ಬ್ರೆಡ್ ಉತ್ತಪ್ಪ

ಹಿಟ್ಟು ತಯಾರಿಸಲು ವಿಧಾನ:
ಬ್ರೆಡ್ ಅನ್ನು ಮೊಸರಲ್ಲಿ ನೆನೆಸಿ, ನಂತರ ಮಿಕ್ಸಿಯಲ್ಲಿ ರುಬ್ಬಿ, ನೀರಿನಲ್ಲಿ ಕದಡಿದ ಅಕ್ಕಿಹಿಟ್ಟು ಮತ್ತು ರುಚಿಗೆ ಉಪ್ಪು ಹಾಕಿ ಕಲೆಸಿದರೆ ಹಿಟ್ಟು ತಯಾರಾಗುತ್ತದೆ.

ಮಸಾಲೆ ಪಲ್ಯಕ್ಕೆ:
ಒಗ್ಗರಣೆಗೆ ಎಣ್ಣೆ ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ ಹೆಚ್ಚಿದ ಟೊಮೊಟೊ, ತುರಿದ ಕ್ಯಾರೆಟ್ ಹಾಕಿ ಬಾಡಿಸಿ. ಇಂಗಿನಪುಡಿ, ಅಚ್ಚಖಾರದಪುಡಿ, ಉಪ್ಪು, ಸಕ್ಕರೆ, ಕೊತ್ತಂಬರಿಸೊಪ್ಪು ಹಾಕಿ ಬಾಡಿಸಿದರೆ ಮಸಾಲೆಪಲ್ಯ ತಯಾರಾಗುತ್ತದೆ.
ವಿಧಾನ:
ಕಾದ ತವಾಮೇಲೆ ಹಿಟ್ಟನ್ನು ದಪ್ಪಗೆ ಹೊಯ್ದು ತಯಾರಾದ ಮಸಾಲೆಪಲ್ಯ ಸವರಿ ಬೇಯಿಸಬೇಕು.