
ತಾಳಿಕೋಟೆ:ಆ.8: ತಾಲೂಕಿನ ಭಂಟನೂರ ಗ್ರಾಮದ ಗ್ರಾಂ ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ಸೋಮವಾರರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಶ್ರೀಮತಿ ರೇಖಾ ನಿಂಗಣ್ಣ ಹವಾಲ್ದಾರ(ಶಳ್ಳಗಿ) ಉಪಾಧ್ಯಕ್ಷರಾಗಿ ಶ್ರೀಮತಿ ಮಲ್ಲಮ್ಮ ನಿಂಗಣ್ಣ ಮಡಿವಾಳರ(ಫೀರಾಪೂರ) ಅವರು ಅವಿರೋಧವಾಗಿ ಆಯ್ಕೆಯಾದರು.
ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಿಟ್ಟ ಸ್ಥಾನಕ್ಕೆ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ರೇಖಾ ಹವಾಲ್ದಾರ ಅವರು ಹಾಗೂ ಹಿಂದೂಳಿದ ವರ್ಗ ಬ ಗೆ ಮೀಸಲಿಟ್ಟ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಮಲ್ಲಮ್ಮ ಮಡಿವಾಳರ ಅವರು ತಲಾ ಒಬ್ಬಬರೇ ನಾಮ ಪತ್ರ ಸಲ್ಲಿಸಿದರು. ಹೀಗಾಗಿ ಅಧ್ಯಕ್ಷರಾಗಿ ಶ್ರೀಮತಿ ರೇಖಾ ಹವಾಲ್ದಾರ ಉಪಾಧ್ಯಕ್ಷರಾಗಿ ಮಲ್ಲಮ್ಮ ಮಡಿವಾಳರ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಎಸ್.ಜೆ.ನಾಯಕ ಅವರು ಘೋಷಿಸಿದರು.
ಚುನಾವಣೆಯ ಪ್ರಕ್ರೀಯೇಯಲ್ಲಿ ಅಭಿವೃದ್ದಿ ಅಧಿಕಾರಿ ಎಸ್.ವಾಯ್.ದಳವಾಯಿ ಅವರು ಸಹಾಯಕರಾಗಿ ಅವರು ಕಾರ್ಯನಿರ್ವಹಿಸಿದರು.
ಒಟ್ಟು 19 ಜನ ಸದಸ್ಯರ ಬಲಹೊಂದಿರುವ ಭಂಟನೂರ ಗ್ರಾಂಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.
ವಿಜಯೋತ್ಸವ
ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಹಾಗೂ ಜೆಡಿಎಸ್ ಮುಖಂಡ ಮಲ್ಲನಗೌಡ ಪೊಲೀಸ್‍ಪಾಟೀಲ, ರಾಜುಗೌಡ ಕೊಳೂರ, ಜೆಡಿಎಸ್ ತಾಲೂಕಾ ಕಾರ್ಯಾಧ್ಯಕ್ಷ ಮಡುಸಾಹುಕಾರ ಬಿರಾದಾರ, ಶಂಕರಗೌಡ ದೇಸಾಯಿ, ಈಸುಗೌಡ ನಾಡಗೌಡ, ಪ್ರಭುಗೌಡ ನಾಡಗೌಡ, ರಾಜುಗೌಡ ಯಾಳಗಿ, ವಿಶ್ವನಾಥಗೌಡ ಲಕ್ಕುಂಡಿ, ಪಂಚಯ್ಯ ಹಿರೇಮಠ, ಡಾ.ಭಲವಂತ್ರಾಯ ನಡಹಳ್ಳಿ ಕಾಶಿರಾಯಗೌಡ ದೇಸಾಯಿ, ಅವರ ನೇತೃತ್ವದಲ್ಲಿ ಆಯ್ಕೆಗೊಂಡ ನೂತನ ಅಧ್ಯಕ್ಷೆ ಶ್ರೀಮತಿ ರೇಖಾ ಹವಾಲ್ದಾರ ಅವರು ಬೆಂಬಲಿಗರೊಂದಿಗೆ ಗುಲಾಲ್ ಎರಚಿ, ಪಟಾಕ್ಷೀ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಮಯದಲ್ಲಿ ಮುಖಂಡರುಗಳಾದ ನಿಂಗನಗೌಡ ಕೋರಿ, ಮಂಜು ಗೋನಾಳ, ಸಾಹೇಬಗೌಡ ಗುಡಗುಂಟಿ, ರಾಮನಗೌಡ ಪಾಟೀಲ, ಹಣಮಂತ್ರಾಯ ಹರಿಜನ, ಭೀಮಪ್ಪ ರತ್ನಾಕರ, ಬಸವರಾಜ ಸಜ್ಜನ, ಲಾಲಸಾ ಅರಕೇರಿ, ಹಾರನ್ ಖಾಜಿ, ಶಂಕರಗೌಡ ನಾಯ್ಕಲ್, ಮಾಳಪ್ಪ ಫೀರಾಪೂರ, ಮೊದಲಾದವರು ಪಾಲ್ಗೊಂಡಿದ್ದರು.