
ಬೇಕಾಗುವ ಸಾಮಗ್ರಿಗಳು
*ಸಾಲ್ಟ್ ಬ್ರೆಡ್ – ೬ ಪೀಸ್
*ಅರಿಶಿಣ – ೧/೨
*ಕಡಲೇ ಹಿಟ್ಟು – ೧/೨ ಕೆ.ಜಿ
*ಅಚ್ಚಖಾರದ ಪುಡಿ – ೨ ಚಮಚ
*ಅಕ್ಕಿ ಹಿಟ್ಟು – ೫೦ ಗ್ರಾಂ
*ಆಲೂ ಗಡ್ಡೆ – ೧೦೦ ಗ್ರಾಂ
*ಗರಂ ಮಸಾಲ – ೧ ಚಮಚ
*ಜೀರಿಗೆ ಪುಡಿ – ೧ ಚಮಚ
*ಓಂ ಕಾಳು – ೧/೨ ಚಮಚ
*ಆಲೂಗಡ್ಡೆ – ೧
*ಎಣ್ಣೆ – ೧/೪ ಲೀಟರ್
ಮಾಡುವ ವಿಧಾನ :
ಆಲೂಗಡ್ಡೆಯನ್ನು ಬೇಯಿಸಿ ತುರಿದುಕೊಳ್ಳಿ. ಬೌಲ್‌ನಲ್ಲಿ ಕಡಲೇಹಿಟ್ಟು, ಅಕ್ಕಿಹಿಟ್ಟು, ಓಂ ಕಾಳು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿಡಿ. ಬಾಣಲಿಗೆ ೨ ಚಮಚ ಎಣ್ಣೆ ಹಾಕಿ. ಬಿಸಿಯಾದ ನಂತರ ಜೀರಿಗೆಪುಡಿ, ಗರಂ ಮಸಾಲ, ಅಚ್ಚಖಾರದ ಪುಡಿ, ಉಪ್ಪು, ತುರಿದ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ. ಬ್ರೆಡ್ಡಿನ ಅಂಚನ್ನು ಕತ್ತರಿಸಿ. ಅದರ ಮೇಲೆ ಕಲಸಿದ ಮಿಶ್ರಣ ಇಟ್ಟು, ಮೇಲೆ ಇನ್ನೊಂದು ಬ್ರೆಡ್ ಪೀಸ್ ಇಡಿ. ಇದನ್ನು ಕಲಸಿದ ಕಡಲೇಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ಕಾದ ಎಣ್ಣೆಯಲ್ಲಿ ೨ ಕಡೆ ಕಂದು ಬಣ್ಣ ಬರುವವರೆಗೂ ಕರಿಯಿರಿ. ಈಗ ರುಚುಯಾದ ಬ್ರೆಡ್ ಪಕೋಡ ಸವಿಯಲು ಸಿದ್ದ.