ಬ್ಲ್ಯಾಕ್ ಫಂಗಸ್ ಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಿರಿ

ರಾಯಚೂರು.ಜೂ.೦೨- ದೇಶದಲ್ಲಿ ಬ್ಲ್ಯಾಕ್ ಫಂಗಸ್ ಜನತೆಯನ್ನು ಕಾಡುತ್ತಿದೆ. ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುವಾಗ ಮೂಗಿನ ಸುತ್ತ ಕೆಂಪಾಗುವುದು, ತಲೆನೋವು, ಕೆಮ್ಮು, ಕಣ್ಣಿನ ಕೆಳಗಡೆ ಉಬ್ಬುವುದು ಕಂಡು ಬಂದರೆ ತಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ತಿಳಿಸಿ ಅವರ ಸಲಹೆ ಮೇರೆಗೆ ಬ್ಲ್ಯಾಕ್ ಫಂಗಸ್ ಪರೀಕ್ಷಿಸಿಕೊಳ್ಳಲು ಕ್ಲಾರಿಟಿ ಡಯಾಗ್ನೋಸ್ಟಿಕ್ಸ್‌ನ ರೆಡಿಯಾಲಜಿಸ್ಟ್ ಡಾ.ಮಲ್ಲಿಕಾರ್ಜುನ ರವರು ಸಾರ್ವಜನಿಕರಿಗೆ ತಿಳಿಸಿರುತ್ತಾರೆ.
ಕಳೆದ ೧೫ ದಿನಗಳಲ್ಲಿ ೩೫ ಕ್ಕೂ ಅಧಿಕ ಜನರಿಗೆ ನಮ್ಮಲ್ಲಿ ಪರೀಕ್ಷೆ ಮಾಡಿದಾಗ ಅವರಿಗೆ ಬ್ಲ್ಯಾಕ್ ಫಂಗಸ್ ಧೃಡ ಪಟ್ಟಿರುವುದು ಆತಂಕಕಾರಿ ವಿಷಯವಾಗಿದೆ. ಅಲ್ಲದೇ ಬ್ಲ್ಯಾಕ್ ಫಂಗಸ್ ಧೃಡ ಪಟ್ಟವರೆಲ್ಲರೂ ಕೊರೊನಾ ಸೋಂಕು ಚಿಕಿತ್ಸೆ ಪಡೆದು ಆರೋಗ್ಯವಾಗಿ ಮನೆಗೆ ಹೋದ ನಂತರ ಅವರು ಪುನಃ ಬ್ಲ್ಯಾಕ್ ಫಂಗಸ್ ಪರೀಕ್ಷೆಗೆ ಬಂದವರು ಆಗಿರುತ್ತಾರೆ.
@೧೨bಛಿ = ಬ್ಲ್ಯಾಕ್ ಫಂಗಸ್ ಲಕ್ಷಣಗಳು
ಕೊರೊನಾ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅದರಲ್ಲೂ ಸ್ಟೀರಾಯ್ಡ್ ಬಳಸಿದವರಲ್ಲಿ ದೇಹ ಇನ್ನಷ್ಟು ಬಳಲಿರುತ್ತದೆ. ಹೀಗಾಗಿ ಬ್ಲ್ಯಾಕ್ ಫಂಗಸ್ ಮೂಗಿನ ಮೂಲಕ ದೇಹವನ್ನು ಸೇರುತ್ತದೆ. ತಕ್ಷಣವೇ ಕಣ್ಣು, ಮೆದುಳಿಗೆ ಆವರಿಸುತ್ತದೆ. ಬ್ಲ್ಯಾಕ್ ಫಂಗಸ್ ಮೂಗಿಗೆ ತಗುಲಿದಾಗ ತಕ್ಷಣವೇ ಎಚ್ಚರಗೊಂಡು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಸುಲಭವಾಗಿ ಗುಣಮುಖರಾಗಬಹುದು. ಇಲ್ಲದಿದ್ದರೆ, ಅದು ಕಣ್ಣಿಗೆ ತಗುಲಿದರೆ ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಇದೆ. ಮೆದುಳಿಗೆ ಬ್ಲ್ಯಾಕ್ ಫಂಗಸ್ ಆವರಿಸಿದರೆ, ಇನ್ನೂ ಕಷ್ಟಕರ. ಹೀಗಿರುವಾಗ ಮೇಲಿನ ಲಕ್ಷಣಗಳು ಕಂಡು ಬಂದರೆ ಎಂಆರ್‌ಐ ಸ್ಕ್ಯಾನ್ ಜೊತೆಗೆ ಕಾಂಟ್ರಾಸ್ಟ್‌ಸ್ಡಡಿ ಮೂಲಕ ಬ್ಲ್ಯಾಕ್ ಫಂಗಸ್ ಕಂಡು ಹಿಡಿಯ ಬಹುದಾಗಿದೆ ಎಂದು ಡಾ.ಮಲ್ಲಿಕಾರ್ಜುನ ರವರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.