ಬ್ರಿಟನ್ ವಿಮಾನ ಸಂಚಾರಕ್ಕೆ ಕೇಂದ್ರದ ಒಪ್ಪಿಗೆ

ನವದೆಹಲಿ,ಜ.೬- ಇಂಗ್ಲೆಂಡ್‌ನಿಂದ ನಾಗರಿಕ ವಿಮಾನಯಾನವನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಅವರು ಪುರಿ ತಿಳಿಸಿದ್ದಾರೆ.
ನಮ್ಮ ವೈದ್ಯಕೀಯ ತಂಡದೊಂದಿಗೆ ಲಭ್ಯವಿರುವ ಮಾಹಿತಿಗಳ ಮೌಲ್ಯಮಾಪನದ ಆಧಾರದ ಮೇಲೆ ಭಾರತ ಮತ್ತು ಯುನೈಟೆಡ್ ಕಿಂಗ್ ಡಮ್ ನಡುವಿನ ನಾಗರಿಕ ವಿಮಾನಯಾನ ಸಂಚಾರವನ್ನು ಸೀಮಿತ ಪುನರಾರಂಭದ ಕುರಿತು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ.
ಪ್ರಯಾಣಕ್ಕೆ ೭೨ ಗಂಟೆಗಳ ಮುಂಚಿತವಾಗಿ ಮಾಡಿದ ಆರ್ ಟಿ-ಪಿಸಿಆರ್ ಪರೀಕ್ಷೆಯು ಸಾಕಾಗುವುದಿಲ್ಲ ಎಂದು ಪುರಿ ತಿಳಿಸಿದ್ದಾರೆ.
“ಆದ್ದರಿಂದ, ಆಗಮನದ ಮೇಲೆ ಮತ್ತೆ ಪರೀಕ್ಷಿಸುವುದು ನಾವು ಕಡ್ಡಾಯಗೊಳಿಸಿದ್ದೇವೆ. ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ. ಯುಕೆಗೆ ಒಟ್ಟು ವಿಮಾನಗಳ ಸಂಖ್ಯೆಯನ್ನು ವಾರಕ್ಕೆ ೬೦ ರಿಂದ ೩೦ ರವರೆಗೆ ಕಡಿಮೆಗೊಳಿಸಲಾಗಿದೆ ಎಂದು ಅವರು ಹೇಳಿದರು.
“ಪರಿಸ್ಥಿತಿಯನ್ನು ನೋಡಿಕೊಂಡು ಹಾಗೂ ಬೇಡಿಕೆಯನ್ನು ಪರಿಗಣಿಸಿ ನಾವು ಮುಂದೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಜನವರಿ ೬ ರಿಂದ ಭಾರತ ಮತ್ತು ಯುಕೆ ನಡುವೆ ವಿಮಾನಗಳನ್ನು ಪುನರಾರಂಭಿಸುವುದಾಗಿ ಕೇಂದ್ರ ಸಚಿವರು ಈ ಹಿಂದೆ ಮಾಹಿತಿ ನೀಡಿದ್ದರು.
ಜನವರಿ ೬ರಿಂದ ಭಾರತ ಮತ್ತು ಯುಕೆ ನಡುವಿನ ವಿಮಾನಗಳ ಪುನರಾರಂಭವಾಗಲಿದೆ. ಭಾರತಕ್ಕೆ ಯುಕೆಗೆ. ಯುಕೆ ಭಾರತಕ್ಕೆ ಜನವರಿ ೮ರಂದು ಸೇವೆ ಆರಂಭಗೊಳ್ಳಲಿದೆ. ಪ್ರತಿ ವಾರ ೩೦ ವಿಮಾನಗಳು ಕಾರ್ಯನಿರ್ವಹಿಸಲಿವೆ. ತಲಾ ೧೫ ಭಾರತೀಯ ಮತ್ತು ಯುಕೆ ವಿಮಾನಗಳು ಸಂಚರಿಸಲಿವೆ. ಈ ವೇಳಾಪಟ್ಟಿ ೨೩ ಜನವರಿ ೨೦೨೧ ರವರೆಗೆ ಮಾನ್ಯವಾಗಿರುತ್ತದೆ. ಪರಿಶೀಲನೆಯ ನಂತರ ಮತ್ತಷ್ಟು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.