ಭಕ್ತರಿಂದ ಹೆಚ್ಚು ಹಣ ವಸೂಲಿಗೆ ಕಡಿವಾಣ ಹಾಕಿದ ದರ್ಶನ್ ದ್ರುವ

ಸಂಜೆವಾಣಿ ವಾರ್ತೆ
ನಂಜನಗೂಡು: ಫೆ.29:- ಶ್ರೀ ಶ್ರೀಕಂಠೇಶ್ವರ ದೇವಾಲಯದಲ್ಲಿ ವಾಹನ ಪಾರ್ಕಿಂಗ್ ಮತ್ತು ಶೌಚಾಲಯ ಗುತ್ತಿಗೆದಾರರು ಭಕ್ತಾದಿಗಳಿಂದ ನಿಗದಿತ ಹಣಕ್ಕಿಂತ ಹೆಚ್ಚು ಹಣ ವಸೂಲಿ ಪಡೆಯುತ್ತಿದ್ದಾರೆ ಎಂದು ದೂರುಗಳು ಬಂದಿದ್ದವು ಅದಕ್ಕೆ ನಿಗದಿತ ಹಣ ಎಷ್ಟು ಎಂಬುದನ್ನು ಬರೆಸಿ ಬೋರ್ಡ್ ಹಾಕಿಸಿದ ಶಾಸಕ ದರ್ಶನ್ ದ್ರುವ ನಾರಾಯಣ್.
ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಪ್ರತಿದಿನ ಬರುತ್ತಾರೆ ಅದರಲ್ಲೂ ಭಾನುವಾರ ಸೋಮವಾರ ಹುಣ್ಣಿಮೆ ದಿನ ರಜೆ ದಿನಗಳಲ್ಲಿ ಹೆಚ್ಚಾಗಿ ದೇವಸ್ಥಾನಕ್ಕೆ ಬರ್ತಾರೆ ಜೊತೆಗೆ ಸ್ವಂತ ವಾಹನಗಳಲ್ಲಿ ಬಂದು ದೇವರ ದರ್ಶನ ಪಡೆಯುತ್ತಾರೆ ದೇವಸ್ಥಾನ ವತಿಯಿಂದ ವಾಹನ ಪಾರ್ಕಿಂಗ್ ಮತ್ತು ಶೌಚಾಲಯ ಉಪಯೋಗಕ್ಕೆ ದೇವಸ್ಥಾನಕ್ಕೆ ಬರುವಂತ ಭಕ್ತಾದಿಗಳು ಹಣ ನೀಡುವಂತೆ ಟೆಂಡರ್ ಪ್ರತಿ ವರ್ಷ ನಡೆಯುತ್ತದೆ ದೇವಸ್ಥಾನದ ವತಿಯಿಂದ ಟೆಂಡರ್ ದಾರರಿಗೆ ನಿಗದಿತ ಹಣ ಪಡೆಯಬೇಕು ಹೆಚ್ಚಿನ ಹಣ ಪಡೆಯಬಾರದೆಂದು ಸೂಚನೆ ನೀಡಿದರು ಕೂಡ ಹೆಚ್ಚು ಹಣ ವಸೂಲಿ ಮಾಡುತ್ತಿದ್ದರು ಕೆಲವು ತಿಂಗಳಿಂದ ದೇವಸ್ಥಾನದ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಏನು ಪ್ರಯೋಜನ ಆಗದೆ ಇರುವ ಸಂದರ್ಭದಲ್ಲಿ ಶಾಸಕರ ಗಮನಕ್ಕೆ ತಂದಾಗ ಶಾಸಕರು ಖುದ್ದಾಗಿ ದೇವಸ್ಥಾನ ಆವರಣ ಕಪಿಲಾ ನದಿ ವಾಲಾ ಪಾರ್ಕಿಂಗ್ ಶೌಚಾಲಯಕ್ಕೆ ಭೇಟಿ ನೀಡಿ ಆಗುತ್ತಿರುವ ಹಣದ ವಸೂಲಿ ಬಗ್ಗೆ ಗಮನಹರಿಸಿ ತಕ್ಷಣ ದೇವಸ್ಥಾನದ ಇಒ ಜಗದೀಶ್ ರವರಿಗೆ ಟೆಂಡರ್ ದಾರರಿಗೆ ಆದೇಶ ನೀಡಿರುವಂತೆ ಭಕ್ತರಿಂದ ಹಣ ವಸೂಲಿ ಮಾಡುವಂತೆ ಸೂಚಿಸಿದರು ಜೊತೆಗೆ ಆ ಸ್ಥಳಗಳಲ್ಲಿ ನಿಗದಿತ ಹಣ ಎಷ್ಟು ಎಂಬುದನ್ನು ಬರಸಿ ಬೋರ್ಡ್ ಹಾಕುವಂತೆ ಸೂಚನೆ ನೀಡಿದರು ಅದರಂತೆ ಶೌಚಾಲಯ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ನಿಗದಿತ ಬೆಲೆ ಇರುವ ಬೋರ್ಡ್ ಹಾಕಿಸಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಭಕ್ತಾದಿಗಳಿಂದ ಹೆಚ್ಚು ಹೆಚ್ಚು ಹಣ ವಸೂಲಿ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಿದ್ದಾರೆ.
ಭಕ್ತಿಮಾರ್ಗದಲ್ಲಿ ನೀರಿನ ಕಾರಂಜಿ ಇದೆ ಅದರ ಮಧ್ಯ ಶಿವನ ವಿಗ್ರಹ ಇದೆ ಮಾಜಿ ಸಚಿವ ದೇವಸ್ಥಾನದ ಅಭಿವೃದ್ಧಿ ಹರಿಕಾರ ದಿವಂಗತ ಬೆಂಕಿ ಮಹದೇವ್ ದೇವಸ್ಥಾನ ಅಭಿವೃದ್ಧಿ ಸಂದರ್ಭದಲ್ಲಿ ಈ ವಿಗ್ರಹವನ್ನು ಭಕ್ತಿ ಮಾರ್ಗದಲ್ಲಿ ಸ್ಥಾಪಿಸಿದರು ಮೊದಲು ಶಿವನ ತಲೆ ಮೇಲೆ ನೀರು ಬರುವಂತೆ ವ್ಯವಸ್ಥೆ ಇತ್ತು ಆದರೆ ಕಸ ಕಡ್ಡಿಗಳಿಂದ ತುಂಬಿಕೊಂಡು ಗಬ್ಬು ನಾರುತಿತ್ತು ಆದರೆ ಸುಮಾರು ವರ್ಷಗಳಿಂದ ಶಿವನ ತಲೆಯ ಮೇಲೆ ನೀರು ಬಿಡದೆ ಬಿಸಿನಲ್ಲಿ ಒಣಗುತ್ತಿದ್ದ ಕಂಡು ಶಾಸಕ ದರ್ಶನ್ ದ್ರುವ ನಾರಾಯಣ್ ದೇವಸ್ಥಾನದ ಆಡಳಿತ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತಕ್ಷಣ ಮೋಟರ್ ಮತ್ತು ವೈರಿಂಗು ಬದಲಾಯಿಸುವಂತೆ ಸೂಚನೆ ನೀಡಿ ತಕ್ಷಣ ಸೇವನಾ ತಲೆ ಮೇಲೆ ನೀರು ಬರುವಂತೆ ಆಗಬೇಕು ಎಂದು ಆದೇಶ ಮಾಡಿದರು ಆ ಕೆಲಸವೂ ಕೂಡ ಈಡೇರಿದೆ ಶಿವನ ತಲೆಯ ಮೇಲೆ ನೀರು ಬಿದ್ದು ತಣ್ಣಗಾಗಿದ್ದಾನೆ ಒಟ್ಟಾರೆ ಶ್ರೀ ಶ್ರೀಕಂಠೇಶ್ವರ ದೇವಾಲಯದ ಅಭಿವೃದ್ಧಿ ಬಗ್ಗೆ ಚಿಂತಸುತ್ತಿರುವ ಶಾಸಕ ದರ್ಶನ್ ಧ್ರುವ ನಾರಾಯಣ್ ಬಗ್ಗೆ ಭಕ್ತಾದಿಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಇದರ ಜೊತೆಗೆ ಬರುವ ಭಕ್ತಾದಿಗಳಿಗೆ ತಂಗಲು ಆದಷ್ಟು ಬೇಗ ನೂತನ ಡಾರ್ಮೆಟ್ರಿ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.