ಬ್ಲ್ಯಾಕ್ ಫಂಗಸ್; ಕಡಿವಾಣಕ್ಕೆ ಔಷಧಿ ಕೊರತೆ

ಬೆಂಗಳೂರು, ಜೂ.೫- ರಾಜ್ಯದಲ್ಲಿ ದಿನೇ ದಿನೇ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ಸೋಂಕಿನ ವೇಗ ಹೆಚ್ಚುತ್ತಿದ್ದು, ಇದರ ವಿರುದ್ಧ ತೀವ್ರವಾಗಿ ಹೋರಾಟ ನಡೆಸುವ ಮೂಲ ಔಷಧಿಗಳ ಕೊರತೆ ಉಂಟಾಗಿದೆ ಎನ್ನುವ ದೂರುಗಳು ಕೇಳಿಬಂದಿದೆ.
ರಾಜಧಾ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಈ ಸೋಂಕಿನಿಂದ ಬರೋಬ್ಬರಿ ೧,೪೯೩ ರೋಗಿಗಳು ಬಳಲುತ್ತೀರುವ ನಡುವೆ ನಿನ್ನೆಯಷ್ಟೇ, ಹೆಚ್ಚುವರಿಯಾಗಿ ೯೭೫೦ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.
ಆ ಮೂಲಕ ಈ ವರೆಗೂ ಕರ್ನಾಟಕಕ್ಕೆ ೨೨೪೬೦ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಆದರೆ, ಕರ್ನಾಟಕಕ್ಕೆ ಒಟ್ಟು ೭೫,೦೬೩ ಔಷಧಿಗಳ ಅಗತ್ಯತೆ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಕಳೆದ ೨೪ ಗಂಟೆಗಳ ಮಾಹಿತಿ ಪ್ರಕಾರ ಒಟ್ಟು ಆಂಫೊಟೆರಿಸಿನ್-ಬಿ ೫೨,೬೦೩ ??ಔಷಧಿಗಳ ಕೊರತೆ ಇದೆ.ಇನ್ನು, ರಾಜ್ಯದ ಖಾಸಗಿ ಆಸ್ಪತ್ರೆಗಳು ತನ್ನ ೯೫೬ ರೋಗಿಗಳಿಗೆ ೩೮,೭೮೮ ಇಂಡೆಂಟ್ ಔಷಧಿ ಅನ್ನು ಸಂಗ್ರಹಿಸಿವೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ೫೩೭ ರೋಗಿಗಳಿಗೆ ೩೬,೨೭೫ ಔಷಧಿ ಸರಬರಾಜು ಮಾಡುವಂತೆ ಕೋರಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಔಷಧಿ ವಿತರಣಾ ಸಂಬಂಧ ನೋಡಲ್ ಅಧಿಕಾರಿ ಅವಿನಾಶ್ ಮೆನನ್ , ಇದುವರೆಗೆ ಕೇಂದ್ರದಿಂದ ಕರ್ನಾಟಕದಿಂದ ಪಡೆದ ಔಷಧಿಗಳ ಪ್ರಮಾಣ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ,ಯಾವುದೇ ಕೊರತೆ ಉಂಟಾಗದಂತೆ ಸಮಜಾಯಿಷಿ ನೀಡಿದರು.
ಬ್ಯಾನರ್‌ಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಸುಶೀನ್ ದತ್ತ, ನಾವು ಪ್ರತಿದಿನ ೯೦ ಔಷಧಿಗಳನ್ನು ಇಂಡೆಂಟ್ ಮಾಡುತ್ತೇವೆ.ಜತೆಗೆ ಮೂರು ದಿನಗಳಲ್ಲಿ ಒಮ್ಮೆ ೩೦ ಪಡೆಯುತ್ತೇವೆ. ಇಲ್ಲಿಯವರೆಗೆ, ನಾವು ೯೮ ಬ್ಯ್ಲಾಕ್ ಫಂಗಸ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದರು.

ಮತ್ತೊಂದೆಡೆ, ಸರ್ಕಾರಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ, ೮೧ ರೋಗಿಗಳು ಬ್ಲ್ಯಾಕ್ ಫಂಗಸ್ ಚಿಕಿತ್ಸೆಯಲ್ಲಿದ್ದು, ಇನ್ನೂ, ೪೦ ರೋಗಿಗಳು ಈಗಾಗಲೇ ಈ ಸೋಂಕಿಗೆ ಬಲಿಯಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ನಾರಾಯಣ ಹೆಲ್ತ್‌ನ ಇಎನ್‌ಟಿಯ ಹಿರಿಯ ವೈದ್ಯ ಡಾ.ಸುಹೇಲ್ ಹಸನ್ ಪ್ರತಿಕ್ರಿಯಿಸಿ,
ನಮ್ಮಲ್ಲಿ ೧೫ ರೋಗಿಗಳಿದ್ದಾರೆ ಮತ್ತು ಅವರೆಲ್ಲರಿಗೂ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ನೀಡಬೇಕು. ಆದರೆ, ನಾವು ಪೊಸಕೊನಜೋಲ್ ಅನ್ನು ಅವಲಂಬಿಸುತ್ತಿದ್ದೇವೆ ಅದು ಮೊದಲ ಆಯ್ಕೆಯಾಗಿಲ್ಲ. ಇದು ಮೊದಲ ಸಾಲಿನ ಔಷಧವಲ್ಲ ಮತ್ತು ಬಿಡುಗಡೆಯಾದ ರೋಗಿಗಳಿಗೆ ಮಾತ್ರ ನೀಡಲಾಗುತ್ತದೆ ಎಂದು ನುಡಿದರು.