮಾತನಾಡಿದರು, ಶಂಭುಲಿಂಗಪ್ಪ ಸಂಗಾವಿ ಸ್ವಾಗತಿಸಿದರು, ಶರಣು ಸ್ಥಾವರಮಠ ನಿರೂಪಿಸಿದರು.