ಬ್ರಿಮ್ಸ್‍ಗೆ ಗ್ಲುಕೊಮೀಟರ್ ದೇಣಿಗೆ

ಬೀದರ:ಮೇ.29: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಗೆ ಗ್ಲುಕೊಮೀಟರ್ ಹಾಗೂ ಹ್ಯಾಂಡ್ ಗ್ಲೌಸ್‍ಗಳನ್ನು ದೇಣಿಗೆಯಾಗಿ ನೀಡಿದೆ.
ಕ್ಲಬ್ ಪದಾಧಿಕಾರಿಗಳು ನಗರದಲ್ಲಿ ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಶೆಟಕಾರ ಅವರಿಗೆ 12 ಗ್ಲುಕೊಮೀಟರ್ ಮತ್ತು 10 ಬಾಕ್ಸ್ ಹ್ಯಾಂಡ್ ಗ್ಲೌಸ್‍ಗಳನ್ನು ಹಸ್ತಾಂತರಿಸಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗಲು ಬ್ರಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆಗಳನ್ನು ನೀಡಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ತಿಳಿಸಿದರು.
ಕ್ಲಬ್‍ನಿಂದ ಬ್ರಿಮ್ಸ್ ಆಸ್ಪತ್ರೆಗೆ ಹಿಂದೆ ಮೂರು ಆಕ್ಸಿಜನ್ ಕಾನ್ಸೆಂಟ್ರೇಟರ್ ಯಂತ್ರ, 24 ಪಲ್ಸ್ ಆಕ್ಸಿಮೀಟರ್, 10 ಇನ್‍ಫ್ರಾರೆಡ್ ಥರ್ಮೋ ಮೀಟರ್ ಹಾಗೂ 10 ಡಿಜಿಟಲ್ ಬ್ಲಡ್ ಪ್ರೆಶರ್ ಮೀಟರ್‍ಗಳನ್ನು ದೇಣಿಗೆ ರೂಪದಲ್ಲಿ ಕೊಡಲಾಗಿದೆ ಎಂದು ಹೇಳಿದರು.
ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಬಡ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರೆಯಲಿ ಎನ್ನುವುದೇ ವೈದ್ಯಕೀಯ ಸಲಕರಣೆಗಳ ದೇಣಿಗೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಖಜಾಂಚಿ ಡಾ. ರಿತೇಶ ಸುಲೆಗಾಂವ್, ಸದಸ್ಯ ಡಾ. ವಿವೇಕ ನಿಂಬೂರ ಮೊದಲಾದವರು ಇದ್ದರು.