ಬ್ಲಾಕ ಕಾಂಗ್ರೆಸ್ ಘಟಕದಿಂದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ

ಬಸವನಬಾಗೇವಾಡಿ:ಅ.3: ಬ್ಲಾಕ ಕಾಂಗ್ರೆಸ್ ಘಟಕದಿಂದ ಸೋಮವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿರುವ ಮಹಾತ್ಮಾ ಗಾಂಧೀಜಿ ಪುತ್ಹಳಿಗೆ ಹೂಮಾಲೆ ಅರ್ಪಿಸಿ ಗೌರವ ಸಲ್ಲಿಸುವ ಮೂಲಕ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಜಿ ಅವರ ಜಯಂತಿಯನ್ನ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ನಗರ ಘಟಕ ಅಧ್ಯಕ್ಷ ಸುರೇಶಗೌಡ ಪಾಟೀಲ, ಪುರಸಭೆ ಸದಸ್ಯ ಅಶೋಕ ಹಾರಿವಾಳ ಮಾತನಾಡಿ ಮಹಾತ್ಮಾ ಗಾಂಧೀ ಅವರು ಬಡತನವನ್ನು ಕಣ್ಣಾರೆ ಕಂಡು ತಮ್ಮ ಜೀವನವನ್ನು ಬದಲಾಯಿಸಿಕೊಂಡರು ದೇಶದ ಸರ್ವಾಂಗೀಣ ಅಭಿವೃದ್ದಿಗೆ ಕರೆ ನೀಡಿದವರು ರೈತರ ಏಳಿಗೆಗೆ ಗ್ರಾಮಗಳು ಅಭಿವೃದ್ದಿಯಾಗಬೇಕು ಎಂದು ಕನಸು ಕಂಡಿದ್ದರು. ಸ್ವಚ್ಚ ಭಾರತ ಪರಿಕಲ್ಪನೆ ಹೊಂದಿದ್ದರು ಲಾಲ್ ಬಹಾದ್ದೂರ ಶಾಸ್ತ್ರೀ ಅವರು ಪಾಕಿಸ್ತಾನದ ವಿರುದ್ದ ಹೋರಾಡಲು ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದವರು ದೇಶಕ್ಕೋಸ್ಕರ ತಮ್ಮನ್ನು ತಾವು ಅರ್ಪಿಸಿಕೊಂಡ ಅವರ ಕನಸಿನ ದೇಶವನ್ನು ಕಟ್ಟಲು ಎಲ್ಲರು ಕೈ ಜೋಡಿಸಬೇಕು, ಸತ್ಯ ಪ್ರಾಮಾಣಿಕತೆಯ ಜೊತೆಗೆ ಜನಪರ ಹೋರಾಟ ನಡೆಸಿ ದೇಶಕ್ಕ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು, ಅಲ್ಲದೆ ಲಾಲಬಹಾದ್ದೂರ ಶಾಸ್ತ್ರಿ ಅವರ ಆಡಳಿತ ಇಡೀ ದೇಶಕ್ಕೆ ಮಾದರಿಯಾಗಿತ್ತು ಅವರ ಆಡಳಿತ ಇಂದಿನ ರಾಜಕೀಯ ನಾಯಕರಿಗೆ ಮಾರ್ಗದರ್ಶಿಯಾಗಿದೆ ಎಂದರು.

ಡಿವೈಎಸ್‍ಪಿ ಕರುಣಾಕರಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಮುಖಂಡರಾದ ಬಸಣ್ಣ ದೇಸಾಯಿ, ಮುಖಂಡ ಶಂಕರಗೌಡ ಬಿರಾದಾರ, ಕಲ್ಲು ಸೊನ್ನದ, ಬಸವರಾಜ ರಾಯಗೊಂಡ, ಸಂಗಯ್ಯ ಕಾಳಹಸ್ತೇಶ್ವರಮಠ, ಸುಭಾಸ ಗಾಯಕವಾಡ, ರಮಜಾನ್ ಹೆಬ್ಬಾಳ, ಪರಶುರಾಮ ಜಮಖಂಡಿ, ಎಂ,ಜಿ ಆದಿಗೊಂಡ, ಮಹಿಳಾ ಅಧ್ಯಕ್ಷೆ ರುಕ್ಮೀಣಿ ರಾಠೋಡ, ಪುರಸಭೆ ಸದಸ್ಯ ಜಗದೇವಿ ಗುಂಡಳ್ಳಿ, ಕಮಲಸಾ ಕೊರಬು, ಚಂದ್ರಶೇಖಗೌಡ ಪಾಟೀಲ, ಸೇರಿದಂತೆ ಮುಂತಾದವರು ಇದ್ದರು.