ಬ್ರಿಮ್ಸ್ ಆಮ್ಲಜನಕ ಘಟಕಕ್ಕೆ ಕೆ.ಎಸ್ಐ.ಐ.ಡಿ.ಸಿ ವತಿಯಿಂದ1ಕೋಟಿ ಅನುದಾನ

ಬೀದರ:ಜೂ.7: ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಲಿರುವ ಆಮ್ಲಜನಕ ಘಟಕಕ್ಕೆ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ₹1 ಕೋಟಿ ಅನುದಾನ ಒದಗಿಸಿದೆ.

‘ಈಗಾಗಲೇ ಜಿಲ್ಲಾಧಿಕಾರಿ ಖಾತೆಗೆ ಅನುದಾನ ಜಮಾ ಮಾಡಲಾಗಿದೆ’ ಎಂದು ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಘಟಕದಲ್ಲಿ 60 ಎಲ್‍ಪಿಎಂ ಆಮ್ಲಜನಕ ಉತ್ಪಾದನೆಯಾಗಲಿದೆ. ನಿತ್ಯ 135 ರಿಂದ 140 ಜಂಬೋ ಸಿಲಿಂಡರ್‌ಗಳು ಭರ್ತಿಯಾಗಲಿವೆ’ ಎಂದು ಹೇಳಿದರು.