
ನವದೆಹಲಿ,ಸೆ.೧೦- ಭಾರತದ ಒಂದು ವರ್ಷದ ಜಿ-೨೦ ಅಧ್ಯಕ್ಷತೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಜಿ-೨೦ ಅಧ್ಯಕ್ಷ ಸ್ಥಾನವನ್ನು ಇಂದಿಲ್ಲಿ ಹಸ್ತಾಂತರ ಮಾಡಿದರು.
ಇಂಡೊನೋಷಿಯಾದಲ್ಲಿ ಕಳೆದ ವರ್ಷ ನಡೆದ ಅಧ್ಯಕ್ಷ ಸ್ಥಾನವನ್ನು ಅಲ್ಲಿನ ಅಧ್ಯಕ್ಷ ಜೋಕೋ ವಿಡೋಡೋ ಅವರಿಂದ ಸ್ವೀಕರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ೬೦ಕ್ಕೂ ಹೆಚ್ಚು ನಗರಗಳಲ್ಲಿ ೨೦೦ಕ್ಕೂ ಅಧಿಕ ಸಭೆ ನಡೆಸಿದ್ದರು.
ದೆಹಲಿಯಲ್ಲಿ ಜಿ-೨೦ ಶೃಂಗಸಭೆಯ ಎರಡನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಒಂದು ವರ್ಷದ ಅವಧಿಗೆ ಜಿ-೨೦ ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್‌ಗೆ ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಿ-೨೦ ಅಧ್ಯಕ್ಷತೆಯ ದಂಡ ಹಸ್ತಾಂತರಿಸಲು ಖುಷಿ ಆಗುತ್ತಿದೆ. ಬ್ರೆಜಿಲ್ ಅಧ್ಯಕ್ಷತೆಯಲ್ಲಿ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ
ಜಿ-೨೦ ಅಧ್ಯಕ್ಷತೆ ಸ್ವೀಕರಿಸಿ ಮಾತನಾಡಿದ ಬ್ರೆಜಿಲ್‌ನ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ ಸಂಪತ್ತು ಹೆಚ್ಚು ಕೇಂದ್ರೀಕೃತವಾಗಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ, ಇದರಲ್ಲಿ ಲಕ್ಷಾಂತರ ಜನರು ಇನ್ನೂ ಹಸಿವಿನಿಂದ ಬಳಲುತ್ತಿದ್ದಾರೆ, ಅಲ್ಲಿ ಸುಸ್ಥಿರ ಅಭಿವೃದ್ಧಿಗೆ ಯಾವಾಗಲೂ ಬೆದರಿಕೆ ಇದೆ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕಾಗಿದೆ ಎಂದಿದ್ಧಾರೆ.
ಸರ್ಕಾರಿ ಸಂಸ್ಥೆಗಳು ಇನ್ನೂ ವಾಸ್ತವವನ್ನು ಪ್ರತಿಬಿಂಬಿಸುತ್ತವೆ. ಕಳೆದ ಶತಮಾನದ ಮಧ್ಯಭಾಗದಲ್ಲಿ, ಅಸಮಾನತೆಯ ಸಮಸ್ಯೆಯನ್ನು ಪರಿಹರಿಸಿದರೆ ಮಾತ್ರ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.
ಆದಾಯದ ಅಸಮಾನತೆ, ಆರೋಗ್ಯ, ಶಿಕ್ಷಣ, ಆಹಾರ, ಲಿಂಗ ಮತ್ತು ಜನಾಂಗದ ಪ್ರವೇಶ ಮತ್ತು ಪ್ರಾತಿನಿಧ್ಯದ ಮೂಲ ಈ ವೈಪರೀತ್ಯಗಳನ್ನು ಸರಿ ಪರಿಸುವ ಅಗತ್ಯ ಮತ್ತು ಅನಿವಾರ್ಯತೆ ನಮ್ಮೆಲ್ಲರ ಮುಂದೆ ಇದೆ ಎಂದು ತಿಳಿಸಿದ್ದಾರೆ.
ಭಾರತದಿಂದ ಬ್ರೆಜಿಲ್‌ಗೆ ಜಿ-೨೦ ಅಧ್ಯಕ್ಷ ಸ್ಥಾನ
- ಜಿ-೨೦ ಶೃಂಗಸಭೆ ಎರಡನೇ ದಿನ ಅಧ್ಯಕ್ಷತೆ ಹಸ್ತಾಂತರ
- ಪ್ರಧಾನಿ ನರೇಂದ್ರ ಮೋದಿ ಅವರಿಂದ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ವರ್ಗಾವಣೆ
- ಮುಂದಿನ ಒಂದು ವರ್ಷ ಜಿ-೨೦ ಅವಧಿ ಬ್ರೆಜಿಲ್ ಪಾಲು
- ಅಧ್ಯಕ್ಷ ಸ್ವೀಕರಿಸಿದ ಬ್ರೆಜಿಲ್ ಅಧ್ಯಕ್ಷರು ಅಸಮಾನತೆ ನಿವಾರಣೆಗೆ ಪಣ
ಪ್ರಮುಖ ನಿರ್ಧಾರ ಅಂಗೀಕಾರ
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ನೆರವು, ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸುಧಾರಣೆ, ಕ್ರಿಪೊ?ಟೀಕರೆನ್ಸಿಗೆ ಹೊಸ ನಿಯಮಗಳು, ಆಹಾರ ಮತ್ತು ಇಂಧನ ಭದ್ರತೆ, ಹವಾಮಾನ ಬದಲಾವಣೆ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳ ಮೇಲೆ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.
ದೆಹಲಿಯಲ್ಲಿ ನಡೆದ ಎರಡು ದಿನಗಳ ಜಿ-೨೦ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಹಲವು ಮಹತ್ವದ ಮತ್ತು ಜಾಗತಿಕ ಒಳಿತಿಗೆ ಪೂರಕವಾಗುವ ನಿರ್ಧಾರ ಕೈಗೊಂಡಿದ್ದಾರೆ.