ಭಕ್ತರ ಉದ್ಧಾರಕ್ಕೆ ಶ್ರಮಿಸಿದ್ದ ಪರ್ವತಲಿಂಗ ಶಿವಾಚಾರ್ಯ

ಬೀದರ್: ಸೆ.14:ಪರ್ವತಲಿಂಗ ಶಿವಾಚಾರ್ಯರು ಭಕ್ತರ ಉದ್ಧಾರಕ್ಕೆ ಶ್ರಮಿಸಿದ್ದರು ಎಂದು ಹುಮನಾಬಾದ್ ಶಾಸಕ ಡಾ. ಸಿದ್ಧಲಿಂಗಪ್ಪ ಪಾಟೀಲ ನುಡಿದರು.
ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಶ್ರಾವಣ ಪ್ರಯುಕ್ತ ಆಯೋಜಿಸಿದ್ದ ಬಿಲ್ವಾರ್ಚನೆ, ರುದ್ರಾಭಿಷೇಕ ಹಾಗೂ ಪರ್ವತಲಿಂಗ ಶಿವಾಚಾರ್ಯರ 16ನೇ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶತಾಯುಷಿಗಳಾಗಿದ್ದ ಶ್ರೀಗಳು ತಮ್ಮ ತಪೋಶಕ್ತಿಯಿಂದ ಜನರ, ಕಷ್ಟ, ಕಾರ್ಪಣ್ಯಗಳನ್ನು ದೂರ ಮಾಡಿದ್ದರು ಎಂದು ಹೇಳಿದರು.
ಲಾಡಗೇರಿ ಮಠ ಪುರಾತನ ಹಾಗೂ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ತನ್ನ ಶಿಷ್ಯ ಬಳಗವನ್ನು ಹೊಂದಿದೆ. ಮಠದ ಅಭಿವೃದ್ಧಿಗೆ ಅಗತ್ಯ ಸಹಕಾರ ಹಾಗೂ ಅನುದಾನ ಒದಗಿಸುವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಬಿ.ಎಸ್.ಎಸ್.ಕೆ. ಅಧ್ಯಕ್ಷ ಸುಭಾಷ್ ಕಲ್ಲೂರ ಮಾತನಾಡಿ, ಲಾಡಗೇರಿ ಮಠ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಸಂದೇಶ ಸಾರುತ್ತಿದೆ. ಗಂಗಾಧರ ಶಿವಾಚಾರ್ಯರು ಪಾದಯಾತ್ರೆ, ಶಿವಾನುಭವ ಗೋಷ್ಠಿ, ರಥೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಶ್ರಾವಣ ಪವಿತ್ರ ಮಾಸವಾಗಿದೆ. ಭಕ್ತರು ಶಿವಸ್ಮರಣೆ, ಪೂಜೆ, ಪ್ರಾರ್ಥನೆ ಮತ್ತಿತರ ಸತ್ಕಾರ್ಯಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ಜೈ ಮಾತಾ ರಜಪೂತ ಭಜನ ಸಂಧ್ಯಾ ತಂಡದ ಕಲಾವಿದರು ನಡೆಸಿಕೊಟ್ಟ ಭಜನೆ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು.
ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಬಿ.ಎಸ್.ಎಸ್.ಕೆ. ನಿರ್ದೇಶಕ ವಿಶ್ವನಾಥ ಪಾಟೀಲ ಮಾಡಗೂಳ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ, ತಾಲ್ಲೂಕು ಪಂಚಾಯಿತಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಬಸಯ್ಯ ಹಿರೇಮಠ, ಮುಖಂಡರಾದ ಓಂಪ್ರಕಾಶ ರೊಟ್ಟೆ, ಶರಣಪ್ಪ ಮಿಠಾರೆ, ಪ್ರವೀಣ ಸ್ವಾಮಿ, ರವಿ ದುರ್ಗೆ ಕರಬಸಪ್ಪ ಕಲ್ಲೂರ, ಗಿರೀಶ್ ತುಂಬಾ, ನಾಗೇಶ ಕಲ್ಲೂರ, ಬಾಬುರಾವ್ ಗೊಟೂರ, ನಾಗಭೂಷಣ, ಶಿವಶಂಕರ ಬೆಳಮಗಿ, ವರದಯ್ಯ ಸ್ವಾಮಿ, ಬಂಡೆಪ್ಪ ಗಿರಿ, ಮಲ್ಲಪ್ಪ ಹುಲೆಪ್ಪನೋರ, ಮಲ್ಲಿಕಾರ್ಜುನ ಬಸಂತಪುರ, ಶಿವರಾಜ ಅಷ್ಟೂರ, ಚಂದ್ರಪ್ಪ ಅಷ್ಟೂರ, ರುದ್ರಮುನಿ ಸ್ವಾಮಿ, ಬಸಪ್ಪ ಹುಲೆಪ್ಪನೋರ, ಬಸವರಾಜ ಓತಿ, ನಾಗರಾಜ ಹುಲಿ, ರಮೇಶ ವಾಲ್ದೊಡ್ಡಿ, ಬಂಡೆಪ್ಪ ಶೇರಿಕಾರ್ ಮತ್ತಿತರರು ಇದ್ದರು.
ಸಿದ್ರಾಮಯ್ಯ ಹಿರೇಮಠ ಸ್ವಾಗತಿಸಿದರು. ಚನ್ನಬಸವ ನಿರೂಪಿಸಿದರು. ವಿರೂಪಾಕ್ಷಯ್ಯ ಟೆಂಕಸಾಲಿ ವಂದಿಸಿದರು.