
ಲಿಂಗಸುಗೂರ,ಆ.೩೦-
ಲಿಂಗಸುಗುರು ಪಟ್ಟಣದ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಭೂಪನಗೌಡ ಪಾಟೀಲ್ ಕರಡಕಲ್ ನಾನು ಪ್ರಸ್ತುತ ಲಿಂಗಸುಗೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸುಮಾರು ೧೦ ವರ್ಷಗಳ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ.
ಕಾಂಗ್ರೆಸ್ ಪಕ್ಷದಿಂದ ನಾನು ಪುರಸಭೆ ತಾಲ್ಲೂಕು ಪಂಚಾಯತ್ ಸದಸ್ಯೆರಾಗಿ ಹಾಗೂ ವಿದ್ಯಾರ್ಥಿ ದಿನಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ನನ್ನ ಸ್ವ ಇಚ್ಛೆಯಿಂದ ನಮ್ಮ ಪಕ್ಷದ ಬೇರೆ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಲಿಂಗಸುಗುರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದು, ನನ್ನ ರಾಜಿನಾಮೆಯನ್ನು ಲಿಂಗಸುಗೂರ ಮಾಜಿ ಶಾಸಕರಾದ ಡಿ.ಎಸ್.ಹುಲಗೇರಿ ಹಾಗೂ ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದ ರಾಜ್ಯ ಅದ್ಯೆಕ್ಷ ರಾದ ಡಿ.ಕೆ.ಶಿವಕುಮಾರ್. ಅವರಿಗೆ ರಾಜೀನಾಮೆ ಪತ್ರವನ್ನು ಕಳಿಸಿದ್ದೇನೆ ಎಂದುರು.
ಈ ಸಂದರ್ಭದಲ್ಲಿ ಪುರಸಭೆ ಉಪದ್ಯಾಕ್ಷ ಮಹ್ಮದ್ ರಫಿ ಇದ್ದರು.