ಭಕ್ತರಿಂದ ದೇವಿಗೆ ಬೆಳ್ಳಿಮುಖ,ವಿಶೇಷ ಹೋಮ, ಪೂಜೆ

ಕೂಡ್ಲಿಗಿ.ನ.5:-ತಾಲೂಕಿನ ಚಿಕ್ಕೊಬನಹಳ್ಳಿ ಗ್ರಾಮದ ಭಕ್ತರೊಬ್ಬರು ಶ್ರೀ ದೇವಿಗೆ ಬೆಳ್ಳಿಮುಖ ನೀಡಿ ಇಂದು ವಿಶೇಷ ಹೋಮ, ಪೂಜೆ ನೆರವೇರಿಸಿದರು.
ತಾಲೂಕಿನ ಚಿಕ್ಕೋಬನಹಳ್ಳಿಯ ಪಾಪಯ್ಯನವರ ಕುಟುಂಬದ ಲಕ್ಷ್ಮೀದೇವಿ ಎಂಬುವವರು ಗ್ರಾಮದ ಗ್ರಾಮದೇವತೆ ಶ್ರೀ ಆದಿ ಮಲಿಯಮ್ಮದೇವಿಗೆ ತನ್ನ ಹರಕೆಯಂತೆ ದೇವಿಗೆ ಬೆಳ್ಳಿಮುಖ ನೀಡಿ ವಿಶೇಷ ಗಂಗೆ ಪೂಜೆ ಹೋಮ ಹವನ ನಡೆಸಲಾಗಿತ್ತು ಹಾಗೂ ದೇವಿಗೆ ಪೂಜೆ ಸಲ್ಲಿಸಲು ಪೂಜಾರಿ ಚನ್ನವೀರಪ್ಪ ಎಂಬುವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಭಕ್ತ ಸಮೂಹ ಸೇರಿತ್ತು.