ಬ್ಲಾಕ್ ಫಂಗಸ್‌ನಿಂದ ಜನರನ್ನು ರಕ್ಷಿಸಬೇಕಾಗಿದೆ

ಚಿತ್ರದುರ್ಗ.ಜೂ.೨; ಯಾವುದೇ ವ್ಯಕ್ತಿಗೆ ಮೂಗಿನಲ್ಲಿ ಕಿರಿಕಿರಿ, ಸೀತ, ಕಣ್ಣುಗಳು ಕೆಂಪಗಾಗುವುದು, ದೃಷ್ಟಿ ಎರಡೆರಡು ಕಾಣುವುದು, ಕಣ್ಣು ತೆರೆಯಲು ಕಷ್ಟವಾಗುವುದು, ಮುಖದಲ್ಲಿ ಊತ ಕಾಣುವುದು, ದೃಷ್ಟಿ ಮಂದವಾಗುವುದು, ಕಣ್ಣುಗುಡ್ಡೆ ನೋವು, ಹಲ್ಲುಗಳು ಅಲುಗಾಡುವುದು, ತಲೆನೋವು, ಚರ್ಮದಲ್ಲಿ ಕಡಿತ ಉಂಟಾದಾಗ ತಿರಸ್ಕಾರ ಮಾಡದೇ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಂಡರೆ, ಈ ಕಪ್ಪು ಶಿಲೀಂದ್ರದಿಂದ ನಾವು ರಕ್ಷಣೆ ಪಡೆಯಬಹುದು ಎಂದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ “ಬ್ಲಾö್ಯಕ್ ಫಂಗಸ್” ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬ್ಲಾö್ಯಕ್ ಫಂಗಸ್ ಸಾಂಕ್ರಾಮಿಕ ರೋಗವಲ್ಲ, ಕರೋನ ಬಂದ ವ್ಯಕ್ತಿಯ ರೋಗ ನಿರೋದಕ ಶಕ್ತಿ ಕಡಿಮೆಯಾದಾಗ, ಇದು ದೇಹದ ಮೇಲೆ ಆಕ್ರಮಣಮಾಡುತ್ತದೆ. ಸಕ್ಕರೆ ಕಾಯಿಲೆ ಇರುವವರಿಗಂತೂ ಇದೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸ್ಟಿರಾಯ್ಡ್ ಬಳಕೆ ಹೆಚ್ಚಾದಾಗ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ, ಈ ಫಂಗಸ್‌ನ ಆಕ್ರಮಣ ಹೆಚ್ಚಾಗುತ್ತದೆ. ಇದರಲ್ಲಿ ಕಪ್ಪು, ಬಿಳಿ ಬಣ್ಣ, ಹಳದಿ ಬಣ್ಣ, ಎಂಬ ಮೂರು ವಿಧಗಳು ಬೆಳಕಿಗೆ ಬಂದಿವೆ. ಉಪ್ಪಿನ ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಮತ್ತು ಮೂಗನ್ನು ತೊಳೆದುಕೊಳ್ಳುವುದರಿಂದ ಈ ರೋಗವನ್ನು ತಡೆಯಬಹುದು ಎಂದರು.ಅತಿಹೆಚ್ಚು ಸ್ಟೀಂನ ಸೇವನೆ ಮಾಡುವುದು ಅಥವಾ ಕೊಳೆ ತೊಳೆಯಲಾರದೆ ಮಾಸ್ಕ್ ಅನ್ನು ಉಪಯೋಗಿಸುವುದು, ಹಳೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಬಳಕೆ ಮಾಡುವವರಿಗೂ, ಫಂಗಸ್ ಬೆಳೆದ ಆಹಾರ ಪದಾರ್ಥಗಳನ್ನ ಸೇವಿಸುವುದು ಮಾಡಬಾರದು. ಸ್ವಚ್ಚ ವಾತಾವರಣದಲ್ಲಿದ್ದು, ಸ್ವಚ್ಚ ಗಾಳಿ, ಸ್ವಚ್ಚ ನೀರು, ಸ್ವಚ್ಛ ಆಹಾರ, ಪರಿಸರ ಸ್ನೇಹಿ ಜೀವನಮಾಡಿದರೆ ಇದನ್ನ ನಿಯಂತ್ರಣದಲ್ಲಿಡಲು ಸಹಕಾರಿ. ಇದಕ್ಕೆ ಔಷಧಿಗಳು ಉಪಲಬ್ಧವಿದ್ದು, ಬಡರೋಗಿಗಳಿಗೆ ಸದ್ಯ ಅದರ ವೆಚ್ಚ ಬರಿಸಲು ಕಷ್ಟವಾಗಬಹುದು. ಸಕ್ಕರೆ ಕಾಯಿಲೆವುಳ್ಳವರು, ಸಕ್ಕರೆಯನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಮತ್ತು ಸೆಲ್ಫ್ ಮೆಡಿಕೇಶನ್ ಮಾಡಿಕೊಳ್ಳಬಾರದು. ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡಬೇಕು. ಜನರಲ್ಲಿ ಇದರ ಹೆಚ್ಚು ಜಾಗೃತಿ ಮೂಡಿಸಬೇಕಾದ್ದು ಅವಶ್ಯಕತೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಬ್ಲಾಕ್ ಫಂಗಸ್‌ನ ಬಗ್ಗೆ ಚಿತ್ರಗಳನ್ನ ಬರೆದು, ಅದು ತೋರಿಸುವಂತಹ ಗುಣಲಕ್ಷಣಗಳ ಬಗ್ಗೆ ಭಿತ್ತಿಚಿತ್ರಗಳನ್ನ ಪ್ರದರ್ಶಿಸಲಾಯಿತು. ಕರಿಯ ಬಟ್ಟೆಯನ್ನು ಬಳಸಿ, ಕಪುö್ಪ ಬಟ್ಟೆ ಧರಿಸಿ ನಿಂತ ಕಾರ್ಯಕರ್ತರು, ಕರಿಯ ಹೆಲ್ಮೆಟನ್ನು ಧರಿಸಿ, ಸಾಂಕೇತಿಕವಾಗಿ ಬ್ಲಾಕ್ ಫಂಗಸ್‌ನ ಬಗ್ಗೆ ಜನಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್. ಎಸ್. ರಚನ ಮತ್ತು ಹೆಚ್. ಎಸ್. ಪ್ರೇರಣ, ಕರೋನ ಗೀತೆಗಳನ್ನ ಹಾಡಿ ಜನರನ್ನ ಜಾಗೃತಗೊಳಿಸಲಾಯಿತು. ಮನೆಯ ಬಳಿಯೇ ನಿಂತು ಕಾರ್ಯಕ್ರಮದಲ್ಲಿ ಬಾಗವಹಿಸಿದ ಅಬಕಾರಿ ಇಲಾಕೆಯ ಶ್ರೀ ಕೆಂಚರೆಡ್ಡಿ, ಸುಮಾ ಕೆಂಚರೆಡ್ಡಿ, ಜೆ.ಎಂ. ಐ.ಟಿ.ಯ ಶ್ರೀಮತಿ ಜೋತಿ, ಜಿ. ಭಾರತಿ, ಅಂಶುಲ್, ಶಿಕ್ಷಕರಾದ ಪ್ರಕಾಶ್, ಶ್ರೀನಿವಾಸ್ ಹಾಜರಿದ್ದರು.