
ನವದೆಹಲಿ,ಜ.೩- ಬ್ರಿಟನ್ನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಬ್ರಿಟನ್ನಲ್ಲಿ ರೂಪಾಂತರ ಕೊರೊನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೊಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ಜ. ೮ ರಿಂದ ೩೧ರವರೆಗೆ ಬ್ರಿಟನ್ನಿಂದ ಭಾರತಕ್ಕೆ ವಿಮಾನಗಳ ಮೂಲಕ ಬರುವ ಪ್ರಯಾಣಿಕರಿಗೆ ನೆಗೆಟೀವ್ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಸ್ವಯಂ ಪಾವತಿಸುವ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿ ನಡೆಸಬೇಕು ಎಂದು ಸೂಚಿಸಲಾಗಿದೆ. ಬ್ರಿಟನ್ನಲ್ಲಿ ರೂಪಾಂತರ ಕೊರೊನಾ ಕಂಡು ಬಂದ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ವಿಮಾನ ಹಾರಾಟವನ್ನು ಡಿ. ೨೨ ರಂದು ಸ್ಥಗಿತಗೊಳಿಸಲಾಗಿತ್ತು. ಜ. ೬ ರಂದು ವಿಮಾನ ಹಾರಾಟ ಪುನರಾರಂಭಗೊಳ್ಳಲಿದೆ.
ಬ್ರಿಟನ್ನಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರ ಸೋಂಕು ೨೯ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಕಾಣಿಸಿಕೊಂಡಿದೆ.
ಆರೋಗ್ಯ ಸಚಿವಾಲಯದ ಮಾರ್ಗಸೂಚಿಯನ್ವಯ ಜ. ೮ ಮತ್ತು ೩೧ ನಡುವೆ ಪ್ರಯಾಣಿಸುವ ಪ್ರಯಾಣಿಕರು ದೇಶದ ವಿಮಾನ ನಿಲ್ದಾಣಗಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸ್ವಯಂ ಪಾವತಿಸಿದ ಆರ್ಟಿಪಿಸಿಆರ್ ಪರೀಕ್ಷೆಗಳಿಗೆ ಒಳ ಪಡಬೇಕಾಗುತ್ತದೆ.
ಪ್ರಯಾಣಿಕರಿಗೆ ಮಾರ್ಗಸೂಚಿ
- * ಯುಕೆಯಿಂದ ಪ್ರಯಾಣಿಸುವ ಎಲ್ಲ ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದ (www.newdelhiairport.in) * ಆನ್ಲೈನ್ ಪೋರ್ಟಲ್ನಲ್ಲಿ ಸ್ವಯಂ ಘೋಷಣೆ ಫಾರಂನ್ನು ನಿಗದಿತ ಪ್ರಯಾಣಕ್ಕೆ ೭೨ ಗಂಟೆಗಳ ಮೊದಲು
ಸಲ್ಲಿಸಬೇಕು. - * ಪ್ರಯಾಣಿಕರು ತಮ್ಮ ಆರ್ಟಿಪಿಸಿಆರ್ ಪರೀಕ್ಷೆಯ ನೆಗೆಟೀವ್ ವರದಿಯನ್ನು ತರಬೇಕು ಇದನ್ನು ಪ್ರಯಾಣ ಕೈಗೊಳ್ಳುವ ಮುನ್ನಾ ೭೨ ಗಂಟೆಗಳ ಒಳಗೆ ನಡೆಸಬೇಕು.
- * ವರದಿಯ ಪ್ರತಿಯನ್ನು ಪೋರ್ಟರ್ನಲ್ಲಿ ಅಪ್ಲೋಡ್ ಮಾಡಬೇಕು.
- * ಪ್ರಯಾಣಿಕರು ಬಂದ ನಂತರ ತಮ್ಮ ಸ್ವಂತ ವೆಚ್ಚದಲ್ಲಿ ಮತ್ತೆ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು.
- * ಆಗಮಿಸಿದ ನಂತರ ವೈರಾಣು ದೃಢಪಟ್ಟರೆ ಪ್ರಯಾಣಿಕರನ್ನು ನಿರ್ಬಂಧಿಸಲಾಗುತ್ತದೆ.
- * ಒಬ್ಬರಿಗೆ ಸೋಂಕು ದೃಢಪಟ್ಟರೂ ಸಹ ಪ್ರಯಾಣಿಕರು ಮತ್ತು ಇತರ ಸಂಪರ್ಕಗಳನ್ನೂ ಸಹ ನಿರ್ಬಂಧಿಸಬೇಕಾಗುತ್ತದೆ.