ರಾಯಚೂರು,ಏ.೨೮- ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎಸ್.ಶಿವರಾಜ ಪಾಟೀಲ್ ಅವರ ಕಚೇರಿಯಲ್ಲಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಶ ಮಡಿವಾಳ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಜೊತೆಗೆ ರಾಜೇಶ ಮಡಿವಾಳ ಹಾಗೂ ಬಿ.ಜೆ.ಪಿ ಮುಖಂಡ ಶಿವಕುಮಾರ ನೆಲಹಾಳ್ ಅವರ ನೇತೃತ್ವದಲ್ಲಿ ನಗರದ ವಾರ್ಡ್ ನಂ.೮, ೯, ೧೦ ಹಾಗೂ ೧೧ರ ನೂರಾರು ಯುವಕರು ಡಾ.ಎಸ್.ಶಿವರಾಜ ಪಾಟೀಲ್ ಅವರ ಸಮ್ಮುಖದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ವಾಲ್ಮಿಕಿ ವೃತ್ತದಿಂದ ಬೈಕ್ ರ್‍ಯಾಲಿ ಮೂಲಕ ಆಗಮಿಸಿ ಒಟ್ಟು ೫೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ವೇಳೆ ಡಾ.ಎಸ್.ಶಿವರಾಜ ಪಾಟೀಲ ಅವರು ಯುವಕರಿಗೆ ಬಿಜೆಪಿ ಶಾಲು ಹಾಕುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.
ಇದೇ ವೇಳೆ ಮಾತನಾಡಿದ ಶಾಸಕರು, ಕೇಂದ್ರ ಹಾಗೂ ರಾಜ್ಯದಲ್ಲಿ ಬಿ.ಜೆ.ಪಿ ಸರ್ಕಾರ ಉತ್ತಮವಾದ ಆಡಳಿತವನ್ನು ನೀಡಿದೆ ಮತ್ತು ರಾಜ್ಯ ಹಾಗೂ ದೇಶದಲ್ಲಿ ಅಭಿವೃದ್ಧಿ ಪರವಾದ ಆಡಳಿತವನ್ನು ನೀಡುತ್ತಾ ಬಂದಿದ್ದು, ಇದೀಗ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರ್ಪಡೆಯಾಗಿರುವುದು ಪಕ್ಷದ ಬಲ ದ್ವಿಗುಣವಾಗಿದೆ ಆದ್ದರಿಂದ ಪ್ರಬಲವಾದ ಬಿ.ಜೆ.ಪಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಬೆಳಸಬೇಕೆಂದು ತಿಳಿಸಿದರು.
ಇದೇ ವೇಳೆ ರಾಜೇಶ ಮಡಿವಾಳ ಮಾತನಾಡಿ, ಬಿ.ಜೆ.ಪಿ ಪಕ್ಷದ ಕಾರ್ಯ ವೈಖರಿಯನ್ನು ಮೆಚ್ಚಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದು, ಶಾಸಕರು ಸಾಮಾನ್ಯರಲ್ಲಿ ಅತಿಸಾಮಾನ್ಯರಾಗಿ ಎಲ್ಲರನ್ನು ನಮ್ಮವರೆಂದು ಭಾವಿಸುವ ಸದ್ಗುಣದವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆಂಜನೇಯ್ಯ, ಸಂಜು, ರವಿ ಕುಮಾರ್, ಜಿ.ವೆಂಕಟೇಶ ಸೇರಿದಂತೆ ೫೦೦ಕ್ಕೂ ಹೆಚ್ಚು ಯುವಕರು ಉಪಸ್ಥಿತರಿದ್ದರು.