ಭಕ್ತರ ಇಷ್ಟಾರ್ಥ ಪೂರೈಸುವ ಸುಂಧಾಳ ವೀರಭದ್ರೇಶ್ವರ:ಡಾ. ಬಸವಲಿಂಗ ಅವಧೂತರ

ಔರಾದ:ಎ.26: ಸುಂಧಾಳ ಅಲ್ಲದೇ ಸುತ್ತಮುತ್ತಲಿನ ಗ್ರಾಮದ ಅದಿ ದೇವರಾದ ವೀರಭದ್ರೇಶ್ವರ ಬಹಳ ಶಕ್ತಿಶಾಲಿ ದೇವರಾಗಿದ್ದು ಇವರನ್ನೂ ಭಕ್ತರು ಭಕ್ತಿಯಿಂದ ಬೇಡಿಕೊಂಡರೆ ಅವರ ಇಷ್ಟಾರ್ಥ ಪೊರೈಸುತ್ತಾನೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.
ಅವರು ಸೋಮವಾರ ಔರಾದ ತಾಲ್ಲೂಕಿನ ಸುಂಧಾಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು

ಶಿವನ 12 ನೇ ಲೀಲೆಯೇ ಶ್ರೀವೀರಭದ್ರೇಶ್ವರ ಅವತಾರ. ಹೀಗಾಗಿ ಇವರು ಅವತಾರ ಪುರುಷರು ಎಂದು ಹೇಳಿದರು.

ವೀರಭದ್ರನೆಂದರೆ ಮಹಾನ ಶಕ್ತಿವಂತ ಅಲ್ಲದೇ ವೀರಭದ್ರನ ಅವತಾರ ಒಂದು ನಿರ್ದಿಷ್ಟ ಗುರಿಯ ಈಡೇರಿಕೆಗಾಗಿ ಆಗಿರಿತ್ತದೆ. ಈಶ್ವರನ ಅವತಾರ ಎಂದು ಹೇಳಿದರು.

ಭಕ್ತರು ನಿತ್ಯ ವೀರಭದೇಶ್ವರ ದೇವರ ಪೂಜೆ ಮಾಡಿ ಕೃಪೆಗೆ ಪಾತ್ರರಾಗಬೇಕು. ಮೋಕ್ಷಕ್ಕಾಗಿ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಾನವ ಜನ್ಮ ಶ್ರೇಷ್ಠವಾಗಿದೆ. ಹೀಗಾಗಿ ಕೇವಲ ಸಂಸಾರದ ಜಂಜಾಟದಲ್ಲೇ ಮುಳುಗದೆ, ಪಾರಮಾರ್ಥದ ಒಲುವನ್ನು ಸಹ ಬೆಳೆಸಿಕೊಳ್ಳಬೇಕು. ಶರಣರು, ಸಂತರು, ಪೂಜ್ಯರ ವಾಣಿಗಳನ್ನು ಆಲಿಸಬೇಕು, ತಂದೆ ತಾಯಿಯ ಜೀವಿತವರೆಗೂ ಅವರ ಸೇವೆ ಮಾಡಲೇ ಬೇಕು ಎಂದರು

ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಆರೋಗ್ಯ ಹಾಳಾಗುತ್ತದೆ ಪೋಷಕರು ಮಕ್ಕಳನ್ನೂ ರಕ್ಷಿಸಿ ಕೊಳ್ಳಬೇಕು ಎಂದು ನುಡಿದರು

ಇನ್ನೋಬರ ಬಗ್ಗೆ ದೂರಾಲೋಚನೆ ಮಾಡಬೇಡಿ ಒಂದು ವೇಳೆ ಮಾಡಿದರೆ ನಿಮ್ಮಗೆ ಕೆಟ್ಟದಾಗುತ್ತದೆ. ಜಪ ತಪ ದೇವರ ಧ್ಯಾನ ಮಾಡಿ ಮನಸ್ಸಿಗೆ ಸಮಧಾನ ತಂದು ಕೊಳ್ಳಿ ಎಂದು ಹೇಳಿದರು.

ಗ್ರಾಮದ ಮುಖಂಡರಾದ ಕಾಶಿನಾಥ ಮಾಲಿ ಪಾಟೀಲ, ಶಂಕರಾವ ಮಾಲಿ ಪಾಟೀಲ, ಡಾ. ಆನಂದ ಸ್ವಾಮಿ, ಚಂದ್ರಶೇಖರ ಪಾಟೀಲ, ಬಾಬು ಗಂಗೋಜಿ, ಶಿವಕುಮಾರ ಶೆಟಕಾರ, ಮಲ್ಲಿಕಾರ್ಜುನ ಅಲ್ಲೂರೆ, ಸಂತೋಷ ಭಾಲ್ಕೆ, ಪ್ರೇಮ ಔರಾದ

ಮೊದಲಾದವರು ಪಾಲ್ಗೊಂಡಿದ್ದರು

ಇದಕ್ಕೂ ಮುನ್ನ ವೀರಭದ್ರೇಶ್ವರ ದೇವಸ್ಥಾನದ ಮುಖ್ಯದ್ವಾರ ಡಾ. ಬಸವಲಿಂಗ ಅವಧೂತರು ಉದ್ಘಾಟಿಸಿದರು. ನಂತರ ಶ್ರೀ ವೀರಭದ್ರೇಶ್ವರ ದೇವರಿಗೆ ಬಸವಲಿಂಗ ಅವಧೂತರು ಪೂಜೆ ಸಲ್ಲಿಸಿದರು.

ಮುಖ್ಯ ರಸ್ತೆಯಿಂದ ವೀರಭದ್ರೇಶ್ವರ ದೇವಸ್ಥಾನದ ವರೆಗೆ ಡಾ. ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು. ಕಳಸ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿದರು.