“ಬ್ಲಾಕ್ ಚೆನ್” ಈ ಶತಮಾನದ ಪ್ರಭಾವಶಾಲಿ ತಂತ್ರಜ್ಞಾನ

ಕಲಬುರಗಿ,ಮಾ.23-ಬ್ಲಾಕ್ ಚೆನ್ ತಂತ್ರಜ್ಞಾನವು ಈ ಶತಮಾನದ ಪ್ರಭಾವಶಾಲಿ ತಂತ್ರಜ್ಞಾನ ಇದರ ಉಪಯೋಗ ಈಗಾಗಲೇ ಭಾರತದ 50 ಪ್ರತಿಶತ ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲಾಗಿದೆ ಆದರು ಇನ್ನು ಇದರ ಪರಿಣಾಮಕಾರಿ ಉಪಯೋಗ ಆಗಬೇಕಾಗಿದೆ ಎಂದು ಎಡುಕ್ಸ್ ಲ್ಯಾಬ್ ಗುರುಗ್ರಾಮನ ಮುಖ್ಯಸ್ಥ ನಫಿಶ್ ಹೇಳಿದರು.
ನಗರದ ಪಿ.ಡಿ.ಎ ಇಂಜಿನಿಯರಿಂಗ್ ಕಾಲೆಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗವು ಟೆಕ್ವಿಪ ಪ್ರಾಯೋಜಕತ್ವದೊಂದಿಗೆ 22 ರಿಂದ 26 ಮಾರ್ಚ್ ವರೆಗೆ ಆಯೋಜಿಸಿದ ಒಂದು ವಾರದ ಬ್ಲಾಕ್ ಚೆನ್ ತಂತ್ರಜ್ಞಾನ ಮತ್ತು ಅದರ ಉಪಯೋಗಗಳ ಕುರಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಅವರು ಮಾತನಾಡಿದರು.
ಕಾಲೇಜಿನ ಉಪಪ್ರಾರ್ಚಾ ಡಾ. ಶಶಿಧರ ಕಲಶೆಟ್ಟಿ ಮತ್ತು ಕಾಲೇಜಿನ ಡಿನ್ ಅಕ್ಯಾಡಮಿಕ್ ಡಾ.ಸಿದ್ರಾಮ ಪಾಟೀಲ ಅವರು ಉದ್ಯಮ ಸ್ನೇಹಿ ವಿದ್ಯಾರ್ಥಿಗಳನ್ನು ತಯಾರು ಮಾಡಲು ಬೇಕಾದಂತಹ ಆಧುನಿಕ ತಂತ್ರನವಾದ ಬ್ಲಾಕ್ ಚೆನ್ ತಂತ್ರಜ್ಞಾನಗಳ ಅವಶ್ಯಕತೆ ಬಗ್ಗೆ ತಿಳಿಸಿದರು. ಕಾಲೇಜಿನ ಟೆಕ್ವಿಪ್ ಸಂಯೋಜಕ ಪ್ರೋ. ಶರಣ ಪಡಶೆಟ್ಟಿ ಅವರು ಸರಕಾರದ ನೀತಿ ಆಯೋಗದಲ್ಲಿ ಹೇಳಿದಂತ ಪ್ರಜೆಗಳ ಲ್ಯಾಂಡ್ ರೆಜಿಸ್ಟ್ರೆಷನ್ ಮತ್ತು ಕೃಷಿ ಕ್ಷೇತ್ರಕ್ಕೆ ಸಹಾಯಕವಾಗಬಲಂತಹ ಬ್ಲಾಕ್ ಚೆನ್ ತಂತ್ರಜ್ಞಾನದ ಉಪಯೋಗಗಳ ಬಗ್ಗೆ ತಿಳಿಸಿದರು ಮತ್ತು ಟೆಕ್ವಿಪ್ ಬಗ್ಗೆ ತಿಳಿಸಿದರು.
ಅಧ್ಯಕ್ಷಿಯ ಭಾಷಣದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್,ಎಸ್ ಹೆಬ್ಬಾಳ ಅವರು ಬ್ಲಾಕ್ ಚೆನ್ ತಂತ್ರಜ್ಞಾನದ ಕೈಗಾರಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಇತಿಚಿನ ಹೆಚ್ಚಿನ ಉಪಯೋಗಗಳ ಬಗ್ಗೆ ತಿಳಿಸಿದರು. ವಿ.ವಿ.ಸಿ.ಇ ಮೈಸೂರಿನ ಸಹಪ್ರಾಧ್ಯಾಪಕ ಗುರುರಾಜ ಹೇಚ್.ಎಲ್. ಮತ್ತು ಸಿ.ಎಸ್.ಐ ನ ವಿಭಾಗಿಯ ಉಪಧ್ಯಾಕ್ಷ ಡಾ. ಸುರೇಂದ್ರ ಪ್ರಸಾದ ಬಾಬುರವರು ಸಂಪ್ನಮೂಲ ವ್ಯಕ್ತಿಗಳಾಗಿ ಆಗಮಿಸಿದರು
ಕಾರ್ಯಕ್ರಮದ ಸಂಚಾಲಕರಾದ ಮತ್ತು ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಡಾ. ಸುವರ್ಣಾ ನಂದ್ಯಾಳರವರು ಸ್ವಾಗತಿಸಿ ಪ್ರಸ್ತುತ ತರಬೇತಿಯ ಅವಶ್ಯಕತೆಯ ಬಗ್ಗೆ ವಿವರಿಸಿದರು ಡಾ. ಸುಜಾತಾ ತೆರದಾಳ ಸಂಪ್ನಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕಿ ಡಾ. ಜಯಶ್ರೀ ಅಗರಖೆಡ ವಂದಿಸಿದರು. ಪ್ರೋ. ಸೌಮ್ಯಾ ಅಣಕಲ್ ನಿರೂಪಿಸಿದರು. ಪೂರ್ಣಿಮಾ ಗುಗವಾಡ ಪ್ರಾರ್ಥಿಸಿದರು.
ದೇಶದ ವಿವಿಧೆಡೆಯಿಂದ ಸುಮಾರು 120ಜನ ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಝಾನ್ಸಿಯ ಬುಂದೆಲಖಂಡ್ ತಾಂತ್ರಿಕ ವಿದ್ಯಾಲಯದ ಮತ್ತು ಪಿ.ಡಿ.ಎ ಇಂಜಿನಿಯರಿಂಗ್ ಕಾಲೆಜಿನ ಪ್ರಾಧ್ಯಾಪಕರು ಆನ್ ಲೇನ್ ಆಫ್ ಲೇನ್ ಮೂಲಕ ತರಬೇತಿಯಲ್ಲಿ ಭಾಗವಹಿಸಿದರು. ಸುರೇಖಾ ಶಿವಶೆಟ್ಟಿ ವಿಶ್ವನಾಥ ಗುಗವಾಡ ಖಾಜಾ ಮತ್ತು ಸಿರಾಜ ತಾಂತ್ರಿಕ ಸಹಾಯವನ್ನು ಒದಗಿಸಿದರು.