ಬ್ರೇಕ್ ಫೇಲ್ ಆಗಿ ಆಲದ ಮರಕ್ಕೆ ಡಿಕ್ಕಿಯಾದ ಸಾರಿಗೆ ಬಸ್

ಬೀದರ್: ಮೇ:29:ತಾಲೂಕಿನ ಹಮಲಾಪೂರ ಬಳಿ ಬ್ರೇಕ್ ಫೇಲ್ ಆದ ಹಿನ್ನಲೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಆಲದ ಮರಕ್ಕೆ ಢಿಕ್ಕಿಯಾಗಿ ಹಲವು ಪ್ರಯಾಣಿಕರು ಸಣ್ಣಪುಟ್ಟ ಗಾಯ,ಗಾಳಿಗೊಳಗಾದ ಘಟನೆ ಸೋಮವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಭಾರಿ ದುರಂತ ತಪ್ಪಿ ಹೋಗಿದೆ.
ಚಿಲ್ಲರ್ಗಿಯಿಂದ ಬೀದರ್ ಗೆ ಬರುತ್ತಿದ್ದ ಬಸ್ ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬ್ರೇಕ್ ಫೇಲ್ ಮತ್ತು ಜಾಯಿಂಟ್ ಕಟ್ ಆಗಿದ್ದು, ಚಾಲಕ ಬಸ್ಸನ್ನು ರಿವರ್ಸ್ ಮಾಡಿದ್ದು, ಬೃಹತ್ ಆಲದ ಮರಕ್ಕೆ ಹಿಂಬಂದಿಯಿಂದ ಢಿಕ್ಕಿ ಸಂಭವಿಸಿದೆ. ಬಸ್ ನ ಗಾಜುಗಳು ಪುಡಿಪುಡಿಯಾಗಿವೆ.