ಬ್ಲಾಕ್ ಸೀರೆಯಲ್ಲಿ ನೇಹಾಗೌಡ ಮಿಂಚಿಂಗ್

ಬೆಂಗಳೂರು,ಏ.೧೮-ಕಿರುತೆರೆಯಲ್ಲಿ ಗೊಂಬೆ ಎಂದೇ ಖ್ಯಾತಿ ಪಡೆದಿದ್ದ ನಟಿ ನೇಹಾ ಗೌಡ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಈಗ ಅವರು ಬ್ಲ್ಯಾಕ್ ಸೀರೆಯಲ್ಲಿ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು, ನೋಡಲು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಸೀರೆಗೆ ತಕ್ಕಂತೆ ಒಡವೆ ಹಾಕಿಕೊಂಡು ಸುಂದರವಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
ಇತ್ತೀಚಿಗೆ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ನೇಹಾ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ೨೦ ಸಾವಿರಕ್ಕೂ ಹೆಚ್ಚು ಲೈಕ್ಸ್, ಬಂದಿದ್ದು, ಕ್ಯೂಟ್, ಸುಂದರವಾಗಿ ಕಾಣ್ತೀರಿ, ನೀವೂ ನಿಜವಾದ ಗೊಂಬೆಯೇ ಬಿಡಿ ಎಂದು ಕಾಮೆಂಟ್ ಹಾಕಿದ್ದಾರೆ.
ಖಾಸಗಿ ವಾಹಿನಿಯ ಲಚ್ಚಿ ಧಾರಾವಾಹಿಯಲ್ಲಿ ನಟಿ ನೇಹಾ ಗೌಡ ಗಿರಿಜಾ ಪಾತ್ರ ಮಾಡ್ತಾ ಇದ್ರು. ಆದ್ರೆ ಸೀರಿಯಲ್‌ನಲ್ಲಿ ಪಾತ್ರ ಮುಗಿದಿದೆ. ಸದ್ಯ ಫ್ರೀ ಇರುವ ಅವರು ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ.
೧೦ ವರ್ಷಗಳ ಕಾಲ ವಿವಿಧ ಪಾತ್ರಗಳಲ್ಲಿ ನಟನೆ ಮಾಡಿದ್ದೇನೆ. ನನಗೆ ಎಲ್ಲಾ ಪಾತ್ರವು ಮೆಚ್ಚುಗೆ ಮತ್ತು ಪ್ರೀತಿಯನ್ನು ತಂದುಕೊಟ್ಟಿವೆ ಎಂದು ನೇಹಾ ಗೌಡ ಹೇಳಿಕೊಂಡಿದ್ದಾರೆ.