ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಮೊದಲಿಗರು ಬಾಲಗಂಗಾಧರ್ ತಿಲಕ್: ಆಂದೋಲ ಶ್ರೀಗಳು

ಸೇಡಂ,ಸೆ,05: ಸ್ವಾತಂತ್ರ ಪೂರ್ವದಲ್ಲಿ ಮುಸ್ಲಿಂ ರಾಷ್ಟ್ರದ ದೊರೆಗಳಿಂದ ಭಾರತದಲ್ಲಿನ ಸಂಪತ್ತು ಲೂಟಿ ಮಾಡುತ್ತಿದ್ದರು ಅಂದಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್, ಕಿತ್ತೂರಿನ ಚೆನ್ನಮ್ಮ, ಝಾನ್ಸಿ ಲಕ್ಷ್ಮೀಬಾಯಿ, ಒಣಕೆ ಓಬವ್ವ, ಹಲವರು ದೇಶದ ಸಂಪತ್ತು ತಡೆಯುವಲ್ಲಿ ಹೆಸರುವಾಸಿಯಾದವರು ಅದರ ಜೊತೆಗೆ ಆರು ಜನ ಬ್ರಿಟಿಷರಿಂದ ದೇಶಕ್ಕೆ ನುಗ್ಗಿ ವ್ಯಾಪಾರದ ಮೂಲಕ ದೇಶವನ್ನೇ ಆಡಳಿತ ನಡೆಸುತ್ತಿರುವ ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರಕ್ಕಾಗಿ ಮೊಟ್ಟ ಮೊದಲು ಪ್ರತಿ ಓಣಿಗಳಲ್ಲಿ ಜನರನ್ನು ಒಗ್ಗೂಡಿಸಿ ಗಣೇಶ ಪ್ರತಿಷ್ಠಾಪಿಸಿ ಸ್ವಾತಂತ್ರದ ಕಿಚ್ಚು ಹಚ್ಚಿದ ಕೀರ್ತಿ ಬಾಲ್ ಗಂಗಾಧರ್ ತಿಲಕರಿಗೆ ಸಲ್ಲುತ್ತದೆ ಎಂದು ಶ್ರೀರಾಮ ಸೇನೆಯ ರಾಜ್ಯಧ್ಯಕ್ಷರು ಆಂದೋಲದ ಪೂಜ್ಯಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ದುಗನೂರ್ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆಯ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು ದುಗನೂರ ಗ್ರಾಮದ ಹಿರಿಯರು ಯುವಕರು ಗಣೇಶ ಪ್ರತಿಷ್ಠಾಪಿಸುವ ಮೂಲಕ ಹಿಂದೂ ಧರ್ಮದ ಆಚರಣೆಗಳು ಪ್ರಜ್ವಲಗೊಳಿಸುವುದರ ಜೊತೆಗೆ ಒಗ್ಗಟ್ಟಿನ ಬಲ ತೋರಿಸುತಿರುವುದು ಹೆಮ್ಮೆಯ ವಿಷಯ ಎಂದರು. ಶಿವಕುಮಾರ್ (ಜಿಕೆ) ಪಾಟೀಲ್ ತೇಲ್ಕೂರ ಹಾಗೂ ಶ್ರೀರಾಮ ಸೇನಾ ತಾಲೂಕ ಅಧ್ಯಕ್ಷ ಮೌನೇಶ್ ಬಡಿಗೇರ್ ಕಾರ್ಯಕ್ರಮ ಉದ್ದೇಶ ಮಾತನಾಡಿದರು.

ಗ್ರಾಮದ ಕ್ರಾಸ್ ನಿಂದ ಆಂದೋಲ ಶ್ರೀಗಳೊಂದಿಗೆ ಜಿಕೆ ಶಿವಕುಮಾರ್ ಪಾಟೀಲ್ ತೇಲ್ಕೂರ, ನಾಗೇಂದ್ರಪ್ಪ ಸಾಹುಕಾರ್, ವಿನೋದ್ ಎನ್ ಸಾಹುಕಾರ, ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯನ್ನು ಶರಣಬಸವೇಶ್ವರ ದೇವಸ್ಥಾನದ ವೇದಿಕೆ ವರೆಗೆ ಮಕ್ಕಳ ಕೋಲಾಟ, ಹಲ್ಲಿಗೆ ಕುಣಿತಾ ಮೂಲಕ ಬರಮಾಡಿಕೊಂಡರು.

ಈ ವೇಳೆಯಲ್ಲಿ ಗ್ರಾಮದ ಮಹಿಳೆಯರು ಯುವಕರು ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಜೊತೆಗೆ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಕಾರ್ಯದರ್ಶಿ ಶ್ರೀಕಾಂತ್ ರೆಡ್ಡಿ, ಸದಸ್ಯರಾದ ಸತೀಶ್ ಕುಡ್ದಳ್ಳಿ,ಕಾರ್ಯಕ್ರಮದಲ್ಲಿ ಬಂದಂತಹ ಭಕ್ತರಿಗೆ ಅನ್ನ ಸಮರ್ಪಣೆ ಮಾಡಿಸಿದವರು ಶರಣು ಕುಡ್ಡಳ್ಳಿ, ಸಿದ್ದನಗೌಡ ಪೆÇಲೀಸ್ ಪಾಟೀಲ್, ರಾಮರೆಡ್ಡಿ,ಗಣೇಶ ಉತ್ಸವ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಂತ ಶರಣು ಮುನ್ನೂರು ಅರುಣ್ ಮುನ್ನೂರು, ನಾಗರಾಜ್ ಕಂಬಾರ, ಸಂಗಮೇಶ ಕೆರಳಿ, ಸಿದ್ದು ಕೆರಳಿ, ಹಾಗೂ ಸಂಗೀತ ರಸಮಂಜರಿ ಕರಗೂಳಿ , ನಿರೂಪಣೆ ದತ್ತು ಮುದುಕಲ್, ವಂದನಾರ್ಪಣೆ ವಿನೋದ್ ಎನ್ ಸಾಹುಕಾರ ನೆರವೇರಿಸಿದರು.

ಪ್ರತಿ ವರ್ಷದಂತೆ ಈ ವರ್ಷ ಕೂಡ ವಿಘ್ನೇಶ್ವರನ ಪ್ರತಿಷ್ಠಾಪನೆ ಮಾಡಿದೆವು ಐದು ದಿನಗಳ ನಂತರ ವಿಸರ್ಜನೆ ಮಾಡುತ್ತಿದ್ದೇವೆ ಆದರೆ ಈ ಬಾರಿ ನನ್ನ ಮೊಮ್ಮಗನ ಆಸೆಯಂತೆ ಆಂದೋಲ ಶ್ರೀಗಳನ್ನು ಕರೆಸಿ ವಿಸರ್ಜನಾ ಸಂದರ್ಭದಲ್ಲಿ ಶ್ರೀಗಳ ಆಶೀರ್ವಚನ ಪಡೆದುಕೊಂಡೆವು.

ನಾಗೇಂದ್ರಪ್ಪ ಸಾಹುಕಾರ್ ದುಗನೂರ ಗ್ರಾಮದ ಹಿರಿಯರು ಮುಖಂಡರು.

ಗ್ರಾಮಸ್ಥರು ಒಗ್ಗಟ್ಟಿನಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮೂಲಕ ಒಗ್ಗಟ್ಟಿನ ಮನೋಭಾವನೆ ಜೊತೆಗೆ ಹಿಂದೂ ಧರ್ಮದ ಚಟುವಟಿಕೆಗಳು ಗ್ರಾಮಸ್ಥರು ಪಾಲಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ ಕಾರ್ಯಕ್ರಮ ಆಯೋಜನೆ ಮಾಡಿ ನಮ್ಮನ್ನು ಬರಮಾಡಿಕೊಂಡಿದ್ದಕ್ಕೆ ಎಲ್ಲರಿಗೂ ಕೃತಜ್ಞತೆಗಳು.

ಶಿವಕುಮಾರ್ ಜಿಕೆ ಪಾಟೀಲ್ ತೇಲ್ಕೂರ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಸೇಡಂ