ಬ್ರೆಜಿಲ್ ಗಲಭೆ ಮೋದಿ ಕಳವಳ

ನವದೆಹಲಿ,ಜ.೯-ಬ್ರೆಜಿಲ್‌ನ ಸಂಸತ್ತು, ಸುಪ್ರೀಂಕೋರ್ಟ್ ಸೇರಿದಂತೆ ಮತ್ತಿತರ ಕಡೆ ನಡೆದ ಗಲಭೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು “ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಬೇಕು” ಎಂದು ಒತ್ತಿ ಹೇಳಿದ್ದಾರೆ.”ಬ್ರೆಸಿಲಿಯಾದಲ್ಲಿ ರಾಜ್ಯ ಸಂಸ್ಥೆಗಳ ವಿರುದ್ಧ ಗಲಭೆ ಮತ್ತು ವಿಧ್ವಂಸಕ ಸುದ್ದಿಗಳ ಬಗ್ಗೆ ತೀವ್ರ ಕಳವಳವಿದೆ. ಬ್ರೆಜಿಲ್ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ.ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬೆಂಬಲಿಗರು ರಾಷ್ಟ್ರೀಯ ಕಾಂಗ್ರೆಸ್, ಅಧ್ಯಕ್ಷೀಯ ಅರಮನೆ ಮತ್ತು ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಗಂಟೆಗಳ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಬಂಧ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರಿಗೆ ಟ್ಯಾಗ್ ಮಾಡಿರುವ ಟ್ವಿಟ್ಟರ್‍ನಲ್ಲಿ ಈ ವಿಷಯ ತಿಳಿಸಿದ್ದಾರೆ.

ದಾಳಿ ಖಂಡನೆ:

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬೆಂಬಲಿಗರು ನಡೆಸಿದ ದಾಳಿಯನ್ನು ಬ್ರೆಜಿಲ್ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಗಲಭೆಗಳನ್ನು “ಫ್ಯಾಸಿಸ್ಟ್” ದಾಳಿ ಎಂದು ಖಂಡಿಸಿದ್ದಾರೆ.ಈ ನಡುವೆ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಹಿಂಸಾಚಾರದಲ್ಲಿ ಯಾವುದೇ ಪಾತ್ರವನ್ನು ನಿರಾಕರಿಸಿದ್ದಾರೆ ಮತ್ತು “ದರೋಡೆ ಮತ್ತು ಆಕ್ರಮಣಗಳನ್ನು” ಖಂಡಿಸಿದ್ದಾರೆ.ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಜೈರ್ ಬೋಲ್ಸನಾರೊ ಅವರನ್ನು ಸೋಲಿಸಿದ ನಂತರ ಎಡಪಂಥೀಯ ನಾಯಕ ೭೭ ವರ್ಷದ ಲೂಲಾ ಅವರು ಒಂದು ವಾರದ ಹಿಂದೆ ಅಧಿಕಾರ ವಹಿಸಿಕೊಂಡಿದ್ದಾರೆ.ಅಧ್ಯಕ್ಷ ಲೂಲಾ ಅವರು ಗಲಭೆಯನ್ನು ಪ್ರಚೋದಿಸಿದರು ಎಂಬ “ಆಧಾರರಹಿತ” ಆರೋಪಗಳನ್ನು ಬೋಲ್ಸನಾರೊ ತಿರಸ್ಕರಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಬ್ರೆಜಿಲ್‌ನಿಂದ ಅಮೇರಿಕಾದ ರಾಜ್ಯವಾದ ಫೊ?ಲೀರಿಡಾಕ್ಕೆ ತೆರಳಿದ ಮಾಜಿ ಅಧ್ಯಕ್ಷ ಲೂಲಾ “ಶಾಂತಿಯುತ ಪ್ರತಿಭಟನೆಗಳ” ಹಕ್ಕನ್ನು ಸಹ ಸಮರ್ಥಿಸಿಕೊಂಡಿದ್ದಾರೆ.