ಬÁಲಕಾರ್ಮಿಕರ- ಕಿಶೋರ ಕಾರ್ಮಿಕರ ವಿರುದ್ಧ ಜಾಗೃತಿ ರಥಯಾತ್ರೆಗೆ ಚಾಲನೆ

ಸೇಡಂ,ಮಾ,23: ಪಟ್ಟಣದ ಕೋರ್ಟ್ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಕಲಬುರಗಿ ರವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕರ ಹಾಗೂ ಕಿಶೋರ ಕಾರ್ಮಿಕರ ನೇಮಕಾತಿ ವಿರುದ್ಧ ಜಾಗೃತಿ ರಥಕ್ಕೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ, ಗೌ,ಎನ್,ಪಿ, ಕೋಪರ್ಡೆ ಚಾಲನೆ ನೀಡಿದರು.
ಈ ವೇಳೆಯಲ್ಲಿ ಬಾಲಕಾರ್ಮಿಕರ ಜಿಲ್ಲಾ ಯೋಜನಾಧಿಕಾರಿಗಳಾದ ಸತೀಶ್ ಕುಲಕರ್ಣಿ, ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌ, ವಿಜಯಕುಮಾರ್ ಜಟ್ಲಾ, ತಾಲೂಕಾ ವಕೀಲರ ಸಂಘದ ಅಧ್ಯಕ್ಷರಾದ ಸತೀಶ್ ಪಾಟೀಲ್ ತರನಳ್ಳಿ, ರಾಜಕುಮಾರ್ ಸ್ವಾಮಿ, ಬಸವರಾಜ ತಡಕಲ್, ಜಿಲ್ಲಾ ಸೈಡ್ ಲೈನ್ ಸಹಾಯಕರಾದ ದೇವೇಂದ್ರಪ್ಪ, ಇನ್ನಿತರರು ಇದ್ದರು.