ಬ್ರೈಟ್ ಫ್ಯೂಚರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಅಥಣಿ : ಜ.10:ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ. ಪ್ರತಿಯೊಬ್ಬರೂ ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಹಾಗೂ ಕಾಳಜಿ ಬಹಳ ಮುಖ್ಯ. ಹೊರ ಜಗತ್ತನ್ನು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳುಬೇಕು. ಎಂದು ಬ್ರೈಟ್ ಫ್ಯೂಚರ್ ಚಾರಿಟೇಬಲ್ ಎಜುಕೇಶನಲ್ ಮತ್ತು ಸೋಶಿಯಲ್ ವೆಲ್ಫೇರ್ ಟೆಸ್ಟ್ ನ ಅಧ್ಯಕ್ಷ ಜಮೀರ ಮುಲ್ಲಾ ಹೇಳಿದರು
ಅವರು ಪಟ್ಟಣದ ಅಬುಲಕಲಾಂ ಹೈಸ್ಕೂಲ ಆವರಣದಲ್ಲಿರುವ ಶಾದಿಮಹಲನಲ್ಲಿ ಬ್ರೈಟ್ ಫ್ಯೂಚರ್ ಚಾರಿಟೇಬಲ್ ಎಜುಕೇಶನಲ್ ಮತ್ತು ಸೋಶಿಯಲ್ ವೆಲ್ಫೇರ್ ಟೆಸ್ಟ್ ಅಥಣಿ ಹಾಗೂ ಶ್ರೀಮಂತ ವಿಜಯಸಿಂಹರಾಜೆ ಪಟವರ್ಧನ ಲೈನ್ಸ್ ಕಣ್ಣಿನ ಆಸ್ಪತ್ರೆ ಸಾಂಗಲಿ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣು ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಗರ ಪ್ರದೇಶಗಳಲ್ಲಿ ದುಬಾರಿ ಶುಲ್ಕವನ್ನು ಭರಿಸಿ ಕಣ್ಣಿನ ಸಮಸ್ಯೆ ಸರಿಪಡಿಸಿಕೊಳ್ಳಲು ಆಗದಂತಹ ಬಡ ಜನರಿಗಾಗಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ಜನರು ಈ ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಶಿಬಿರದಲ್ಲಿ ಒಟ್ಟು 550 ಜನರ ಕಣ್ಣು ತಪಾಸಣೆ ಮಾಡಲಾಯಿತು. ಅದರಲ್ಲಿ 22 ಜನರಿಗೆ ಶಸ್ತ್ರಚಿಕಿತ್ಸೆಗಾಗಿ ಶ್ರೀಮಂತ ವಿಜಯಸಿಂಹರಾಜೆ ಪಟವರ್ಧನ ಲೈನ್ಸ್ ಕಣ್ಣಿನ ಆಸ್ಪತ್ರೆ ಸಾಂಗಲಿಗೆ ಕಳುಹಿಸಲಾಯಿತು.
ಈ ವೇಳೆ ಬ್ರೈಟ್ ಫ್ಯೂಚರ್ ಚಾರಿಟೇಬಲ್
ಟ್ರಸ್ಟ್ ನ. ಗುಡುಸಾಬ ಮೋಮಿನ, ಎಚ. ಎಂ. ನದಾಫ, ಎ. ಎಂ. ದೇಸಾಯಿ, ಯೂನುಸ್ ಕೊರಬು, ಮೌಲಾನಾ ಕಲೀಮುಲ್ಲಾ ರಶೀದಿ, ಅಸ್ಗರ ಅತ್ತಾರ, ಇಲಿಯಾಸ್ ಖಲೀಫಾ, ಹುಜೇಫಾ ನದಾಫ, ಎ ಎಂ.ಸಾತಾರಮೇಕರ್, ಮೌಲಾನಾ ನೋಮಾನ ನದ್ವಿ, ಸೇರಿದಂತೆ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ಮುದ್ಸರ್ ಜಮಾದಾರ. ರಿಯಾಜ ಮುಲ್ಲಾ. ಫಿರೋಜ ಮಲಬಾರಿ ಸಮೀತ ಮಾಳಿ. ತೇಜಸ್. ಪ್ರಬಂಜನ್ ಮಾನೆ. ಉಪಸ್ಥಿತರಿದ್ದರು.