ಬ್ರೆಡ್ ಪಕೋಡ

ಬೇಕಾಗುವ ಪದಾರ್ಥಗಳು:

  • ಕಡ್ಲೆಹಿಟ್ಟು – ೧ ಲೋಟ
  • ಉಪ್ಪು – ರುಚಿಗೆ ತಕ್ಕಷ್ಟು
  • ಅಚ್ಚಖಾರದಪುಡಿ – ೨ ಚಮಚ
  • ಇಂಗಿನಪುಡಿ/ಓಂಕಾಳು – ಸ್ವಲ್ಪ
  • ಹೆಚ್ಚಿದ ಕರಿಬೇವು – ಸ್ವಲ್ಪ
  • ಹೆಚ್ಚಿದ ಕೊತ್ತಂಬರಿಸೊಪ್ಪು – ಸ್ವಲ್ಪ
  • ಮೈದಾಹಿಟ್ಟು – ೧ ಚಮಚ
  • ಚಿಕ್ಕದಾಗಿ ಹೆಚ್ಚಿದ ಈರುಳ್ಳಿ – ೧
  • ಕಾಯಿಸಿದ ಎಣ್ಣೆ – ೨ ಚಮಚ
  • ಸೋಡಾ – ಚಿಟಿಕೆಯಷ್ಟು

ಇತರೆ:
ಬ್ರೆಡ್, ಕರಿಯಲು ಎಣ್ಣೆ.

ವಿಧಾನ: ಮೇಲೆ ಕೊಟ್ಟಿರುವ ಪದಾರ್ಥಗಳಿಗೆ ತಕ್ಕಷ್ಟು ನೀರುಹಾಕಿ ಕಲೆಸಿ, ಇದರಲ್ಲಿ ಚೌಕಾಕಾರದಲ್ಲಿ ಅಥವಾ ತ್ರಿಕೋನಾಕಾರದಲ್ಲಿ ಕತ್ತರಿಸಿದ ಬ್ರೆಡ್ ಅದ್ದಿ ಎಣ್ಣೆಯಲ್ಲಿ ಕರಿಯಬೇಕು. ಅಲಂಕಾರಕ್ಕೆ ಈರುಳ್ಳಿ, ಸೌತೆಕಾಯಿ, ಟೊಮೊಟೊ ಗಾಲಿಗಾಲಿ ಆಕಾರದಲ್ಲಿ ಕತ್ತರಿಸಿ ಇಡಬಹುದು.