ಬ್ಲ್ಯಾಕ್ ಫಂಗಸ್ : ಹೆಚ್ಚಿನ ಇಂಜಕ್ಷನ್ ಪೂರೈಕೆ

ರಾಯಚೂರು.ಜೂ.೧೦- ಬ್ಲ್ಯಾಕ್ ಫಂಗಸ್ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ ರಾಯಚೂರು ಜಿಲ್ಲೆಗೆ ಹೆಚ್ಚಿನ ಎಂಪೋಟೇರಿಸಿನ್ ಬಿ ಇಂಜಕ್ಷನ್ ಹಾಗೂ ಇತರೆ ತತ್ಸಂಬಂಧಿ ಔಷಧಿ ಒದಗಿಸುವುದಾಗಿ ರಾಜ್ಯ ಔಷಧಿ ನಿರ್ವಹಣಾ ನೋಡಲ್ ಅಧಿಕಾರಿಯಾದ ಅಂಜುಮ್ ಪರ್ವೇಜ್ ಅವರು ಭರವಸೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಅವರನ್ನು ಭೇಟಿಯಾಗಿದ್ದ ಯುವ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸ್ಥಿತಿಗತಿ ವಿವರಿಸಿದರು. ಅತಿ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಔಷಧಿಗಳ ಕೊರತೆ ಚಿಕಿತ್ಸೆಗೆ ಅಡ್ಡಿಯಾಗಿದೆ. ಹೆಚ್ಚಿನ ಔಷಧಿಗಳನ್ನು ಕಳುಹಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅವರು, ಜಿಲ್ಲೆಗೆ ಹೆಚ್ಚಿನ ರೀತಿಯಲ್ಲಿ ಔಷಧಿಗಳನ್ನು ಪೂರೈಸುವ ಭರವಸೆ ನೀಡಿದ್ದಾರೆಂದು ರವಿ ಬೋಸರಾಜು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಸೋಂಕಿತರಿಗೆ ತೊಂದರೆಯಾಗದಂತೆ ಔಷದೋಪಚಾರಗಳನ್ನು ಪೂರಕವಾದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆಂದು ಭರವಸೆ ನೀಡಿದ್ದು, ಇದರಿಂದ ಅಲ್ಲಿಯ ಸೋಂತಿಕರಿಗೆ ಅಕೂಲವಾಗಲಿದೆಂದು ಹೇಳಿದರು.