ಬ್ರಿಲಿಯಂಟ್ ಶಾಲಾ ಶಿಕ್ಷಕನಿಗೆ ಶಿಕ್ಷಕ ಸೇವಾ ರತ್ನ ಪ್ರಶಸ್ತಿ

ತಾಳಿಕೋಟೆ:ಅ.17: ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ದೃಶ್ಯಬಿಂಬ ಕಲಾ ಪ್ರತಿಷ್ಠಾನ ವಿಜಯಪುರ ಸಂಸ್ಥಾಪಕ ಅಧ್ಯಕ್ಷರಾಗಿ ಸಮಾಜಕ್ಕೆ ಸಾಂಸ್ಕøತಿಕ ಮತ್ತು ಕಲಾತ್ಮಕ ಸೇವೆ ಸಲ್ಲಿಸುತ್ತಿರುವ ಸತೀಶ ಕೇಮಶೆಟ್ಟಿ ಯವರಿಗೆ ಶಿಕ್ಷಕ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಚಿತ್ರಕಲಾ ಶಿಕ್ಷಣ ಕ್ಷೇತ್ರದಲ್ಲಿ ಸತೀಶ ಕೇಮಶೆಟ್ಟಿ ಅವರು ಅವಿರತವಾಗಿ ಶ್ರಮಿಸುತ್ತಿದ್ದು ಇವರ ಸೇವೆ ಗಣನೀಯವಾಗಿದೆ ಇವರು ಶಿಕ್ಷಣ ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಸೃಜನಶೀಲ ಕ್ರಿಯಾತ್ಮಕ ಶಿಕ್ಷಕರನ್ನು ಪಡೆದಿರುವುದು ನಮಗೆ ನಿಜಕ್ಕೂ ಹೆಮ್ಮೆಯ ಸಂಗತಿ ಇವರ ಅಪಾರ ಕಲಾತ್ಮಕ ಜ್ಞಾನದಿಂದ ಸಮಾಜ, ಕಲಾತ್ಮಕ ಶಿಕ್ಷಣ, ಸಂಸ್ಕøತಿ ಲೋಕವು ಉಜ್ವಲಗೊಂಡಿದೆ. ಇವರಲ್ಲಿರುವ ಅದ್ವಿತೀಯ ಪ್ರತಿಭೆಯನ್ನುಗುರುತಿಸಿ ನಮ್ಮ ಕಸ್ತೂರಿ ಸಿರಿಗನ್ನಡ ವೇದಿಕೆಯು 15 ಅಕ್ಟೋಬರ್ 2023 ರಂದು ವಿಶ್ವ ಶಿಕ್ಷಕರ ದಿನಾಚರಣೆ ಅಂಗವಾಗಿ ಸತೀಶ ಕೇಮಶೆಟ್ಟಿ ಅವರಿಗೆ ಶಿಕ್ಷಕ ಸೇವಾ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ವೇದಿಕೆ ಸಂಯೋಜಕರಾದ ಕವಿತ್ತ ಕರ್ಮಮಣಿ ಪ್ರೊ. ಐ. ಊ. ಪೆಂಡಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ದೇಶಾದ್ಯಂತ ಕರ್ನಾಟಕ ರಾಜ್ಯವು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ 100 ಶಿಕ್ಷಕರ ಅಪಾರ ಜ್ಞಾನ ಮತ್ತು ಅವರು ಸಮಾಜಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಶಿಕ್ಷಕ ಸತೀಶ ಕೇಮಶೆಟ್ಟಿ ಅವರು ಮೂಲತಃ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಯಾಳವಾರ ಗ್ರಾಮದವರಾಗಿದ್ದು ಕಳೆದ ಎರಡು ವರ್ಷಗಳಿಂದ ತಾಳಿಕೋಟೆಯ ಮೈಲೇಶ್ವರ ಕ್ರಾಸ್‍ನಲ್ಲಿಯ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.