ಭಕ್ತರನ್ನು ಸನ್ಮಾರ್ಗದೆಡೆಗೆ ಸಾಗಲು ಶ್ರಮಿಸುತ್ತಿರುವ ಶ್ರೀ ಮಠದ ಕಾರ್ಯ ಶ್ಲಾಘನೀಯ

ಕೆಂಭಾವಿ:ಮೇ.25:ಮನುಷ್ಯನ ಮನಸ್ಸು ನಿಗ್ರಹಿಸಿ ಅಂತರಂಗದ ಆತ್ಮಜ್ಞಾನ ಹೆಚ್ಚಿಸಿ ಅಧ್ಯಾತ್ಮದೆಡೆಗೆ ಕೊಂಡೊಯ್ಯುವುದೆ ಸತ್ಸಂಗ ಎಂದು ಅಮೀನಗಡದ ಶಿವಶರಣೆ ಮಂಜುಳಾ ಮಾತೋಶ್ರೀ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಗುರುವಾರ ಸಂಜೆ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ಸಂಸ್ಕಾರ, ಸಂಸ್ಕøತಿ, ಸನ್ನಡತೆ, ಸನ್ಮಾರ್ಗದಡೆಗೆ ಸಾಗಲು ಪ್ರತಿ ತಿಂಗಳು ಪ್ರೇರೇಪಣೆ ನೀಡುತ್ತಿರುವ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಷ ಬ್ರ ಚನ್ನಬಸವ ಶಿವಾಚಾರ್ಯರ ಕಾರ್ಯ ಅಭಿನಂದನೀಯ ಎಂದವರು, ಲಕ್ಷ ಕೊಟ್ಟು ಕೇಳುವ ಲಕ್ಷವಿಲ್ಲದಿದ್ದರೆ ಎಲ್ಲವೂ ಅಲಕ್ಷ್ಯ ಎನ್ನುತ್ತಾ, ಗುರು ಸನ್ನಿಧಿಯಲ್ಲಿ ಸೇರಿದಾಗ ಮಾನವ ಜೀವನ ಸಾರ್ಥಕವಾಗುತ್ತದೆ, ಪರಿಶುದ್ಧವಾಗಿ ವಿಜೃಂಭಿಸುತ್ತದೆ, ವಿಭಿನ್ನವಾಗಿ ಕಂಗೊಳಿಸುತ್ತಿದೆ, ಎಂದು ಆಶಿಸಿದರು.
ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಷ ಬ್ರ ಚನ್ನಬಸವ ಶಿವಾಚಾರ್ಯರು ಭಗವಾನ್ ಬುದ್ಧನಿಗೆ ಜ್ಞಾನೋದಯವಾದ ಆಗಿಹುಣಿಮೆ ದಿನದಂದು ಅನುಭವದ ಅಮೃತ ಧಾರೆ ಎರೆದು ಮಂಜುಳಾ ಅಮ್ಮನವರ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಬದುಕು ಅರ್ಥಪೂರ್ಣವಾಗುತ್ತದೆ ಎಂದರು.
ಸೋಮನಾಥ ಯಾಳಗಿ, ಯಮನೇಶ ಹಗ್ಗನದೊಡ್ಡಿ ಹಾಗೂ ಲಕ್ಷೀ ಬಸವರಾಜ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಡಾ ಯಂಕನಗೌಡ ಎಸ್ ಪಾಟೀಲ ನಿರೂಪಿಸಿ ವಂದಿಸಿದರು, ಪ್ರಮುಖರಾದ ಪ್ರಶಾಂತ ಹಿರೇಮಠ, ನಿಜಗುಣ ವಿಶ್ವಕರ್ಮ, ಅವ್ವಣ್ಣ ಮಡಿವಾಳಕರ್, ಸೇರಿದಂತೆ ಆನೇಕ ಸದ್ಭಕ್ತರು ಮಹಿಳೆಯರು ಮಕ್ಕಳು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.