ಭಕ್ತಕನಕದಾಸರು ಸಮಾಜ ಸುಧಾರಕರು: ಕಿರಣ್ ಮಿರಜ್ಕರ್


 ಹಿರಿಯೂರು.ನ. 22;  ಭಕ್ತ ಕನಕದಾಸರು ಸಮಾಜ ಸುಧಾರಕರು ಸಮಾಜದಲ್ಲಿ ಶೋಷಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕೀರ್ತನೆಗಳ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು ಎಂದು ಸಾಹಿತಿ ಕಿರಣ್ ಮಿರಜ್ಕರ್ ಹೇಳಿದರು. ನಗರದ ಶ್ರೀ ಕನಕ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು . ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದ ಕನಕದಾಸರು 16ನೇ ಶತಮಾನದ  ಕವಿ-ಸಂತ ತತ್ವಜ್ಞಾನಿ ಸಂಯೋಜಕರು ಸಂಗೀತಗಾರರು ಅಂತಹ ಮಹಾತ್ಮರ ಜಯಂತಿ ಕಾರ್ಯಕ್ರಮ ಆಚರಿಸುತ್ತಿರುವುದು ಸಂತೋಷದ ವಿಚಾರ ಎಂದರು. ಉಡುಪಿ ಶ್ರೀಕೃಷ್ಣ ಕನಕದಾಸರಿಗೆ ದರ್ಶನ ನೀಡಿದ ಬಗ್ಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿ ಅಶ್ವಿನಿ, ರಘು, ಇನಾಯತ್ ಮತ್ತಿತರರು ಪಾಲ್ಗೊಂಡಿದ್ದರು.