ಬ್ರೇಕ್‌ಫೇಲ್‌ನಿಂದ ಲಾರಿ ಪಲ್ಟಿ: ಚಾಲಕನಿಗೆ ಗಾಯ

ಮಂಗಳೂರು, ಎ.೧- ನಗರದ ಪಡೀಲ್ ಬಳಿ ಲಾರಿಯೊಂದು ಬ್ರೇಕ್‌ಫೈಲ್ ಆಗಿ ರಾಷ್ಟ್ರೀಯ ಹೆದ್ದಾರಿಗೆ ಮಗುಚಿದ ಘಟನೆ ಬುಧವಾರ ಅಪರಾಹ್ನ ನಡೆದಿದೆ. ಇದರಿಂದ ಲಾರಿ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಕ್ ಸಲ್ಫರ್ ಸಾಗಾಟದ ಈ ಲಾರಿಯು ಪಡೀಲ್ ಬಳಿ ಬ್ರೇಕ್‌ಫೈಲ್ ಆಯಿತು ಎನ್ನಲಾಗಿದೆ. ಇದರಿಂದ ಸುಮಾರು 10 ಅಡಿ ಆಳಕ್ಕೆ (ರಾ.ಹೆ.75) ಬಿತ್ತು. ಲಾರಿ ಪಲ್ಟಿ ಹೊಡೆದ ಪರಿಣಾಮ ಚಾಲಕನಿಗೆ ಹೊರಬರಲಾಗಲಿಲ್ಲ. ಸುಮಾರು 1 ಗಂಟೆಯ ಬಳಿಕ ಚಾಲಕನನ್ನು ಸ್ಥಳೀಯರ ಸಹಕಾರದಿಂದ ಪೊಲೀಸರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದಿಂದ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ವಿದ್ಯುತ್ ತಂತಿ ಕಡಿದು ಬಿದ್ದ ತಕ್ಷಣ ಮೆಸ್ಕಾಂ ಸಿಬ್ಬಂದಿ ವರ್ಗವು ಸಂಪರ್ಕ ಕಡಿದು ಹಾಕಿತು. ಅಪಘಾತದಿಂದ ಕೆಲಕಾಲ ಹೆದ್ದಾರಿ ಜಾಮ್ ಆಗಿತ್ತು.