ಬ್ರಿಮ್ಸ್ ಆಸ್ಪತ್ರೆಯಲ್ಲಿ ತಾಯಿ ಮಗುವಿನ ಜೀವ ಉಳಿಸಿದ ವೈದ್ಯರು

ಬೀದರ: ನ.29: ಬ್ರೀಮ್ಸ್ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲೇ ಕ್ಲಿಷ್ಟಕರ್ ಶಸ್ತ್ರಚಿಕಿತ್ಸೆ ಮಾಡಿ ತಾಯಿ ಹಾಗೂ ಮಗುವಿನ ಪ್ರಾಣ ಉಳಿಸಿದ್ದಾರೆ.

ಹೈದರಾಬಾದ್ ಕೇರ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞವೈದ್ಯ ಡಾ.ವಿಪಿನ್ ಗೋಯಲ್ ನೇತೃತ್ವದಲ್ಲಿ ಡಾ ಉಮಾ ದೇಶಮುಖ.ಡಾ.ಸಂಗಮೇಶ ಹಾಗೂ ಡಾ.ಪ್ರವೀಣ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಬೆನ್ನುಮೂಳೆಗೆ ಅರಿವಳಿಕೆ ನೀಡಿ ಶಸ್ತ್ರಚಿಕಿತ್ಸೆ ಆರಂಭಿಸಿ ಗರ್ಭಾಶಯದ ಭಾಗವನ್ನು ಕತ್ತರಿಸಿ ಮಗುವನ್ನು ಹೊರಗೆ ತೆಗೆಯಲಾಗಿದೆ. ಈ ಮೂಲಕ ತಾಯಿ ಹಾಗೂ ಮಗುವಿನ ಜೀವ ಉಳಿಸಲಾಗಿದೆ. ಚನ್ನು, ಶಿವರಾಜ್, ವಿಜಯಕುಮಾರ ವೈದ್ಯರಿಗೆ ನೆರವಾದರು.

ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಗೆ 4 ಲಕ್ಷ ಖರ್ಚು ಆಗುತ್ತಿತ್ತು. ಬ್ರಿಮ್ಸ್‍ನಲ್ಲಿ ಉಚಿತವಾಗಿ ಬಡ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಡಾ. ವಿಪಿನ್ ಗೋಯಲ್ ತಿಳಿಸಿದ್ದಾರೆ.