ಬ್ಲಾಕ್ ಫಂಗಸ್ ಸೋಂಕು ಹೆಚ್ಚಾದರೂ ಔಷಧಿ ಪೂರೈಕೆ ಇಲ್ಲ

ದಾವಣಗೆರೆ,ಜೂ.10: ಬ್ಲ್ಯಾಕ್ ಫಂಗಸ್ ಕೇಸ್‌ಗಳು ಜಿಲ್ಲೆಯಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿದ್ದರೂ, ಸರ್ಕಾರದಿಂದ ಸಮರ್ಪಕವಾಗಿ ಇಂಜೆಕ್ಷನ್, ಔಷಧಿ ಪೂರೈಕೆಯಾಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ನಾಯಕ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬೇತೂರು ರಸ್ತೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ತಾವು ತರಿಸಿದ್ದ 6 ಕೋಟಿ ವೆಚ್ಚದ ಕೋವಿಡ್ ಲಸಿಕೆಯ ಮೊದಲ ಹಂತದ 10 ಸಾವಿರ ಲಸಿಕೆ ಕಾರ್ಯವನ್ನು ಬುಧವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿತರಲ್ಲಿ ಬ್ಲ್ಯಾಕ್ -Àಂಗಸ್ ಸೋಂಕು ಕಂಡು ಬರುತ್ತಿದ್ದರೂ, ಸರ್ಕಾರ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
ಈವರೆಗೆ ಸುಮಾರು 50 ಬ್ಲ್ಯಾಕ್ -Àಂಗಸ್ ಕೇಸ್ ವರದಿಯಾಗಿವೆ. 50 ಜನ ಸೋಂಕಿತರಿದ್ದರೂ, ಕೇವಲ 30 ಇಂಜೆಕ್ಷನ್ ಕಳಿಸುತ್ತಾರೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಚುಚ್ಚುಮದ್ದು ಪೂರೈಕೆಯಾಗುತ್ತಿಲ್ಲ. ಬ್ಲ್ಯಾಕ್ -Àಂಗಸ್ ಸೋಂಕಿತರಿಗೆ ಅಗತ್ಯ ಚುಚ್ಚುಮದ್ದು ಪೂರೈಸುವಂತೆ ಸರ್ಕಾರಕ್ಕೆ ಪತ್ರವನ್ನೂ ಬರೆದು ಒತ್ತಾಯಿಸಿದ್ದೇವೆ ಎಂದು ಅವರು ತಿಳಿಸಿದರು.
ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಮತ್ತಷ್ಟು ದಿನಗಳ ಕಾಲ ಲಾಕ್ ಡೌನ್ ಮುಂದುವರಿಸುವುದು ಸೂಕ್ತ. ಅನ್ ಲಾಕ್ ಮಾಡುವುದಕ್ಕಿಂತಲೂ ಲಾಕ್ ಡೌನ್ ಮುಂದುವರಿಸಿ, ಜನರ ಅಮೂಲ್ಯ ಪ್ರಾಣಗಳನ್ನು ಕಾಪಾಡಬೇಕಾದ ಅಗತ್ಯವಿದೆ. ಲಾಕ್ ಡೌನ್ ವೇಳೆ ಮತ್ತಷ್ಟು ಬಿಗಿ ಕ್ರಮಗಳನ್ನೂ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಸರ್ಕಾರ, ಜಿಲ್ಲಾಡಳಿತ ನೀಡುತ್ತಿರುವ ಕೊರೋನಾ ಅಂಕಿ ಅಂಶಗಳು, ಸಾವು-ನೋವುಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಐ ಯಾಮ್ ನಾಟ್ ಹ್ಯಾಪಿ. ಇವತ್ತೊಂದು ಇರುತ್ತೆ, ನಾಳೆ ಇನ್ನೊಂದು ಇರುತ್ತೆ. ಇವೆಲ್ಲಾ ಹೊಂದಾಣಿಕೆಗಳು. ಡೆತ್ ರೇಟ್ ಒಂದೇ ಅಂತಾ ಕೊಟ್ಟರು. ಅದೇ ದಿನ ಜಿಲ್ಲಾ ಆಸ್ಪತ್ರೆಯಲ್ಲಿ ಬರೋಬ್ಬರಿ 12 ಸಾವು ಸಂಭವಿಸಿದೆ. ಇದು ಬರೀ ಜಿಲ್ಲಾಸ್ಪತ್ರೆಯದ್ದಷ್ಟೇ. ಖಾಸಗಿ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿನ ಸಾವಿನ ಮಾಹಿತಿ ಎಂದು ಅವರು ಮಾರ್ಮಿಕವಾಗಿ ತಿಳಿಸಿದರು.
ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ, ಸರ್ಕಾರ ವಸ್ತುನಿಷ್ಟ ಅಂಕಿ ಅಂಶಗಳನ್ನು ನೀಡದೇ, ಮ್ಯಾನೇಜ್ ಮಾಡುವ ಕೆಲಸ ಮಾಡುತ್ತಿವೆ. ಜೂ.21ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಮೊದಲೇ ಈ ಕೆಲಸ ಮಾಡಿದ್ದರೆ ದೇಶಾದ್ಯಂತ ಸಾವಿರಾರು ಸಾವು ನೋವುಗಳನ್ನಾದರೂ ತಡೆಯಬಹುದಿತ್ತು. ಗಡ್ಡಕ್ಕೆ ಬೆಂಕಿ ಹತ್ತಿದಾಗ, ಬಾವಿ ತೋಡೋಕೆ ನೋಡಿದ್ರಂತೆ ಹಾಗಾಗಿದೆ ಕೇಂದ್ರದ ಕ್ರಮ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಇನ್ನೂ ಎಷ್ಟು ಜನ ಸಾಯ ಬೇಕು ಇವರಿಗೆ? ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಆದ ನಂತರವಷ್ಟೇ ಒಂದೊAದಾಗಿ ಹೊರ ಬರುತ್ತಿವೆ. ಇನ್ನಾದರೂ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಾವು, ನೋವು ತಡೆಗಾಗಿ ಮತ್ತಷ್ಟು ಬಿಗಿಯಾಗಿ ಲಾಕ್ ಡೌನ್ ನಿಯಮ ಅನುಷ್ಟಾನಕ್ಕೆ ತರಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಗಳು, ಜಿಲ್ಲಾಡಳಿತದಿಂದ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಸೋಂಕು ನಿಯಂತ್ರಿಸಬೇಕಾದ ಅನಿವಾರ್ಯತೆಯೂ ಇದೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.ದಕ್ಷಿಣ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ ಮುಖಂಡರಾದ ದಿನೇಶ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ, ಸದಸ್ಯರಾದ ಕೆ.ಚಮನ್ ಸಾಬ್, ವಿನಾಯಕ ಪೈಲ್ವಾನ್ ಮತ್ತಿತರರು ಇದ್ದರು.