ಬ್ಲ್ಯಾಕ್ ಫಂಗಸ್ : ಇಂದು ೨೨೦ ಇಂಜಕ್ಷನ್ ಪೂರೈಕೆ

ರಾಯಚೂರು.ಜೂ.೦೭- ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಸಂಬಂಧಿಸಿ ಇಂಜಕ್ಷನ್ ಕೊರತೆ ಹಿನ್ನೆಲೆಯಲ್ಲಿ ಇಂದು ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್ ಔಷಧಿ ಪೂರೈಕೆ ನೋಡಲ್ ಅಧಿಕಾರಿಯಾದ ಅಂಜುಮ್ ಪರ್ವೇಜ್ ಅವರನ್ನು ಭೇಟಿಯಾದ ರವಿ ಬೋಸರಾಜು ಅವರು ಜಿಲ್ಲೆಯ ಸ್ಥಿತಿಗತಿ ಬಗ್ಗೆ ಚರ್ಚಿಸಿದರು.
ನಿನ್ನೆ ಕಳುಹಿಸಿದ ೧೭೮ ಔಷಧಿಗಳ ಹಿಂದಿರುಗಿಸಿದ ನಂತರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆಗೆ ಔಷಧಿಯ ಕೊರತೆ ಬಗ್ಗೆ ಗಂಭೀರ ಚರ್ಚೆ ನಡೆಸಿದ ಅವರು, ತಕ್ಷಣವೇ ೨೨೦ ಇಂಜಕ್ಷನ್ ಜಿಲ್ಲೆಗೆ ಕಳುಹಿಸುವುದಾಗಿ ಭರವಸೆ ನೀಡಿದರು. ಇಂದು ಸಂಜೆ ವೇಳೆಗೆ ೨೨೦ ಇಂಜಕ್ಷನ್ಸ್ ಜಿಲ್ಲೆಯ ಕೊರೊನಾ ಸೋಂಕಿತರಿಗೆ ಲಭ್ಯವಾಗಲಿವೆ. ಮುಂಬರುವ ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಗತ್ಯವಾದ ಎಂಪೋಟೇರಿಸಿನ್ ಬಿ ಇಂಜಕ್ಷನ್ ಪ್ರಮಾಣ ಹೆಚ್ಚಿಸುವುದಾಗಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೫೫ ಬ್ಲ್ಯಾಕ್ ಫಂಗಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ, ಔಷಧಿ ಕೊರತೆಯಿಂದ ಸಮಸ್ಯೆ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚಿನ ಎಂಪೋಟೇರಿಸಿನ್ ಬಿ ಇಂಜಕ್ಷನ್ ಪೂರೈಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅವರು, ಈಗಾಗಲೇ ೨೨೦ ಇಂಜಕ್ಷನ್ ರವಾನಿಸಿದ್ದಾರೆ. ಈ ಕುರಿತು ಮಾತನಾಡಿದ ರವಿ ಬೋಸರಾಜು ಅವರು, ಅಂಜುಮ್ ಪರ್ವೇಜ್ ಅವರು ಮುಂಬರುವ ದಿನಗಳಲ್ಲಿ ಮತ್ತಷ್ಟು ಇಂಜಕ್ಷನ್ ಪೂರೈಸುವ ಭರವಸೆ ನೀಡಿದ್ದಾರೆ. ಹಿಂದಿರುಗಿಸಿದ ೧೭೮ ಇಂಜಕ್ಷನ್ ಮತ್ತೇ ಮರಳಿಸುವುದಾಗಿ ಹೇಳಲಾಗಿತ್ತು. ಆದರೆ, ರವಿ ಬೋಸರಾಜು ಅವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂಜಕ್ಷನ್ ಪೂರೈಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ೨೨೦ ಇಂಜಕ್ಷನ್ ಪೂರೈಸಲಾಗಿದೆ.